ಮಹಾರಾಷ್ಟ್ರ, ಗುಜರಾತ್​ನಲ್ಲಿ ಸಾವಿನ ಪ್ರಮಾಣ ಅತ್ಯಧಿಕ

ಮಹಾರಾಷ್ಟ್ರ, ಗುಜರಾತ್​ನಲ್ಲಿ ಸಾವಿನ ಪ್ರಮಾಣ ಅತ್ಯಧಿಕ
ಸಾಂದರ್ಭಿಕ ಚಿತ್ರ

ನವದೆಹಲಿ: ಪೆಡಂಭೂತದಂತೆ ಕಾಡುತ್ತಿರುವ ಕೊರೊನಾ ವೈರಸ್ ದಿನೇ ದಿನೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಬಲಿ ಸಾವಿರದ ಗಡಿ ದಾಟಿದೆ. ಅದರಲ್ಲೂ ಮಹಾರಾಷ್ಟ್ರ, ಗುಜರಾತ್​ನಲ್ಲಿ ಕೊರೊನಾ ಸಾವಿನ ಪ್ರಮಾಣ ಹೆಚ್ಚಿದೆ. ದೇಶದ ಶೇ60ರಷ್ಟು ಕೊರೊನಾ ಸೊಂಕಿತರ ಸಾವು ಈ ಎರಡು ರಾಜ್ಯಗಳಲ್ಲಿ ದಾಖಲಾಗಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 50 ಮಂದಿ ಮೃತಪಟ್ಟಿದ್ದಾರೆ. ಅಹಮದಾಬಾದ್​ನಲ್ಲಿ ನಿನ್ನೆ 19 ಮಂದಿ ಮೃತಪಟ್ಟಿದ್ದಾರೆ. ಮುಂಬೈ ನಗರದಲ್ಲಿ 24 ಗಂಟೆಗಳಲ್ಲಿ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು 1,007 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ 583 ಮಂದಿ ಬಲಿಯಾಗಿದ್ದಾರೆ.

ಮಾರ್ಕೆಟ್​ಗೆ ವಕ್ಕರಿಸಿದ ಕೊರೊನಾ: ದೆಹಲಿ ಆಜಾದ್ ಪುರ್ ಸಬ್ಜಿ ಮಾರ್ಕೆಟ್​ಗೆ ಕೊರೊನಾ ವಕ್ಕರಿಸಿದೆ. ಹೋಲ್ ಸೇಲ್ ತರಕಾರಿ ಮಾರ್ಕೆಟ್​ನಲ್ಲಿನ 11 ವ್ಯಾಪಾರಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹಾಗೂ ಮುಂಬೈ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ತಗುಲಿದ್ದು, ಇದುವರೆಗೆ ಎಪಿಎಂಸಿಯಲ್ಲಿ 10 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.

Click on your DTH Provider to Add TV9 Kannada