
ಮಧುರೈ, ನವೆಂಬರ್ 4: ತಮಿಳುನಾಡಿನಲ್ಲೊಂದು (Tamil Nadu) ದುರಂತ ಘಟನೆ ನಡೆದಿದೆ. ಮಧುರೈನಲ್ಲಿ 7 ತಿಂಗಳ ಮಗುವೊಂದು ಬಿಸಿ ನೀರಿಗೆ ಬಿದ್ದ ಘಟನೆ ತೀವ್ರ ಆಘಾತವನ್ನುಂಟು (Shocking News) ಮಾಡಿದೆ. ಹಸುಗೂಸನ್ನು ಮಂಚದ ಹಾಸಿಗೆಯಲ್ಲಿ ಮಲಗಿಸಲಾಗಿತ್ತು. ಆ ಮಂಚದ ಬಳಿಯೇ ನೀರು ಬಿಸಿ ಮಾಡಲೆಂದು ವಾಟರ್ ಹೀಟರ್ ಇಡಲಾಗಿತ್ತು. ಸ್ನಾನಕ್ಕೆ ನೀರು ಕುದಿಸಲು ಇಡಲಾಗಿತ್ತು. ಈ ವೇಳೆ ಆ ಮಗು ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ದುರಂತವಾಗಿ ಸಾವನ್ನಪ್ಪಿದೆ.
ಸೇತುಪತಿ ಮಧುರೈ ಜಿಲ್ಲೆಯ ಮಾಡಕುಲಂ ಪ್ರದೇಶದವರು. ಅವರ ಪತ್ನಿ ವಿಜಯಲಕ್ಷ್ಮಿ. ಈ ದಂಪತಿಗೆ 7 ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಅಕ್ಟೋಬರ್ 27ರಂದು ವಿಜಯಲಕ್ಷ್ಮಿ ತನ್ನ ಮಗುವನ್ನು ಹಾಸಿಗೆಯಲ್ಲಿ ಮಲಗಿಸಿ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹಾಸಿಗೆಯ ಬಳಿ ವಾಟರ್ ಹೀಟರ್ ಹಾಕಿ ಸ್ನಾನಕ್ಕಾಗಿ ನೀರನ್ನು ಬಿಸಿ ಮಾಡಲು ಇಟ್ಟಿದ್ದರು.
ಇದನ್ನೂ ಓದಿ: Viral: ಬಾತ್ ರೂಮ್‌ನಲ್ಲೇ ಹೆರಿಗೆ; ನವಜಾತ ಶಿಶುವನ್ನು ಬಕೆಟ್‌ನಲ್ಲೇ ತುಂಬಿಸಿಟ್ಟು ಎಸ್ಕೇಪ್ ಆದ ಬಾಣಂತಿ
ಈ ಸಂದರ್ಭದಲ್ಲಿ ಹಾಸಿಗೆಯಲ್ಲಿ ಮಲಗಿದ್ದ ಮಗು ಕುದಿಯುವ ನೀರಿಗೆ ಬಿದ್ದಿತು. ಇದರಿಂದಾಗಿ ಮಗು ಕಿರುಚುತ್ತಾ ಅಳತೊಡಗಿತು. ಗಾಬರಿಯಾದ ಅಮ್ಮ ಓಡಿಬರುವಷ್ಟರಲ್ಲಿ ಮಗು ನೀರಿನೊಳಗೆ ಬಿದ್ದಿತ್ತು. ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಕೂಡ ಓಡಿಬಂದರು. ತಕ್ಷಣ ಆ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಉತ್ತರ ಪ್ರದೇಶ: 15 ದಿನದ ಹೆಣ್ಣು ಶಿಶುವಿನ ಜೀವಂತ ಸಮಾಧಿ, ಆದರೂ ಬದುಕಿ ಬಂದಿದ್ಹೇಗೆ?
ಆಸ್ಪತ್ರೆಗೆ ದಾಖಲಾಗಿದ್ದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲ ನೀಡದೆ ಮಗು ದುರಂತವಾಗಿ ಸಾವನ್ನಪ್ಪಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ತಾಯಿಯ ವಿಚಾರಣೆ ನಡೆಸುತ್ತಿದ್ದಾರೆ. ಸಣ್ಣದೊಂದು ನಿರ್ಲಕ್ಷ್ಯದಿಂದ 7 ತಿಂಗಳ ಮಗುವಿನ ಪ್ರಾಣವೇ ಹೋಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Tue, 4 November 25