Gold Man: ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ‘ಗೋಲ್ಡ್ ಮ್ಯಾನ್’
ಕೊಂಡ ವಿಜಯ್ ಕುಮಾರ್ ಎಂಬ ಹೆಸರಿಗಿಂತ 'ಗೋಲ್ಡ್ ಮ್ಯಾನ್' ಎಂದೇ ಖ್ಯಾತಿ ಪಡೆದ ಇವರು ಶುಕ್ರವಾರ, ಮಾರ್ಚ್ 15 ರಂದು, ತಿರುಮಲದಲ್ಲಿ ಶ್ರೀವಾರಿಯ ವಿಐಪಿ ಬ್ರೇಕ್ ದರ್ಶನದಲ್ಲಿ ತಿರುಮಲ ವೆಂಕಟೇಶ್ವರ ಸ್ವಾಮಿಯ ಸೇವೆಯಲ್ಲಿ ಭಾಗಿಯಾದರು.
ಹೋಪ್ ಫೌಂಡೇಶನ್ ಅಧ್ಯಕ್ಷ ಕೊಂಡ ವಿಜಯ್ ಕುಮಾರ್ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಕೊಂಡ ವಿಜಯ್ ಕುಮಾರ್ ಎಂಬ ಹೆಸರಿಗಿಂತ ‘ಗೋಲ್ಡ್ ಮ್ಯಾನ್’ ಎಂದೇ ಖ್ಯಾತಿ ಪಡೆದ ಇವರು ಶುಕ್ರವಾರ ( ಮಾರ್ಚ್ 15) ತಿರುಮಲದಲ್ಲಿ ಶ್ರೀವಾರಿಯ ವಿಐಪಿ ಬ್ರೇಕ್ ದರ್ಶನದಲ್ಲಿ ಸ್ವಾಮಿಯ ಸೇವೆಯಲ್ಲಿ ಭಾಗಿಯಾದರು. ಸುಮಾರು ಹತ್ತು ಕಿಲೋ ತೂಕದ ಚಿನ್ನಾಭರಣಗಳನ್ನು ಧರಿಸಿ ಶ್ರೀಗಳಿಗೆ ಪೂಜೆ ಸಲ್ಲಿಸಿದರು. ದರ್ಶನ ಮುಗಿಸಿ ದೇವಸ್ಥಾನದಿಂದ ಹೊರ ಬಂದ ‘ಗೋಲ್ಡ್ ಮ್ಯಾನ್’ ಜೊತೆಗೆ ಸೆಲ್ಫಿ ತೆಗೆಯಲು ಜನಸಾಗರವೇ ಮುಗಿಬಿದ್ದಿತ್ತು.
ಕೊರಳಿನಲ್ಲಿ ವಿವಿಧ ವಿನ್ಯಾಸದ ಸರಗಳು, ಬೃಹತ್ ಲಾಕೆಟ್, ಮಣಿಕಟ್ಟು, ಹತ್ತು ಬೆರಳುಗಳಲ್ಲಿ ಹತ್ತು ಚಿನ್ನದ ಉಂಗುರಗಳು ಮತ್ತು ಕೈಗಡಿಯಾರ ಧರಿಸಿ ಬಂದ ವಿಜಯ್ ಕುಮಾರ್. ತಮ್ಮ ಹೋಪ್ ಫೌಂಡೇಶನ್ ಮೂಲಕ ನಿತ್ಯ ನೂರಾರು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದ್ದು, ಮುಂದೆ ಸಹಸ್ರಾರು ಜನರಿಗೆ ದರ್ಶನ ನೀಡುವ ಶಕ್ತಿಯನ್ನು ಸ್ವಾಮಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಮಾಧ್ಯಮಗಳ ಮುಂದೆ ಕೊಂಡ ವಿಜಯ್ ಕುಮಾರ್ ಮಾತನಾಡಿದರು.
ಇದನ್ನೂ ಓದಿ: ದೇವಾಲಯ ಧ್ವಂಸ ಮಾಡಲು ಬಂದ ವ್ಯಕ್ತಿ ದೇವರ ವಿಗ್ರಹದ ಮುಂದೆಯೇ ಸಾವು
ಈ ಪ್ರತಿಷ್ಠಾನದ ಮೂಲಕ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಗುತ್ತಿದೆ . ಸೇವಾ ಕಾರ್ಯಕ್ರಮಗಳೆಲ್ಲ ನನ್ನದೆ ವೈಯಕ್ತಿಕ ಹಣವಾಗಿದ್ದು, ಯಾರಿಂದಲೂ ದೇಣಿಗೆ ಸಂಗ್ರಹಿಸುತ್ತಿಲ್ಲ ಎಂದರು. ವೆಂಕಟೇಶ್ವರ ಸ್ವಾಮಿ ನನಗೆ ಇಂತಹ ದೊಡ್ಡ ಅವಕಾಶ ಕೊಟ್ಟಿದ್ದು ನನ್ನ ಅದೃಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇವರೊಂದಿಗೆ ಪ್ರತಿಷ್ಠಾನದ ಹಲವು ಸದಸ್ಯರು ಉಪಸ್ಥಿತರಿದ್ದರು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ