- Kannada News Photo gallery Mandya Special Parjanya Homa to fill rain water in KRS dam by MLA Ramesh Badisiddegowda
ವಾಡಿಕೆಯಂತೆ ಮುಂಗಾರು ಆರಂಭ ಆಗ್ತಿದ್ದಂತೆ ಮಂಡ್ಯ ರೈತರಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು, ಆದ್ರೆ ಈ ವರ್ಷ…
ಈಗಾಗಲೇ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿದ್ದು, ಕೆಲವು ಭಾಗದಲ್ಲಿ ಉತ್ತಮ ಮಳೆಯೂ ಆಗುತ್ತಿದೆ. ಆದ್ರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಾತ್ರ ಇನ್ನೂ ಮಳೆ ಆರಂಭವಾಗಿಲ್ಲ. ಪರಿಣಾಮ ಕನ್ನಡಿಗರ ಜೀವನಾಡಿ ಕಾವೇರಿ ಬರಿದಾಗುತ್ತಿದ್ದು, ಮಂಡ್ಯ ಮೈಸೂರು ಜಿಲ್ಲೆಯ ಅನ್ನದಾತರಲ್ಲಿ ಬೆಳೆ ನಷ್ಟದ ಆತಂಕ ಸೃಷ್ಟಿಸಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ದೇವರ ಮೊರೆ ಹೋಗಿದ್ದು, KRS ಡ್ಯಾಂ ಮುಂಭಾಗ ವಿಶೇಷ ಹೋಮ, ಪೂಜೆ ಹಮ್ಮಿಕೊಳ್ಳಲಾಗಿದೆ.
Updated on: Jun 14, 2023 | 11:51 AM

ಈಗಾಗಲೇ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿದ್ದು, ಕೆಲವು ಭಾಗದಲ್ಲಿ ಉತ್ತಮ ಮಳೆಯೂ ಆಗುತ್ತಿದೆ. ಆದ್ರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಾತ್ರ ಇನ್ನೂ ಮಳೆ ಆರಂಭವಾಗಿಲ್ಲ. ಪರಿಣಾಮ ಕನ್ನಡಿಗರ ಜೀವನಾಡಿ ಕಾವೇರಿ ಬರಿದಾಗುತ್ತಿದ್ದು, ಮಂಡ್ಯ ಮೈಸೂರು ಜಿಲ್ಲೆಯ ಅನ್ನದಾತರಲ್ಲಿ ಬೆಳೆ ನಷ್ಟದ ಆತಂಕ ಸೃಷ್ಟಿಸಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ದೇವರ ಮೊರೆ ಹೋಗಿದ್ದು, KRS ಡ್ಯಾಂ ಮುಂಭಾಗ ವಿಶೇಷ ಹೋಮ, ಪೂಜೆ ಹಮ್ಮಿಕೊಳ್ಳಲಾಗಿದೆ.

ಮುಂಗಾರು ಆರಂಭವಾದರೆ ಸಾಕು ಮಂಡ್ಯ ಜಿಲ್ಲೆಯ ರೈತರಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಆದ್ರೆ ಈ ವರ್ಷ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿದ್ರೂ ಸಕ್ಕರೆ ನಾಡಿನ ರೈತರಲ್ಲಿ ಆತಂಕ ಹೆಚ್ಚಾಗಿದೆ. ಅದಕ್ಕೆ ಕಾರಣ ಅಂದ್ರೆ ರಾಜ್ಯದ ಹಲವೆಡೆ ಬಿರುಸುಗೊಂಡಿರುವ ಮಳೆ, ಅದ್ಯಾಕೋ ಏನೋ ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳುತ್ತಿಲ್ಲ. ಪರಿಣಾಮ ಜೀವನದಿ ಕಾವೇರಿ ನದಿ ಬರಿದಾಗಿದ್ದು, ಮತ್ತೊಂದೆಡೆ ಕನ್ನಂಬಾಡಿ ಅಣೆಕಟ್ಟೆಯ ನೀರಿನ ಮಟ್ಟವೂ ಕುಸಿತವಾಗಿದೆ.

ಇದು ರೈತರಲ್ಲಿ ಬೆಳೆ ನಷ್ಟದ ಆತಂಕ ತರಿಸಿದ್ರೆ, ಮತ್ತೊಂದೆಡೆ ಬೆಂಗಳೂರು ಸೇರಿದಂತೆ ಕುಡಿಯಲು ಕಾವೇರಿ ನೀರನ್ನೇ ಅವಲಂಬಿಸಿರುವ ನಗರಗಳು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಹನಿ ನೀರಿಗೂ ಬರ ಎದುರಾಗುವ ಭೀತಿ ಆವರಿಸಿಕೊಂಡಿದೆ. ಹೀಗಾಗಿ ವರುಣನ ಕೃಪೆಗಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಶೇಷ ಹೋಮ ಪೂಜೆ ಮೊರೆಹೋಗಿದ್ದಾರೆ. ಇಂದು ಗಣಪತಿ ಹೋಮ, ಪರ್ಜನ್ಯ ಹೋಮ, ಪರ್ಜನ್ಯ ಜಪ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ನಡೆಸಿದ್ರು.

ವಾಡಿಕೆಯಂತೆ ಜೂನ್ ಆರಂಭದಲ್ಲೇ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದ್ರೆ ಕಾವೇರಿ ನದಿಗೆ ಜೀವ ಕಳೆ ಬರುತ್ತಿತ್ತು, KRS ಡ್ಯಾಂಗೂ ಕೂಡ ಉತ್ತಮ ಒಳ ಹರಿವು ಇರುತ್ತಿತ್ತು. ಆದ್ರೆ ಮಳೆ ಬೀಳದಿರೋದ್ರಿಂದ ಡ್ಯಾಂ ನೀರಿನ ಮಟ್ಟದಲ್ಲಿ ಭಾರೀ ಕುಸಿತವಾಗಿದೆ.

ಇನ್ನು ಈ ಹಿಂದೆಯೂ ಮಳೆ ಕೈಕೊಟ್ಟಾಗಲೂ ಪರ್ಜನ್ಯ ಪೂಜೆ ನಡೆಸಲಾಗಿದ್ದು, 2021ರಲ್ಲೂ ಕೂಡ ಭಾನುಪ್ರಕಾಶ ಶರ್ಮ ನೇತೃತ್ವದಲ್ಲೇ ಪೂಜೆ ನೆರವೇರಿಸಲಾಗಿತ್ತು. ಪೂಜೆ ಬಳಿಕ ಉತ್ತಮ ಮಳೆಯಾಗಿ ಅಣೆಕಟ್ಟೆಯೂ ಭರ್ತಿಯಾಗಿತ್ತು.ಈ ಬಾರಿಯೂ ಪೂಜೆ ಬಳಿಕ ವರುಣ ಒಂದಷ್ಟು ಕೃಪೆ ತೋರಿದ್ದಾನೆ.

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಲ್ಲಿ ಸದ್ಯ 81 ಅಡಿ ಅಷ್ಟೇ ನೀರಿರೋದು. ಇನ್ನು ಟಿಎಂಸಿ ಲೆಕ್ಕಾಚಾರದಲ್ಲಿ ಹೇಳೋದಾದ್ರೆ ಡ್ಯಾಂ 49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇಂದು ಕೇವಲ 12 ಟಿಎಂಸಿ ನೀರು ಮಾತ್ರ ಇದೆ. ಈ 12 ಟಿಎಂಸಿಯಲ್ಲಿ 7 ಟಿಎಂಸಿ ಡೆಡ್ ಸ್ಪೋರೇಜ್ ಆಗಿದ್ದು, ಬಳಕೆ ಮಾಡುವಂತಿಲ್ಲ. ಉಳಿದ 5 ಟಿಎಂಸಿ ನೀರನ್ನ ಮಾತ್ರ ಬಳಕೆ ಮಾಡಬಹುದು.

ಸದ್ಯದ ಪರಿಸ್ಥಿತಿಯಲ್ಲಿ ಕೃಷಿಗೆ ನೀರು ಕೊಡೋದು ಕಷ್ಟಕರವಾಗಿದ್ದು ಡ್ಯಾಂನಲ್ಲಿರುವ ಎಲ್ಲಾ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಚಿಂತನೆ ಮಾಡಿದ್ದಾರೆ. ಈಗಾಗಲೇ ಒಣಗುತ್ತಿರುವ ಕಬ್ಬು ಸೇರಿದಂತೆ ಬೆಳೆದು ನಿಂತಿರುವ ಬೆಳೆ ನಷ್ಟದ ಭೀತಿ ರೈತರಲ್ಲಿ ಶುರುವಾಗಿದೆ.

ಇನ್ನು ಮಳೆಗಾಗಿ ಪ್ರಾರ್ಥಿಸಿ ಇಂದು KRS ಡ್ಯಾಂ ಮುಂಭಾಗ ಇರುವ ಕಾವೇರಿ ಮಾತೆ ಪ್ರತಿಮೆ ಬಳಿ ಪರ್ಜನ್ಯ ಹೋಮ ಹಾಗೂ ವಿಶೇಷ ಪೂಜೆ ನಡೆಸಲಾಯ್ತು. ವೇದಬ್ರಹ್ಮ ಭಾನುಪ್ರಕಾಶ ಶರ್ಮ ನೇತೃತ್ವದಲ್ಲಿ 12 ಮಂದಿ ವೈದಿಕರು ಪೊಜಾ ಕೈಂಕರ್ಯ ನೆರವೇರಿಸಲಿದ್ದು, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ರು.



