ಅಂದು ಚಂದ್ರಯಾನ-3 ಉಡಾವಣೆ 4 ಸೆಕೆಂಡು ವಿಳಂಬವಾಗಿತ್ತು, ಸ್ವಲ್ಪ ಮೈಮರೆತಿದ್ರೂ ಭಾರತ ಈ ಸಾಧನೆ ಮಾಡುತ್ತಿರಲಿಲ್ಲ

ಭಾರತ ಚಂದ್ರನ ಭಾಗವನ್ನು ಸಂಶೋಧನೆ ಮಾಡುವ ಭಾಗವಾಗಿ ಚಂದ್ರಯಾನ-3ಯನ್ನು ಜುಲೈ 14, 2023 ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಈ ಪ್ರಕಾರವೇ ಉಡಾವಣೆ ಮಾಡಲಾಗಿದೆ. ಆದರೆ ಇದಕ್ಕೂ ಮುನ್ನ ಇಸ್ರೋ ಇದರಲ್ಲಿ ಕಂಡು ಬಂದ ಸಮಸ್ಯೆಯನ್ನು ಪತ್ತೆ ಮಾಡಿದ್ದಾರೆ. ಒಂದು ವೇಳೆ ವಿಜ್ಞಾನಿಗಳು ಸ್ವಲ್ಪ ಮೈಮರೆತಿದ್ರೂ ಭಾರತ ಈ ಸಾಧನೆ ಮಾಡುತ್ತಿರಲಿಲ್ಲ, ಆ ಸಮಸ್ಯೆ ಯಾವುದು, ಇದೀಗ ಈ ಬಗ್ಗೆ ಭಾರೀ ಚರ್ಚೆಯಾಗಿತ್ತು.

ಅಂದು ಚಂದ್ರಯಾನ-3 ಉಡಾವಣೆ 4 ಸೆಕೆಂಡು ವಿಳಂಬವಾಗಿತ್ತು, ಸ್ವಲ್ಪ ಮೈಮರೆತಿದ್ರೂ ಭಾರತ ಈ ಸಾಧನೆ ಮಾಡುತ್ತಿರಲಿಲ್ಲ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 30, 2024 | 1:02 PM

ಭಾರತಕ್ಕೆ ಜುಲೈ 14, 2023 ಒಂದು ಐತಿಹಾಸಿಕ ದಿನ, ಅದನ್ನು ಯಾವ ಭಾರತೀಯರು ಮರೆಯುವಂತಿಲ್ಲ. ಇಡೀ ವಿಶ್ವವೇ ಭಾರತವನ್ನು ಕೊಂಡಾಡಿದ ಕ್ಷಣ, ಶುತ್ರ ರಾಷ್ಟ್ರಗಳು ಕೂಡ ಭಾರತವನ್ನು ಪ್ರಶಂಸಿದ ದಿನ ಅದು. ಭಾರತದ ವಿಜ್ಞಾನಿಗಳ ಪರಿಶ್ರಮದಿಂದ ಜುಲೈ 14, 2023ರಂದು ಇಸ್ರೋ (ISRO) ಬಾಹ್ಯಕಾಶ ಕೇಂದ್ರದಿಂದ ಚಂದ್ರಯಾನ -3 (Chandrayaan 3) ಉಡಾವಣೆಗೊಳಿಸಲಾಗಿತ್ತು. ಇಂದಿಗೂ, ಮುಂದಿಗೂ ಈ ದಿನವನ್ನು ಮರೆಯುವಂತಿಲ್ಲ. ಆದರೆ ಇದರ ನಡುವೆ ಈ ಸಾಧನೆಗೆ ಅಂದು ಒಂದು ಕಂಟಕ ಎದುರಾಗಿತ್ತು. ಈ ಸಮಸ್ಯೆಯನ್ನು ಸೂಕ್ತ ಸಮಯದಲ್ಲಿ ನಿಭಾಯಿಸಿತ್ತು ಇಸ್ರೋ, ಅಂದು ಉಡಾವಣೆ ಸಮಯ 4 ಸೆಕೆಂಡ್​​​ ತಡವಾಗಿತ್ತು. ಏಕೆಂದರೆ ಚಂದ್ರಯಾನ -3 ಮಿಷನ್​​​ನಲ್ಲಿ ಒಂದು ಸಮಸ್ಯೆ ಕಂಡು ಬಂದಿತ್ತು. ಬಾಹ್ಯಾಕಾಶ ಅವಶೇಷಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇತ್ತು. ಈ ದೊಡ್ಡ ಅನಾಹುತವನ್ನು ಇಸ್ರೋ ವಿಜ್ಞಾನಿಗಳು ತಪ್ಪಿಸಿದ್ದಾರೆ.

ಭಾರತ ಚಂದ್ರನ ಭಾಗವನ್ನು ಸಂಶೋಧನೆ ಮಾಡುವ ಭಾಗವಾಗಿ ಚಂದ್ರಯಾನ-3ಯನ್ನು ಜುಲೈ 14, 2023 ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಈ ಪ್ರಕಾರವೇ ಉಡಾವಣೆ ಮಾಡಲಾಗಿದೆ. ಆದರೆ ಇದಕ್ಕೂ ಮುನ್ನ ಇಸ್ರೋ ಇದರಲ್ಲಿ ಕಂಡು ಬಂದ ಸಮಸ್ಯೆಯನ್ನು ಪತ್ತೆ ಮಾಡಿದ್ದಾರೆ. ಬಾಹ್ಯಾಕಾಶ ಅವಶೇಷಗಳು ಮತ್ತು ಬಾಹ್ಯಾಕಾಶಕ್ಕೆ ವೇಗವಾಗಿ ಚಲಿಸುವ ಮಿಷನ್​​​ಗಳಲ್ಲಿ ಅಪಾಯವನ್ನುಂಟು ಮಾಡಿತ್ತು. ಇದನ್ನು ಪತ್ತೆ ಮಾಡಿ, ಸರಿ ಮಾಡಲು ಇಸ್ರೋ ವಿಜ್ಞಾನಿಗಳು ನಾಲ್ಕು ಸೆಕೆಂಡು ತೆಗೆದುಕೊಂಡಿದರು. ಅದಕ್ಕಾಗಿ ಉಡಾವಣೆ ತಡವಾಗಿದೆ ಎಂದು ಇಸ್ರೋ ತನ್ನ ವರದಿಯಲ್ಲಿ ಹೇಳಿದೆ.

ಈ ಸಮಸ್ಯೆಯನ್ನು ಪತ್ತೆ ಮಾಡಿದ ನಂತರ ಅದನ್ನು ಸರಿ ಮಾಡಲಾಗಿತ್ತು. ಆ ನಂತರವೇ ಇದನ್ನು ಉಡಾವಣೆ ಮಾಡಬಹುದು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಬಾಹ್ಯಾಕಾಶದಲ್ಲಿ ಕಂಡು ಬಂದ ದೊಡ್ಡ ಸಮಸ್ಯೆ ಎಂದರೆ, ಶಿಲಾಖಂಡರಾಶಿಗಳು ಚಂದ್ರಯಾನ -3 ಮಿಷನ್​​ಗೆ ಒತ್ತಡವನ್ನು ಉಂಟು ಮಾಡಿತ್ತು. ಆದರೆ ಈ ಸವಾಲುಗಳನ್ನು ಎದುರಿಸಲು ಇಸ್ರೋ, ಚಂದ್ರಯಾನ-3 ಮಿಷನ್​​​ನ್ನು ತಯಾರಿ ಮಾಡಿಕೊಂಡಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಸೂಪರ್​​​ ಪವರ್​​ ಆಗುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ, ಸಂಸತ್ತಿನಲ್ಲಿ ಗುಡುಗಿದ ಪಾಕ್​​​ ನಾಯಕ

ಇಸ್ರೋ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿರುವ ಪ್ರಕಾರ, ಉಪಗ್ರಹಗಳನ್ನು 23 ಘರ್ಷಣೆಗಳಿಂದ ರಕ್ಷಣೆ ಮಾಡಲು ಹೊಸ ತಂತ್ರಗಳನ್ನು ರೂಪಿಸಿತ್ತು. ಚಂದ್ರಯಾನ-3 ಮತ್ತು ಆದಿತ್ಯ-L1 ನಂತಹ ಉನ್ನತ-ಪ್ರೊಫೈಲ್ ಮಿಷನ್‌ಗಳು ಬಾಹ್ಯಾಕಾಶದಲ್ಲಿದ್ದಾಗ ಯಾವುದೇ ರೀತಿಯ ಇತರ ರಕ್ಷಣಾ ಮಿಷನ್​​​ಗಳ ಅವಶ್ಯಕತೆ ಇರಲಿಲ್ಲ ಎಂದು ಹೇಳಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:43 pm, Tue, 30 April 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್