ನಾಸಿಕ್, ಏ.30: ಮಹಾರಾಷ್ಟ್ರದ ನಾಸಿಕ್‌ನ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ಪ್ರಕಾರ, ಬಸ್ ನಾಸಿಕ್‌ನಿಂದ ಜಲಗಾಂವ್‌ಗೆ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತ ತುಂಬಾ ಭಯಾನಕವಾಗಿತ್ತು. ಪ್ರಯಾಣಿಕರನ್ನು ಹೊರತರಲು ಬಸ್ಸನ್ನು ಮಧ್ಯವನ್ನು ಹೊಡೆಯಲಾಗಿತ್ತು.
नाशिक जिल्ह्यात मुंबई – आग्रा महामार्गावर एसटी आणि ट्रकचा भीषण अपघात
१० प्रवाशी जागीच ठार तर ३० प्रवासी गंभीर जखमी
जळगावहून वसई विरारकडे जात होती बस #Nashik #NashikAccident pic.twitter.com/DqXGyaapfH
— DD Sahyadri News | सह्याद्री बातम्या (@ddsahyadrinews) April 30, 2024
ಈ ಅಪಘಾತದ ಬಗ್ಗೆ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳುಗಳು ಹಾಗೂ ಮೃತರನ್ನು ಬಸ್‌ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ: ಅಂದು ಚಂದ್ರಯಾನ-3 ಉಡಾವಣೆ 4 ಸೆಕೆಂಡು ವಿಳಂಬವಾಗಿತ್ತು, ಸ್ವಲ್ಪ ಮೈಮರೆತಿದ್ರೂ ಭಾರತ ಈ ಸಾಧನೆ ಮಾಡುತ್ತಿರಲಿಲ್ಲ
ಅಪಘಾತದ ನಂತರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಉಂಟಾಗಿತ್ತು. ಮಾಹಿತಿ ಪ್ರಕಾರ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಘಟನೆಯಿಂದ ಬಸ್ ಒಂದು ಪಲ್ಟಿಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಪಘಾತಕ್ಕೆ ಟೈರ್ ಸ್ಫೋಟವೇ ಕಾರಣ ಎನ್ನಲಾಗಿದೆ. ಇದರಿಂದ ಚಾಲಕನಿಗೆ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗಿದೆ. ಅಪಘಾತದ ಬಗ್ಗೆ ಮೃತ ಮನೆಗೆ ತಿಳಿಸಲಾಗಿದೆ. ಹಾಗೂ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ. ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Tue, 30 April 24