ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು, ಮೂರು ಪುಟಾಣಿ ಮಕ್ಕಳು ಸಹ ಇದ್ರು, ಕೊನೆಯ ಮಗುವನ್ನು ಅಪ್ಪ ಕೊಂದು ಬಿಟ್ಟ, ಕಾರಣವೇನು?

ಆಂಧ್ರದ ಗಡಿಭಾಗದಿಂದ ಕೇವಲ ಒಂದೇ ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ.

ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು, ಮೂರು ಪುಟಾಣಿ ಮಕ್ಕಳು ಸಹ ಇದ್ರು, ಕೊನೆಯ ಮಗುವನ್ನು ಅಪ್ಪ ಕೊಂದು ಬಿಟ್ಟ, ಕಾರಣವೇನು?
ಕೊನೆಯ ಮಗುವನ್ನು ಅಪ್ಪ ಕೊಂದು ಬಿಟ್ಟ, ಕಾರಣವೇನು?
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on:Jun 14, 2023 | 12:22 PM

ಅವರಿಬ್ಬರೂ ಪ್ರೀತಿಸಿ ಮದುವೆಯಾಗಿ 9 ವರ್ಷ ಕಳೆದಿತ್ತು. ಮುದ್ದಾದ ಮೂರು ಪುಟಾಣಿ ಹೆಣ್ಣು ಮಕ್ಕಳು ಸಹ ಇದ್ರು. ದುಶ್ಚಟಕ್ಕೆ ಬಿದ್ದ ಪತಿ ಪ್ರತಿದಿನ ಪತ್ನಿ ಹಾಗೂ ಮಕ್ಕಳಿಗೆ ಹಿಂಸೆ ಕೊಟ್ಟು ತವರು ಮನೆಗೆ ಕಳುಹಿಸಿದ್ದ. ಹೆಂಡತಿ ಮಕ್ಕಳು ಬೇಕು ಎಂದು ನಟಿಸಿ ಪತ್ನಿಯ ಮನೆಗೆ ಬಂದಿದ್ದ ಆ ಕಟುಕ ತಂದೆ ಕೊನೆಗೆ ತನ್ನ ಮಗುವನ್ನೇ ಕುತ್ತಿಗೆ ಹಿಸುಕಿ ಸಾಯಿಸಿಬಿಟ್ಟಿದ್ದಾನೆ. ಮಗುವಿನ ಶವದ ಎದುರು ಮುಗಿಲು ಮುಟ್ಟುವಂತೆ ತಾಯಿ ಹಾಗೂ ಸಂಬಂಧಿಕರ ಆಕ್ರಂದನ, ಏನಾಗ್ತಿದೆ ಅಂತ ಅರಿಯದೆ ಆಟವಾಡ್ತಿರುವ ಎರಡು ಪುಟಾಣಿ ಮಕ್ಕಳು, ನಿರ್ಜನ ಪ್ರದೇಶದಲ್ಲಿ ಹೆತ್ತ ತಂದೆಯಿಂದಲೇ (Drunkard father) ಕೊಲೆಯಾಗಿ ಸತ್ತು ಬಿದ್ದಿರುವ (Murder) ಎರಡು ವರ್ಷ ವಯಸ್ಸಿನ ಮಗು (Toddler). ಇಂಥಾ ಕರುಣಾಜನಕ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೆ.ಬಿ ಕೊತ್ತೂರು ಗ್ರಾಮದಲ್ಲಿ (Mulbagal, Kolar).

ಹೌದು ಆಂಧ್ರದ ಗಡಿಭಾಗದಿಂದ ಕೇವಲ ಒಂದೇ ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಈ ಫೋಟೋದಲ್ಲಿ ಕಿರಾತಕನಂತೆ ಪೋಸ್ ಕೊಟ್ಟಿರುವ ಇವನ ಹೆಸರು ಗಂಗಾಧರ ಅಂತಾ, ವಯಸ್ಸು 30 ವರ್ಷ. ಇವನು ಮಾಡಿರುವ ನೀಚ ಕೆಲಸವನ್ನು ಯಾವ ಮನುಷ್ಯನೂ ಸಹಿಸೋದಿಲ್ಲ.

ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಗಂಗಾಧರ ಕುಡಿತದ ದಾಸನಾಗಿ ಸದಾ ಎಣ್ಣೆ ಮತ್ತಿನಲ್ಲಿ ಇರುತ್ತಿದ್ದ. ನಿತ್ಯ ಕುಡಿದು ಮನೆಗೆ ಬರೋದು ತನ್ನ ಪತ್ನಿ ರೇಣುಕಾ ಹಾಗೂ ಮೂವರು ಮಕ್ಕಳನ್ನು ಹೊಡೆಯುವುದು ಇವನ ಕಾಯಕವಾಗಿತ್ತು. ಇವನ ಟಾರ್ಚರ್ ತಾಳಲಾರದೆ ತನ್ನ ಮೂರೂ ಮಕ್ಳಳನ್ನು ಕರೆದುಕೊಂಡು ರೇಣುಕಾ, ತನ್ನ ತವರು ಮನೆ ಸೇರಿದ್ದಳು. ತನ್ನ ಅಣ್ಣನ ಆಸೆರೆಯಲ್ಲಿದ್ದು ಕೂಲಿ ಕೆಲಸಕ್ಕೂ ಹೋಗುತ್ತ ತನ್ನ ಮಕ್ಕಳನ್ನು ಸಾಕುತ್ತಿದ್ದಳು.

ಆದ್ರೆ ಪತಿ ಗಂಗಾಧರನಿಗೆ ಅದೇನಾಯ್ತೋ ಗೊತ್ತಿಲ್ಲ, ಭಾನುವಾರ ಏಕಾಏಕಿ ರೇಣುಕಾಳ ಅಣ್ಣನ ಮನೆಗೆ ಬಂದು ನಾನು ಇನ್ಮುಂದೆ ಕುಡಿಯೋದಿಲ್ಲ, ನನ್ನ ಹೆಂಡ್ತಿ ಮಕ್ಕಳನ್ನು ಮನೆಗೆ ಕಳುಹಿಸಿ ಎಂದು ಗೋಗರೆದಿದ್ದಾನೆ. ಇವನ ನಾಟಕವನ್ನು ನಂಬದ ರೇಣುಕಾಳ ಅಣ್ಣ ನೀನು ಯಾರಾದ್ರೂ ದೊಡ್ಡವರನ್ನು ಕರೆದುಕೊಂಡು ಬಂದು ಪಂಚಾಯ್ತಿ ಮಾಡಿ ಹೆಂಡ್ತಿ ಮಕ್ಕಳನ್ನು ಕರೆದುಕೊಂಡು ಹೋಗು ಅಂತ ಹೇಳಿ ಕಳಿಸಿದ್ದಾರೆ.

ಸರಿ ಎಂದು ಹೇಳಿ ಹೋದವನು ಸಂಜೆ ವೇಳೆ ಮಕ್ಕಳಿಗೆ ತಿಂಡಿ ಕೊಸುವ ನೆಪದಲ್ಲಿ ಬಂದು ಎರಡನೇ ಮಗಳು ಅಕ್ಷಿತಾ ಹಾಗೂ ಮೂರನೇ ಮಗು ರಮ್ಯಾಳನ್ನು ಕರೆದುಕೊಂಡು ಅಂಗಡಿಗೆ ಹೋಗಿದ್ದಾನೆ. ನಂತರ ಅಂಗಡಿ ಬಳಿ ಹೋಗುತಿದ್ದಂತೆ ಅಕ್ಷಿತಾಳಿಗೆ ಹೊಡೆಯಲು ಆರಂಭಿಸಿದ್ದಾನೆ. ಆಗ ಭಯಗೊಂಡ ಅಕ್ಷಿತಾ ಮನೆಗೆ ಓಡಿ ಹೋಗಿದ್ದಾಳೆ. ಬಳಿಕ ಮೂರನೇ ಮಗಳು ರಮ್ಯಾಳನ್ನು ಗ್ರಾಮದ ಹೊರಹೊಲಯದಲ್ಲಿರುವ ಜಮೀನಿನ ಬಳಿ ಕರೆದುಕೊಂಡು ಹೋಗಿ ಮಗುವನ್ನು ಕುತ್ತಿಗೆ ಹಿಸುಕಿ ಸಾಯಿಸಿ ಏನೂ ತಿಳಿದವನಂತೆ ಗ್ರಾಮಕ್ಕೆ ವಾಪಸ್ಸು ಬಂದಿದ್ದಾನೆ. ಮಗು ಕಾಣಿಸಿ ಹೆಚ್ಚಿನ ಸಮಯವಾಯ್ತು ಅಂತ ಮನೆಯವರು ವಿಚಾರಿಸಿದಾಗ ಜಮೀನಲ್ಲಿರುವ ಬಾವಿಯ ಪಕ್ಕದಲ್ಲಿ ಮಗು ರಮ್ಯಾಳ ಶವ ಪತ್ತೆಯಾಗಿದೆ. ವಿಷಯ ಗ್ರಾಮದಲ್ಲಿ ತಿಳಿಯುತ್ತಿದಂತೆ ಕಟುಕ ಅಪ್ಪ ಗಂಗಾಧರ ತಲೆಮರಿಸಿಕೊಂಡಿದ್ದಾನೆ.

ಇನ್ನು ಗಂಗಾಧರ ಹಾಗೂ ರೇಣುಕಾ ಇಬ್ಬರೂ ಒಂದೇ ಗ್ರಾಮದವವರು ಆಗಿರೋದ್ರಿಂದ ಒಬ್ಬರಿಗೊಬ್ಬರು ಪ್ರೀತಿಸಿ 9 ವರ್ಷಗಳ ಹಿಂದೆ ಮದುವೆ ಆಗಿದ್ದಾರೆ. 6 ವರ್ಷ ವಯಸ್ಸಿನ ರಕ್ಷಿತಾ, 4 ವರ್ಷ ವಯಸ್ಸಿನ ಅಕ್ಷಿತಾ ಹಾಗೂ ಈಗ ಸತ್ತು ಹೋಗಿರುವ 2 ವರ್ಷ ವಯಸ್ಸಿನ ರಮ್ಯಾ ಅನ್ನೋ ಮಕ್ಕಳು ಇದ್ದಾರೆ. ಮದುವೆಯ ಆರಂಭದಲ್ಲಿ ಸರಿಯಾಗಿ ಬಾಳ್ವೆ ಮಾಡ್ತಿದ್ದ ಗಂಗಾಧರ ಬಳಿಕ ಗ್ರಾಮದ ಅಂಗಡಿಗಳಲ್ಲಿ ಅಕ್ರಮವಾಗಿ ಸಿಗುವ ಎಣ್ಣೆ ಕುಡಿಯುತ್ತಾ ಸದಾ ಬೇರೆಯದ್ದೇ ಲೋಕದ ಗುಂಗಿನಲ್ಲಿ ಇರ್ತಿದ್ದ.

ಸಂಜೆ ಆಗ್ತಿದಂತೆ ಕೂಲಿ ಕೆಲಸ ಮಗಿಸಿಕೊಂಡು ಬಂದು ಕುಡಿದು ಹೆಂಡ್ತಿ ಮಕ್ಕಳನ್ನು ಹೋಡಿಯೋದು ಇವನ ಕೆಲಸವಾಗಿತ್ತು. ಒಂದು ವರ್ಷದ ಹಿಂದೆ ರೇಣುಕಾಳ ಕಿವಿಗೆ ಬಲವಾಗಿ ಹೊಡೆದಿದ್ದನಂತೆ. ಇದರಿಂದ ಆಕೆಗೆ ಈಗಲೂ ಕಿವಿ ಕೇಳಿಸ್ತಿಲ್ಲ. ಹೀಗಾಗಿ ನಿನ್ನ ಸಹವಾಸವೇ ಬೇಡ ಎಂದು ತಾನೇ ಕೂಲಿ ಕೆಲಸಕ್ಕೆ ಹೋಗುತ್ತಾ ಗ್ರಾಮದಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಮೂರು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದಳು.

ಇದನ್ನೂ ಓದಿ: ವಾಡಿಕೆಯಂತೆ ಮುಂಗಾರು ಆರಂಭ ಆಗ್ತಿದ್ದಂತೆ ಮಂಡ್ಯ ರೈತರಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು, ಆದ್ರೆ ಈ ವರ್ಷ…

ಆದ್ರೆ ಕುಡಿದ ಮತ್ತಿನಲ್ಲಿ ಯಾವ ಕಾರಣವೂ ಇಲ್ಲದೆ ತಿಂಡಿ ಕೊಡಿಸುವ ನೆಪದಲ್ಲಿ ತನ್ನ ಎರಡು ವರ್ಷ ವಯಸ್ಸಿನ ಮಗಳು ರಮ್ಯಾಳನ್ನು ನಿರ್ಜನ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಮಗುವಿನ ಎದೆಯ ಮೇಲೆ ಬಲವಾಗಿ ತುಳಿದು ಕೈಯಲ್ಲಿ ಗುದ್ದಿ ಸಾಯಿಸಿ ವಿಕೃತಿ ಮೆರೆದಿದ್ದಾನೆ. ಸದ್ಯ ಆರೋಪಿ ಗಂಗಾಧರ್​ಗಾಗಿ ನಂಗಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಒಟ್ಟಾರೆ ಮನುಷ್ಯತ್ವವೇ ಇಲ್ಲದಂತೆ ತನ್ನ ಸ್ವಂತ ಮಗುವನ್ನೇ ಕೊಂದು ವಿಕೃತಿ ಮೆರೆದಿರುವ ತಂದೆ ತಲೆಮರೆಸಿಕೊಂಡಿದ್ದಾನೆ, ಇತ್ತ ದುಡಿದು ಸಾಕಲೂ ಆಗದೆ, ತನ್ನಿಂದ ದೂರವಾಗಿ ಬದುಕಲು ಬಿಡದೆ ಹೀಗೆ ತನ್ನ ಹೆತ್ತ ಕಂದಮ್ಮನನ್ನೇ ಕೊಂದಿರುವ ಇಂಥ ಕಟುಕ ತಂದೆ ನಿಜಕ್ಕೂ ಮಾನವ ಸಮಾಜಕ್ಕೆ ಕಳಂಕ, ಅದಕ್ಕಾಗಿಯೇ ಗಂಗಾಧರ್ ಪತ್ನಿ ರೇಣುಕಾಳೆ ತನ್ನ ಗಂಡನಿಗೆ ಕಠಿಣ ಶಿಕ್ಷೆ ಕೊಡಿ ಎಂದು ಆಗ್ರಹಿಸಿದ್ದಾಳೆ.

ಕೋಲಾರ ಜಿಲ್ಲೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Published On - 12:22 pm, Wed, 14 June 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ