ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸಿನಿಮಾ ಪ್ರದರ್ಶನಕ್ಕೆ ತಡೆ: ಮಹಾರಾಷ್ಟ್ರ ಕಾಂಗ್ರೆಸ್ ಬೆದರಿಕೆ

Fuel Price : ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್, ಮೋದಿ ನಿಲುವು ಹೊಂದಿರುವುದನ್ನು ಖಂಡಿಸಿದ ಪಟೋಲೆ, ಈ ನಟರು ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಇಂಧನ ಏರಿಕೆ ಬೆಲೆಯನ್ನು ಖಂಡಿಸಿದ್ದರು. ಆದರೆ ಈಗ ಮೌನವಹಿಸಿದ್ದಾರೆ ಎಂದು ಗುಡುಗಿದ್ದಾರೆ.

ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸಿನಿಮಾ ಪ್ರದರ್ಶನಕ್ಕೆ ತಡೆ: ಮಹಾರಾಷ್ಟ್ರ ಕಾಂಗ್ರೆಸ್ ಬೆದರಿಕೆ
ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್

Updated on: Feb 19, 2021 | 3:41 PM

ಮುಂಬೈ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಇಂಧನ ಏರಿಕೆ ಬಗ್ಗೆ ಮೌನ ವಹಿಸಿದ್ದೇಕೆ ಎಂದು ಪ್ರಶ್ನಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಈ ನಟರ ಸಿನಿಮಾಗಳನ್ನು ರಾಜ್ಯದಲ್ಲಿ ತೆರೆ ಕಾಣಲು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ.

ಬಚ್ಚನ್ ಮತ್ತು ಅಕ್ಷಯ್ ಕುಮಾರ್, ಮೋದಿ ನಿಲುವು ಹೊಂದಿರುವುದನ್ನು ಖಂಡಿಸಿದ ಪಟೋಲೆ, ಈ ನಟರು ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಇಂಧನ ಏರಿಕೆ ಬೆಲೆಯನ್ನು ಖಂಡಿಸಿದ್ದರು. ಆದರೆ ಈಗ ಮೌನವಹಿಸಿದ್ದಾರೆ. ಬಚ್ಚನ್ ಮತ್ತು ಇತರ ಸೆಲೆಬ್ರಿಟಿಗಳು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಅವಧಿಯಲ್ಲಿ ಅಂದರೆ ಮೇ 24 , 2012ರಂದು ಇಂಧನ ಬೆಲೆ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ ಇಂಧನ ಬೆಲೆ ಏರಿಕೆಯಾಗಿ ಸಾರ್ವತ್ರಿಕ ದಾಖಲೆ ಸೃಷ್ಟಿಸಿರುವಾಗ ಇವರೆಲ್ಲರೂ ಸುಮ್ಮನಿದ್ದಾರೆ.

ಯುಪಿಎ ಸರ್ಕಾರ ಪ್ರಜಾಪ್ರಭುತ್ವ ಸರ್ಕಾರವಾಗಿತ್ತು. ಆಗ ಇಂಧನ ಬೆಲೆ ಏರಿಕೆಯಾಗಿದ್ದನ್ನು ಖಂಡಿಸಿ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು. ಈಗ ಪೆಟ್ರೊಲ್ ಬೆಲೆ 100ಕ್ಕೇರಿದೆ. ಈಗ ಅವರು ಮೋದಿ ಸರ್ಕಾರದ ಸರ್ವಾಧಿಕಾರ ಧೋರಣೆ ಬಗ್ಗೆ ಮಾತನಾಡುತ್ತಿಲ್ಲವೇಕೆ? ಎಂದು ಪಟೋಲೆ ಟ್ವೀಟ್ ಮಾಡಿದ್ದಾರೆ.

ಇವರ ಜಾಣಮೌನವನ್ನು ನಾವು ಖಂಡಿಸುತ್ತೇವೆ. ಈ ನಟರ ಯಾವುದೇ ಸಿನಿಮಾಗಳು, ಸಿನಿಮಾ ಚಿತ್ರೀಕಣ ಮಹಾರಾಷ್ಟ್ರದಲ್ಲಿ ನಡೆಯದಂತೆ ನಾವು ತಡೆಯೊಡ್ಡುತ್ತೇವೆ ಎಂದು ಪಟೋಲೆ ಹೇಳಿದ್ದಾರೆ.

ಇದನ್ನೂ ಓದಿ:  Petrol/Diesel Price: ಪೆಟ್ರೋಲ್ ದರ ಸಾರ್ವತ್ರಿಕ ದಾಖಲೆ -31 ಪೈಸೆ ಹೆಚ್ಚಳ, ಇಳಿಕೆಯ ಮಾತೇ ಇಲ್ಲ!