Maharashtra Earthquake: ಮಹಾರಾಷ್ಟ್ರದಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪ

ಮಹಾರಾಷ್ಟ್ರದಲ್ಲಿ ಒಂದೇ ದಿನೆರಡು ಭೂಕಂಪಗಳು ಸಂಭವಿಸಿವೆ. ಮಹಾರಾಷ್ಟ್ರದ ಹಿಂಗೋಲಿ ನಗರದಲ್ಲಿ ಗುರುವಾರ ಮುಂಜಾನೆ 10 ನಿಮಿಷಗಳ ಅಂತರದಲ್ಲಿ 4.5 ಹಾಗೂ 3.6 ತೀವ್ರತೆಯ ಭೂಕಂಪಗಳು ವರದಿಯಾಗಿವೆ.

Maharashtra Earthquake: ಮಹಾರಾಷ್ಟ್ರದಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪ
ಭೂಕಂಪ
Follow us
|

Updated on:Mar 21, 2024 | 7:50 AM

ಮಹಾರಾಷ್ಟ್ರದಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪ(Earthquake)ಗಳು ಸಂಭವಿಸಿವೆ. ಮಹಾರಾಷ್ಟ್ರದ ಹಿಂಗೋಲಿ ನಗರದಲ್ಲಿ ಗುರುವಾರ ಮುಂಜಾನೆ 10 ನಿಮಿಷಗಳ ಅಂತರದಲ್ಲಿ 4.5 ಹಾಗೂ 3.6 ತೀವ್ರತೆಯ ಭೂಕಂಪಗಳು ವರದಿಯಾಗಿವೆ. ಇದು ನಗರದ 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಬೆಳಗ್ಗೆ 6.19ರ ಸುಮಾರಿಗೆ ಎರಡನೇ ಭೂಕಂಪದ ಅನುಭವವಾಗಿದೆ.

ಭೂಕಂಪದಿಂದ ಯಾವುದೇ ಆಸ್ತಿ-ಪಾಸ್ತಿ ಹಾನಿ ಅಥವಾ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಮರಾಠವಾಡದ ನಾಂದೇಡ್, ಪರ್ಭಾನಿ, ಹಿಂಗೋಲಿ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಹಲವರು ಭಯಭೀತರಾಗಿ ಮನೆಯಿಂದ ಹೊರಗೆ ಬಂದರು. ನಾಂದೇಡ್‌ನ ಉತ್ತರ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ.

ಬೆಳಗ್ಗೆ ಭೂಕಂಪ ಸಂಭವಿಸಿದೆ ಎಂಬ ಮಾಹಿತಿ ಇದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.2ರಷ್ಟು ದಾಖಲಾಗಿದೆ. ಈ ಭೂಕಂಪದ ಕೇಂದ್ರ ಬಿಂದು ಹಿಂಗೋಲಿ ಜಿಲ್ಲೆಯ ಅಖಾರ ಬಾಲಾಪುರ ಮತ್ತು ಇದರ ತೀವ್ರತೆಯನ್ನು ಹಿಂಗೋಲಿ ಪರ್ಭಾನಿ ನಾಂದೇಡ್ ಜಿಲ್ಲೆಯ ಎಲ್ಲಾ ಮೂರು ಗ್ರಾಮಗಳು ಅನುಭವಿಸಿವೆ. ಹಲವು ಮನೆಗಳ ಗೋಡೆಗಳು ಸಣ್ಣದಾಗಿ ಬಿರುಕು ಬಿಟ್ಟಿವೆ ಎಂದು ವರದಿಯಾಗಿದೆ. ಭೂಮಿಯ ಮೇಲ್ಮೈಯಲ್ಲಿನ ಚಲನೆಗಳು ಅಗಾಧ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ ಮತ್ತು ಭೂಕಂಪನ ಅಲೆಗಳನ್ನು ಸೃಷ್ಟಿಸುತ್ತವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:45 am, Thu, 21 March 24