Viral Video: ಟ್ಯಾಟೂ ಹುಚ್ಚು; ಒಸಡಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ಮಹಿಳೆ
@liyanhai33 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಕಂಡಿದೆ. ವಿಡಿಯೋದಲ್ಲಿ ಯುವತಿಯ ಒಸಡಿನ ಮೇಲೆ ಟ್ಯಾಟೂ ಹಾಕುತ್ತಿರುವುದನ್ನು ಕಾಣಬಹುದು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟ್ಯಾಟೂ(Tattoo) ಹಾಕಿಸಿಕೊಳ್ಳುವುದನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಕೈ, ಕಾಲು, ಎದೆಯ ಮೇಲೆ, ಬೆನ್ನಿನ ಮೇಲೆಲ್ಲಾ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇದೀಗ ಯುವತಿಯೊಬ್ಬಳು ಒಸಡಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು, ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ಕಂಡು ಯುವತಿಯ ಟ್ಯಾಟೂ ಹುಚ್ಚಿಗೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
@liyanhai33 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಕಂಡಿದೆ. ವಿಡಿಯೋದಲ್ಲಿ ಯುವತಿಯ ಒಸಡಿನ ಮೇಲೆ ಟ್ಯಾಟೂ ಹಾಕುತ್ತಿರುವುದನ್ನು ಕಾಣಬಹುದು. ಮಾರ್ಚ್ 4ರಂದು ಅಪ್ಲೋಡ್ ಮಾಡಲಾದ ಈ ವಿಡಿಯೋಗೆ 6,471 ಜನರು ಲೈಕ್ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಒಸಡಿಗೆ ಟ್ಯಾಟೂ ಹಾಕಿಸಿಕೊಂಡ ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ರಸ್ತೆಯಿಂದ ಸೀದಾ ಮನೆಯ ಛಾವಣಿಗೆ, ಇದಕ್ಕೆ ಹೇಳುವುದು ಇಂತ ವಿಷಯದಲ್ಲಿ ಹುಡುಗಿಯರನ್ನು ನಂಬಬಾರದು
ಯುವತಿಯ ಒಸಡಿನ ಮೇಲೆ ಟ್ಯಾಟೂ ಹಾಕುತ್ತಿರುವ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕ ಸೌಂದರ್ಯವನ್ನು ಏಕೆ ಹಾಳು ಮಾಡುತ್ತಿದ್ದೀರಿ? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ