ಛತ್ತೀಸ್‌ಗಢದಲ್ಲಿ ನಕ್ಸಲ್ ವಿರುದ್ಧ ಬೃಹತ್ ಕಾರ್ಯಾಚರಣೆ, ಮಾವೋವಾದಿ ನಾಯಕ ಮದ್ವಿ ಹಿದ್ಮಾ ಹತ?

ಛತ್ತೀಸ್‌ಗಢ, ತೆಲಂಗಾಣ ಮತ್ತು ಒಡಿಶಾದ ಗಡಿಗಳ ಸಮೀಪವಿರುವ ದೂರದ ಕ್ಯಾಂಪ್‌ನಲ್ಲಿ ಕೋಬ್ರಾ ಘಟಕವೊಂದು ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಾಗ, ಮಾವೋವಾದಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ ನಕ್ಸಲ್ ವಿರುದ್ಧ ಬೃಹತ್ ಕಾರ್ಯಾಚರಣೆ, ಮಾವೋವಾದಿ ನಾಯಕ ಮದ್ವಿ ಹಿದ್ಮಾ ಹತ?
ಮದ್ವಿ ಹಿದ್ಮಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 12, 2023 | 2:49 PM

ಭೋಪಾಲ್: ಮಾವೋವಾದಿ ಬಂಡುಕೋರರ ನಾಯಕ ಮತ್ತು ಭದ್ರತಾ ಪಡೆಗಳ ಮೇಲಿನ ಕೆಲವು ದೊಡ್ಡ ದಾಳಿಗಳ ಮಾಸ್ಟರ್ ಮೈಂಡ್ ಮದ್ವಿ ಹಿದ್ಮಾ (Madvi Hidma) ಬುಧವಾರ ಸರ್ಜಿಕಲ್ ಸ್ಟ್ರೈಕ್ ವೇಳೆ ಛತ್ತೀಸ್‌ಗಢದಲ್ಲಿ (Chhattisgarh) ಎನ್‌ಕೌಂಟರ್‌ನಲ್ಲಿ  ಹತನಾಗಿದ್ದಾನೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ ಎಂದು ಮೂಲಗಳು ವಿವರಿಸಿವೆ. ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಗಣ್ಯ ಕೋಬ್ರಾ ಘಟಕದ ಕಮಾಂಡೋಗಳು, ಛತ್ತೀಸ್‌ಗಢ ಪೊಲೀಸ್ ಮತ್ತು ತೆಲಂಗಾಣ ಪೊಲೀಸರ ಗ್ರೇಹೌಂಡ್ ವಿಶೇಷ ಪಡೆಗಳ ಘಟಕವನ್ನು ಬೆಟಾಲಿಯನ್ 1 ಎಂದು ಕರೆಯಲಾಗುವ ಹಿದ್ಮಾ ಅವರ ಗುಂಪನ್ನು ಪತ್ತೆಹಚ್ಚಲು ಕಳುಹಿಸಲಾಗಿದೆ.2024 ರ ರಾಷ್ಟ್ರೀಯ ಚುನಾವಣೆಯ ಮೊದಲು ಮಾವೋವಾದಿ ಬಂಡಾಯವನ್ನು ಸಂಪೂರ್ಣವಾಗಿ ತಟಸ್ಥಗೊಳಿಸಲಾಗುವುದು ಎಂದು ಛತ್ತೀಸ್‌ಗಢದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ ಕೆಲವು ದಿನಗಳ ನಂತರ ಈ ಕಾರ್ಯಾಚರಣೆ ನಡೆದಿದೆ.

ಛತ್ತೀಸ್‌ಗಢ, ತೆಲಂಗಾಣ ಮತ್ತು ಒಡಿಶಾದ ಗಡಿಗಳ ಸಮೀಪವಿರುವ ದೂರದ ಕ್ಯಾಂಪ್‌ನಲ್ಲಿ ಕೋಬ್ರಾ ಘಟಕವೊಂದು ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಾಗ, ಮಾವೋವಾದಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. “CRPF ನ ಕೋಬ್ರಾ ಬೆಟಾಲಿಯನ್‌ನ ಒಂದು ಘಟಕವನ್ನು ಚಾಪರ್‌ನಲ್ಲಿ ಫಾರ್ವರ್ಡ್ ಆಪರೇಟಿಂಗ್ ಬೇಸ್‌ಗೆ ಕಳುಹಿಸಲಾಗುತ್ತಿದೆ. ತಂಡವು ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಾಗ, ಕೋಬ್ರಾ ಕಮಾಂಡೋಗಳು ಮತ್ತು ಮಾವೋವಾದಿಗಳ ನಡುವೆ ಎನ್‌ಕೌಂಟರ್ ನಡೆಯಿತು ಎಂದು ಸಿಆರ್‌ಪಿಎಫ್‌ನ ಛತ್ತೀಸ್‌ಗಢ ಸೆಕ್ಟರ್, ಇನ್ಸ್‌ಪೆಕ್ಟರ್ ಜನರಲ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಭದ್ರತಾ ಸಿಬ್ಬಂದಿಗಳು ತಮ್ಮ ಮೇಲೆ ದಾಳಿ ನಡೆಸುತ್ತಿರುವುದನ್ನು ಕಂಡು ಮಾವೋವಾದಿಗಳು ಪರಾರಿಯಾಗಿದ್ದಾರೆ. ಕೋಬ್ರಾ ಕಮಾಂಡೋಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಮತ್ತು ಘಟನೆಯಲ್ಲಿ ಮಾವೋವಾದಿಗಳಿಗೆ ಉಂಟಾದ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಭದ್ರತಾ ಪಡೆಗಳು ಬೆಳಗ್ಗೆ 11 ಗಂಟೆಗೆ ಹಲವು ಪ್ರದೇಶಗಳಲ್ಲಿ ವೈಮಾನಿಕ ದಾಳಿ ನಡೆಸಿದವು ಎಂದು ಮಾವೋವಾದಿಗಳು ಹೇಳಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ, ಕಾರ್ಯಾಚರಣೆಯಲ್ಲಿ ಕೆಲವು ಯೋಧರು ಗಾಯಗೊಂಡಿದ್ದಾರೆ, ಆದರೆ ಅವರು ಸುರಕ್ಷಿತವಾಗಿದ್ದಾರೆ. ಒಂದು ಹೆಲಿಕಾಪ್ಟರ್‌ಗೆ ಗುಂಡುಗಳು ತಾಗಿದ್ದು ಅದು ಸುಕ್ಮಾದ ಎಲ್ಮಗುಂಡಾ ಕ್ಯಾಂಪ್‌ನಲ್ಲಿ ಇಳಿಯಿತು.

ಈ ಕಾರ್ಯಾಚರಣೆಯಲ್ಲಿ 55 ವರ್ಷದ ಮದ್ವಿ ಹಿದ್ಮಾ ಸಾವಿನ ವರದಿಗಳನ್ನು ಅಧಿಕಾರಿಗಳು ಖಚಿತಪಡಿಸಿಲ್ಲ. 2013ರಲ್ಲಿ ದಾಂತೇವಾಡದಲ್ಲಿ 76 ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಬಲಿತೆಗೆದುಕೊಂಡ ದಾಳಿ ಸೇರಿದಂತೆ 2004ರಿಂದ ಎರಡು ಡಜನ್‌ಗಿಂತಲೂ ಹೆಚ್ಚು ದಾಳಿಗಳಲ್ಲಿ ಹಿದ್ಮಾ ಭಾಗಿಯಾಗಿದ್ದಾನೆ. ಅದೇ ವರ್ಷದಲ್ಲಿ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನಾಯಕತ್ವವನ್ನು ನಾಶಪಡಿಸಿದ ಜಿರಾಮ್ ಘಾಟಿ ದಾಳಿಯಲ್ಲಿ ಈತನಿದ್ದು ಈತನ ತಲೆಗೆ ₹ 45 ಲಕ್ಷ ಬಹುಮಾನವಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Thu, 12 January 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್