ಮಹಾರಾಷ್ಟ್ರದಲ್ಲಿ ಔರಂಗಬೇಬನ ಚರ್ಚೆ ಶುರುವಾಗಿದೆ, ಭಾರತದಲ್ಲಿನ ಯಾವುದೇ ಮುಸಲ್ಮಾನರು ಔರಂಗಜೇಬ್ನ ವಂಶಸ್ಥರಲ್ಲ, ಮೊಘಲ್ ಚಕ್ರವರ್ತಿಯನ್ನು ತಮ್ಮ ನಾಯಕ ಎಂದು ಪರಿಗಣಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ಹೇಳಿದ್ದಾರೆ. ಔರಂಗಜೇಬ್ ನಮ್ಮ ನಾಯಕನಾಗುವುದು ಹೇಗೆ? ನಮ್ಮ ರಾಜ ಒಬ್ಬನೇ ಅದು ಛತ್ರಪತಿ ಶಿವಾಜಿ, ದೇಶದ ರಾಷ್ಟ್ರೀಯ ಚಿಂತನೆ ಇರುವ ಮುಸ್ಲಿಮರು ಔರಂಗಜೇಬ್ ಅವರನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಮೊಘಲ್ ದೊರೆ ಔರಂಗಜೇಬನನ್ನು ಹೊಗಳುವ ಸಾಮಾಜಿಕ ಮಾಧ್ಯಮ ಸಂದೇಶಗಳು ಹಾಗೂ ವಾಟ್ಸ್ಆ್ಯಪ್ ಸ್ಟೇಟಸ್ಗಳು ಹಿಂಸಾಚಾರಕ್ಕೆ ಕಾರಣವಾಗಿದೆ.
ಮತ್ತಷ್ಟು ಓದಿ: ಮಹಾರಾಷ್ಟ್ರದಲ್ಲಿ ಔರಂಗಜೇಬ್ ಫೋಟೊ ಹಿಡಿದು ನೃತ್ಯ ಮಾಡಿದ 8 ಜನರ ವಿರುದ್ಧ ಪ್ರಕರಣ ದಾಖಲು
ಕೊಲ್ಹಾಪುರದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ನಂತರ ಅಸಾದುದ್ದೀನ್ ಓವೈಸಿಗೆ ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದ್ದರು. ಮಹಾರಾಷ್ಟ್ರದ ಒಂದಷ್ಟು ಜಿಲ್ಲೆಗಳಲ್ಲಿ ಔರಂಗಜೇಬನ ಮಕ್ಕಳು ಜನಿಸಿದ್ದಾರೆ , ತಮ್ಮ ಪೋಸ್ಟರ್ಗಳಲ್ಲಿ ಔರಂಗಜೇಬನ ಫೋಟೊ ಹಾಕಿದ್ದಾರೆ ಇದರಿಂದ ಗಲಾಟೆ ಆರಂಭವಾಗಿದೆ, ಓವೈಸಿ ಕೂಡ ಔರಂಗಜೇಬನ ವಂಶಸ್ಥರು ಎಂದು ಹೇಳಿದ್ದರು.
ಔರಂಗಜೇಬ್ನ ಪೋಸ್ಟರ್ ಹಾಕಿದ ಬಳಿಕ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ, ಡಾ. ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಔರಂಗಜೇಬ್ನ ಸಮಾಧಿಗೆ ಭೇಟಿ ನೀಡಿದ್ದಾರೆ ಇದರ ಬೆನ್ನಲ್ಲೇ ದೇವೇಂದ್ರ ಫಡ್ನವಿಸ್ ಈ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Mon, 19 June 23