Maharashtra: ಸಮೃದ್ಧಿ ಎಕ್ಸ್ಪ್ರೆಸ್ ವೇನಲ್ಲಿ 2022ರಿಂದೀಚೆಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 88
ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ಪ್ರೆಸ್ ವೇನದಲ್ಲಿ 2022ರಿಂದೀಚೆಗೆ ಸಂಭವಿಸಿದ ಅಪಘಾತದಲ್ಲಿ 88 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ಪ್ರೆಸ್ ವೇನದಲ್ಲಿ 2022ರಿಂದೀಚೆಗೆ ಸಂಭವಿಸಿದ ಅಪಘಾತದಲ್ಲಿ 88 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶನಿವಾರ ಖಾಸಗಿ ಬಸ್ವೊಂದು ಡಿವೈಡರ್ಗೆ ಡಿಕ್ಕಿ ಹೊಡೆದು 25 ಮಂದಿ ಸಜೀವ ದಹನವಾದ ಘಟನೆ ಬಳಿಕ ಈ ವರದಿ ಬಂದಿದೆ. ಚತುಷ್ಪಥ ರಸ್ತೆಯಲ್ಲಿ ಹೆಚ್ಚಿನ ಅಪಘಾತಗಳಿಗೆ ಹೈವೇ ಹಿಪ್ನೋಸಿಸ್ ಕಾರಣ ಎನ್ನಲಾಗುತ್ತಿದೆ. ಅದನ್ನು ಮನಸ್ಸಿನ ಡ್ರೀಮ್ ಲೈನ್ ಸ್ಥಿತಿ ಎಂದು ಕರೆಯುತ್ತಾರೆ.
ಒಂದೇ ರೀತಿಯ ರಸ್ತೆಯಲ್ಲಿ ಒಂದು ಹಂತದ ಡ್ರೈವಿಂಗ್‌ನ ಬಳಿಕ ಮೆದುಳಿನ ಒಂದು ಭಾಗ ಕಾರ್ಯಪ್ರವೃತ್ತವಾಗಿರುತ್ತದೆ. ಆಗ ಕೈ ಸ್ಟೇರಿಂಗ್‌ನಲ್ಲಿರುತ್ತೆ, ಕಣ್ಣು ರಸ್ತೆ ಮೇಲೆ ನೆಟ್ಟಿರುತ್ತೆ. ಆದರೆ ಮೆದುಳಿನ ಉಳಿದರ್ಧ ಭಾಗ ನಿದ್ರೆಗೆ ಜಾರಿರುತ್ತದೆ. ಜಗತ್ತಿನಲ್ಲಿ ಅತಿ ಹೆಚ್ಚು ಅಪಘಾತಗಳಿಗೆ ಈ ಮನಸ್ಥಿತಿಯೇ ಕಾರಣವಾಗಿರುತ್ತದೆ. ಒಂದೊಮ್ಮೆ ನಿಮಗೆ ನಿದ್ರೆ ಬರುತ್ತಿದೆ ಎಂದೆನಿಸಿದರೆ ಹೈವೇ ಡ್ರೈವಿಂಗ್ ಅವಾಯ್ಡ್ ಮಾಡಲೇಬೇಕು.
ಮತ್ತಷ್ಟು ಓದಿ: Maharashtra Bus Accident: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ, ಡಿವೈಡರ್ಗೆ ಡಿಕ್ಕಿಯಾದ ಬಸ್; ಬೆಂಕಿ ತಗುಲಿ 25 ಪ್ರಯಾಣಿಕರು ಸಜೀವ ದಹನ
ಕಳೆದ ವರ್ಷ ಡಿಸೆಂಬರ್ನಿಂದ ನಾಗ್ಪುರ-ಮುಂಬೈ ಎಕ್ಸ್ಪ್ರೆಸ್ ವೇಯನ್ನು ಭಾಗಶಃ ತೆರೆದಿದ್ದರಿಂದ ಒಟ್ಟು 39 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ 616 ಸಣ್ಣ ಮತ್ತು ದೊಡ್ಡ ಅಪಘಾತಗಳು ಸಂಭವಿಸಿವೆ, ಇದರಲ್ಲಿ 656 ಜನರಿಗೆ ಗಂಭೀರ ಮತ್ತು ಸಣ್ಣ ಪುಟ್ಟ ಗಾಯಗಳಾಗಿವೆ.
ಹೆಚ್ಚಿನ ಅಪಘಾತಗಳು ಅತಿಯಾದ ವೇಗ, ಚಾಲಕರು ಚಕ್ರದಲ್ಲಿ ನಿದ್ರಿಸುವುದು ಮತ್ತು ಟೈರ್ ಸ್ಫೋಟದಂತಹ ಕಾರಣಗಳಿಂದ ಸಂಭವಿಸಿದೆ. 2022 ರಲ್ಲಿ ಮಹಾರಾಷ್ಟ್ರದಾದ್ಯಂತ 15,224 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಬುಲ್ಧಾನದಲ್ಲಿ ಶುಕ್ರವಾರ ತಡರಾತ್ರಿ ಭೀಕರ ಅಪಘಾತ(Accident) ನಡೆದಿದೆ. ನಾಗ್ಪುರದಿಂದ ಪುಣೆಗೆ ತೆರಳುತ್ತಿದ್ದ ಖಾಸಗಿ ಬಸ್, ಬುಲ್ಧಾನ ಜಿಲ್ಲೆಯ ಸಿಂಧಖೇಡ್ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಡಿವೈಡರ್ಗೆ ಡಿಕ್ಕಿಯಾಗಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದ್ದು, 25 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಇನ್ನು ಬಸ್ ಅಪಘಾತವಾದಾಗ ಎಲ್ಲಾ ಪ್ರಯಾಣಿಕರು ಮಲಗಿಕೊಂಡಿದ್ದು, ಎನಾಗುತ್ತಿದೆ ಎನ್ನುವಷ್ಟರಲ್ಲೇ ಬೆಂಕಿ ಹೊತ್ತಿಕೊಂಡಿದೆ. ಸುಮಾರು 25 ಪ್ರಯಾಣಿಕರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಪೊಲೀಸ್-ಆಡಳಿತ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ