ದೆಹಲಿ: CBI ಕಸ್ಟಡಿಯಲ್ಲಿದ್ದ ಬರೋಬ್ಬರಿ 45 ಕೋಟಿ ರೂ. ಮೌಲ್ಯದ ಚಿನ್ನ ನಾಪತ್ತೆಯಾಗಿದೆ. ಈ ನಿಟ್ಟಿನಲ್ಲಿ CBI ವಿರುದ್ಧ ಪೊಲೀಸ್ ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್ ಆದೇಶ ನಿಡಿದೆ.
2012 ರಲ್ಲಿ ಚೆನ್ನೈನ ಸುರಾನ ಕಾರ್ಪೊರೇಷನ್ ಲಿಮಿಟೆಡ್ ಮೇಲೆ CBI ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಶೋಧ ಕಾರ್ಯದಲ್ಲಿ 400 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಆ 400 ಕೆ.ಜಿ ಪೈಕಿ 100 ಕೆ.ಜಿ ತೂಕದ ಚಿನ್ನದಗಟ್ಟಿ ಹಾಗೂ ಆಭರಣಗಳು ನಾಪತ್ತೆಯಾಗಿದೆ.
ಇದೀಗ, ಬಂಗಾರವನ್ನ ವಶಕ್ಕೆ ಪಡೆದಿದ್ದ ಸಿಬಿಐ ವಿರುದ್ಧ ಕಳ್ಳತನದ ಆರೋಪದಡಿ ಪ್ರಕರಣ ಏಕೆ ದಾಖಲಿಸಬಾರದೆಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ನಡುವೆ, ಇದರಿಂದ ತನ್ನ ಘನತೆಗೆ ಧಕ್ಕೆ ಉಂಟಾಗಲಿದ್ದು, ಸ್ಥಳೀಯ ಸಂಸ್ಥೆಗಳಿಂದ ತನಿಖೆ ನಡೆಸದಂತೆ ಸಿಬಿಐ ಮನವಿ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕೋರ್ಟ್ ಸಿಬಿಐಗೆ ಕೊಂಬಿದೆಯೇ? ಕಾನೂನಿನಲ್ಲಿ ಈ ರೀತಿಯ ವಿನಾಯಿತಿಗೆ ಅವಕಾಶವಿಲ್ಲ. ಇದೊಂದು ಅಗ್ನಿಪರೀಕ್ಷೆ. ಕಾನೂನು ಎಲ್ಲರಿಗೂ ಒಂದೇ ಎಂದು ಮದ್ರಾಸ್ ಹೈಕೋರ್ಟ್ ಉತ್ತರಿಸಿದೆ.
KR Market ನೈಟ್ ಬೀಟ್ ಪೊಲೀಸರಿಗೆ ಸಿಕ್ತು ರಾಶಿ ರಾಶಿ ಚಿನ್ನ, ಎಲ್ಲಿ.. ಎಲ್ಲಿ? ನೀವೂ ನೋಡಿ..
IMA ವಂಚನೆ: ನಾಳೆ ಸಂಜೆ 5ರವರೆಗೆ ಮಾಜಿ ಸಚಿವ ರೋಷನ್ ಬೇಗ್ CBI ಕಸ್ಟಡಿಗೆ
Published On - 1:52 pm, Sat, 12 December 20