AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಸ್ತೆಯಿಂದ ಸೀದಾ ಮನೆಯ ಛಾವಣಿಗೆ, ಇದಕ್ಕೆ ಹೇಳುವುದು ಇಂತ ವಿಷಯದಲ್ಲಿ ಹುಡುಗಿಯರನ್ನು ನಂಬಬಾರದು 

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ಹಾಸ್ಯಮಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಂತಹ ದೃಶ್ಯಾವಳಿಗಳು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಂತೂ  ಖಂಡಿತ. ಸದ್ಯ ಅಂತಹದೊಂದು ವಿಡಿಯೋ ಇದೀಗ ಹರಿದಾಡುತ್ತಿದ್ದು, ಯುವತಿಯರಿಬ್ಬರು ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ, ನಿಯಂತ್ರಣ ತಪ್ಪಿದ ಸ್ಕೂಟಿ ಸೀದಾ ಮನೆಯ ಛಾವಣಿ ಮೇಲೆ ಹಾರಿದೆ.  ಪರಿಣಾಮವಾಗಿ ಸ್ಕೂಟರ್ ಸಮೇತ ಆ ಯುವತಿಯರಿಬ್ಬರೂ ಮನೆಯ ಛಾವಣಿ ಮೇಲೆ ಲಾಕ್ ಅಗಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. 

Viral Video: ರಸ್ತೆಯಿಂದ ಸೀದಾ ಮನೆಯ ಛಾವಣಿಗೆ, ಇದಕ್ಕೆ ಹೇಳುವುದು ಇಂತ ವಿಷಯದಲ್ಲಿ ಹುಡುಗಿಯರನ್ನು ನಂಬಬಾರದು 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Mar 14, 2024 | 12:42 PM

Share

ಯುವತಿಯರು ಮತ್ತು ಅವರ ಡ್ರೈವಿಂಗ್ ಶೈಲಿಗೆ ಹಲವರು ಜೋಕ್ ಮಾಡುತ್ತಿರುತ್ತಾರೆ. ಅವರುಗಳಿಗೆ ಸರಿಯಾಗಿ ವಾಹನ ಓಡಿಸಲು ಬರೋದಿಲ್ಲ ಅಂತೆಲ್ಲಾ ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ಈ ಡಾಡ್ಸ್ ಲಿಟಲ್ ಪ್ರಿನ್ಸೆಸ್ ಗಳ ಡ್ರೈವಿಂಗ್ ಗಳಿಗೆ ಸಂಬಂಧಿಸಿದ  ಟ್ರೋಲ್, ಮೀಮ್ ಗಳಂತಲೂ ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ಅತಿರೇಕವಾಗಿ ಕಂಡರೆ, ಕೆಲವೊಂದು ಟ್ರೋಲ್ಗಳು  ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಇದೀಗ ಅಂತಹದೊಂದು ವಿಡಿಯೋ ವೈರಲ್ ಆಗಿದ್ದು, ಯುವತಿಯರಿಬ್ಬರು ಸ್ಕೂಟರ್ ಓಡಿಸಲು ಹೋಗಿ, ಆ ಸ್ಕೂಟಿ ನಿಯಂತ್ರಣ ತಪ್ಪಿ ಸೀದಾ ಮನೆಯ ಛಾವಣಿ ಮೇಲೆ ನುಗ್ಗಿದೆ.

ಈ ಘಟನೆ ಇಂಡೋನ್ಯಾಷ್ಯಾದಲ್ಲಿ ನಡೆದಿದ್ದು, ಅಲ್ಲಿನ ಸ್ಥಳೀಯ ಯುವತಿಯರಿಬ್ಬರು ರಸ್ತೆಯ ಮೇಲೆ ವೇಗವಾಗಿ ಸ್ಕೂಟರ್ ಮೇಲೆ  ಹೋಗುತ್ತಿದ್ದಾಗ  ಸ್ಕೂಟಿಯ  ಬ್ರೇಕ್ ಫೆಲ್ಯೂರ್ ಆಗಿ, ನಿಯಂತ್ರಣ ತಪ್ಪಿದ ಆ ಸ್ಕೂಟರ್ ಸೀದಾ ಹೋಗಿ ರಸ್ತೆಯ ಪಕ್ಕದಲ್ಲಿನ ಮನೆಯ ಛಾವಣಿಯ ಮೇಲೆ ಹಾರಿದೆ. ಪರಿಣಾಮವಾಗಿ ಇಬ್ಬರು ಯುವತಿಯರು ಸ್ಕೂಟಿ ಸಮೇತ ಮನೆಯ ಛಾವಣಿ ಮೇಲೆ ಲಾಕ್ ಆಗಿದ್ದಾರೆ. ಈ ಯುವತಿಯರ ಸ್ಕೂಟರ್ ಸರ್ಕಸ್ ಗೆ ಮನೆಗೆ ಹಾಕಲಾಗಿದ್ದ ಹಂಚುಗಳು  ಪುಡಿ ಪುಡಿಯಾಗಿವೆ. ಈ ಕುರಿತ ವಿಡಿಯೋವೊಂದು ಇದೀಗ  ಸಖತ್ ವೈರಲ್ ಆಗಿದೆ.  @infojawabarat ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ  ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಯುವತಿಯರಿಬ್ಬರು ಸ್ಕೂಟರ್ ಸಮೇತ ಮನೆಯ ಛಾವಣಿ ಮೇಲೆ ಸಿಲುಕಿ ಹಾಕಿಕೊಂಡಿರುವ ದೃಶ್ಯವನ್ನು ಕಾಣಬಹುದು. ವೇಗವಾಗಿ ಸ್ಕೂಟರ್ ನಲ್ಲಿ ಯುವತಿಯರಿಬ್ಬರು ಬರುತ್ತಿದ್ದ ವೇಳೆ, ಅವರ ಸ್ಕೂಟಿ ನಿಯಂತ್ರಣ ತಪ್ಪಿ ಅಲ್ಲೇ ರಸ್ತೆ ಪಕ್ಕದಲ್ಲಿನ ಮನೆಯ ಛಾವಣಿ ಮೇಲೆ ಹಾರಿದೆ. ಪರಿಣಾಮವಾಗಿ ಸ್ಕೂಟಿ ಸಮೇತ ಯುವತಿಯರಿಬ್ಬರು ಛಾವಣಿ ಮೇಲೆ ಲಾಕ್ ಆಗಿದ್ದಾರೆ. ಅಲ್ಲಿಂದ ಕೆಳಗಿಳಿಯಲು ಒದ್ದಾಡುತ್ತಿದ್ದ ಆ ಯುವತಿಯರನ್ನು ನಂತರ ಸ್ಥಳೀಯರ ಸಹಾಯದಿಂದ ಕೆಳಗೆ ಇಳಿಸಲಾಯಿತು.

ಇದನ್ನೂ ಓದಿ: ಏನ್​​ ತಲೆ ತಾಯಿ ನಿಂದು, ಪ್ರೆಶರ್ ಕುಕ್ಕರ್ ಬಳಸಿ ಗಂಡನ ಬಟ್ಟೆ ಇಸ್ತ್ರಿ ಮಾಡಿದ ಪತ್ನಿ

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 14.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ.ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.  ಒಬ್ಬ ಬಳಕೆದಾರರು ʼಇದು ರೂಫ್ ಪಾರ್ಕಿಂಗ್ʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಇದು ಯಾವ ರೀತಿಯ ಡ್ರೈವಿಂಗ್ ದೇವರೆʼ ಎಂದು  ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹುಶಃ ಈ ಯುವತಿರು ಗೂಗಲ್ ಮ್ಯಾಪ್ ನೋಡಿ ಸ್ಕೂಟಿ ಓಡಿಸಿರಬೇಕುʼ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಇದಕ್ಕೆ ಹೇಳುವುದು ಇಂತ ವಿಷಯದಲ್ಲಿ ಹುಡುಗಿಯರನ್ನು ನಂಬಬಾರದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್