ಕಾರಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯ ಫಾರೂಖ್ ನಗರದಲ್ಲಿ ಘಟನೆ ಸಂಭವಿಸಿದೆ, ಮಕ್ಕಳು ಆಟವಾಡಲು ಹೋಗಿದ್ದರು ಬಳಿಕ ನಾಪತ್ತೆಯಾಗಿದ್ದರು. 24 ಗಂಟೆಯ ಬಳಿಕ ಮನೆ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಮಕ್ಕಳ ಶವ ಪತ್ತೆಯಾಗಿದೆ, ಹಳೆಯ ಕಾರಿನಲ್ಲಿ ಆಟವಾಡುತ್ತಿದ್ದಾಗ ಡೋರ್ ಲಾಕ್ ಆಗಿ ದುರಂತ ಸಂಭವಿಸಿದೆ.
ಕಾರಿನ ಡೋರ್ ಲಾಕ್ ಆಗಿದ್ದರಿಂದ ಉಸಿರುಗಟ್ಟಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ, ಫಾರೂಖ್ ನಗರದ ಪಂಚಪಾವಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಿಂದ 50 ಮೀಟರ್ ದೂರದಲ್ಲಿ ಕಾರು ನಿಲ್ಲಿಸಲಾಗಿತ್ತು, ಒಂದೇ ಮನೆಯ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಸಿರವಾರದಲ್ಲಿ ಅನುಮಾನಾಸ್ಪದವಾಗಿ ತಂದೆ, ಇಬ್ಬರು ಮಕ್ಕಳು ಸಾವು
ಫಾರುಕ್ ನಗರದ ನಿವಾಸಿಗಳಾದ ತೌಫಿಕ್ ಫಿರೋಜ್ ಖಾನ್ (4), ಆಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದರು.
ಪೋಷಕರು ಹತ್ತಿರದ ಫೀಲ್ಡ್ಗೆ ಹೋಗಿರಬಹುದು ಎಂದುಕೊಂಡಿದ್ದರು. ರಾತ್ರಿವರೆಗೂ ಹಿಂದಿರುಗದಿದ್ದಾಗ ಪೊಲೀಸರನ್ನು ಸಂಪರ್ಕಿಸಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಎಸ್ಯುವಿ ನಿಂತಿರುವುದ ಕಂಡರು ಕಾರಿನಲ್ಲಿ ಶವವಿರುವುದು ಬೆಳಕಿಗೆ ಬಂದಿದೆ. ತೌಫಿಕ್ ಮತ್ತು ಆಲಿಯಾ ಒಡಹುಟ್ಟಿದವರಾಗಿದ್ದು, ಅಫ್ರಿನ್ ಪಕ್ಕದ ಮನೆಯವರಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:20 am, Mon, 19 June 23