ಮುಂಬೈ: ಮಹಾರಾಷ್ಟ್ರದ (Maharashtra) ಮಾಜಿ ಸಚಿವ ದೀಪಕ್ ಸಾವಂತ್ (Deepak Sawant) ಬುಧವಾರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾಗೆ ಸೇರಿದ್ದು ಉದ್ಧವ್ ಠಾಕ್ರೆ(Uddhav Thackeray) ನೇತೃತ್ವದ ಶಿವಸೇನಾಗೆ (ಯುಬಿಟಿ)ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಮುಂಬೈನ ಮೇಡಮ್ ಕಾಮಾ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿ ಬಾಳಾಸಾಹೇಬ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲ ಸಾವಂತ್ ಶಿಂಧೆ ಟೀಂ ಸೇರಿದ್ದಾರೆ. ಮೂರು ಬಾರಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಸಾವಂತ್ ಅವರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮಾರಂಭದಲ್ಲಿ ಸ್ವಾಗತಿಸಿದ್ದು, ಠಾಕ್ರೆ ನೇತೃತ್ವದ ಬಣದಿಂದ ಸಾವಂತ್ ಕಡ್ಡಾಯವಾಗಿ ನಿವೃತ್ತರಾಗಿದ್ದಾರೆ. ಅವರ ಅನುಭವದಿಂದ ನಾವು ಪ್ರಯೋಜನ ಪಡೆಯುತ್ತೇವೆ ಎಂದಿದ್ದಾರೆ.
ಈ ವಾರ ಪಕ್ಷಕ್ಕೆ ಸೇರ್ಪಡೆಯಾದ ಎರಡನೇ ಪ್ರಮುಖ ನಾಯಕರಾಗಿದ್ದಾರೆ ಸಾವಂತ್. ಸೋಮವಾರ, ಶಿವಸೇನಾ (ಯುಬಿಟಿ) ನಾಯಕ ಸುಭಾಷ್ ದೇಸಾಯಿ ಅವರ ಪುತ್ರ ಭೂಷಣ್ ದೇಸಾಯಿ ಏಕನಾಥ್ ಶಿಂಧೆ ಬಣ ಸೇರಿದ್ದರು. ಪಕ್ಷದ ಹಿರಿಯ ನಾಯಕರಾದ ಸುಭಾಷ್ ದೇಸಾಯಿ ಅವರನ್ನು ಠಾಕ್ರೆ ಕುಟುಂಬಕ್ಕೆ ಆಪ್ತರು ಮತ್ತು ಪಕ್ಷದ ಮುಖವಾಣಿ ಸಾಮ್ನಾ ಮಾಲೀಕತ್ವದ ಪ್ರಬೋಧನ್ ಪ್ರಕಾಶನದ ಟ್ರಸ್ಟಿ ಎಂದು ಪರಿಗಣಿಸಲಾಗಿದೆ.
ಬುಧವಾರದ ಕಾರ್ಯಕ್ರಮದಲ್ಲಿ ಶಿಂಧೆ, ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರಿಂದ ಪ್ರಭಾವಿತರಾದ ದೀಪಕ್ ಸಾವಂತ್ ಅವರು ಮಹಾರಾಷ್ಟ್ರದ ಬುಡಕಟ್ಟು ಪ್ರದೇಶಗಳಲ್ಲಿನ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಮತ್ತು ದೂರದ ಪ್ರದೇಶಗಳ ಜನರಿಗೆ ಆರೋಗ್ಯವನ್ನು ತಲುಪಿಸಲು ಟೆಲಿಮೆಡಿಸಿನ್ ಬಳಕೆಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದಕ್ಕಾಗಿ ಶ್ಲಾಘಿಸಿದರು.
ಪ್ರಚಾರದಿಂದ ದೂರ ಉಳಿದು ಸದ್ದಿಲ್ಲದೆ ಕೆಲಸ ಮಾಡಿದರು. ನಾನು ಅವರನ್ನು ಶಿವಸೇನಾಗೆ ಸ್ವಾಗತಿಸುತ್ತೇನೆ ಅವರ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಶಿಂಧೆ ಹೇಳಿದ್ದಾರೆ.
ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ-ಶಿವಸೇನಾ ಸಮ್ಮಿಶ್ರ ಸರ್ಕಾರದಲ್ಲಿ ಸಾವಂತ್ ಅವರು 2014 ಮತ್ತು 2018 ರ ನಡುವೆ ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಆದರೆ ಉದ್ಧವ್ ಠಾಕ್ರೆ ಅವರಿಗೆ ವಿಧಾನ ಪರಿಷತ್ತಿನಲ್ಲಿ ಮತ್ತೊಂದು ಅವಧಿಯನ್ನು ನೀಡದಿರಲು ನಿರ್ಧರಿಸಿದರು. 2018 ರಲ್ಲಿ ಸಾವಂತ್ ಅವರು ಸಂಪುಟದಿಂದ ನಿರ್ಗಮಿಸಿದ ನಂತರ, ಫಡ್ನವೀಸ್ ಅವರು ಆಗ ತಮ್ಮ ತಂಡದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆಗೆ ತಮ್ಮ ಖಾತೆಯನ್ನು ನೀಡಿದ್ದರು.
ನಾನು ಮಂತ್ರಿಯಾಗಲು ಬಯಸುವುದಿಲ್ಲ ಆದರೆ ನನ್ನ ಕೌಶಲ್ಯವನ್ನು ಪಕ್ಷವು ಬಳಸಬೇಕೆಂದು ಬಯಸುತ್ತೇನೆ ಎಂದಿದ್ದರು ಸಾವಂತ್.
“ನಾನು ನನ್ನ ಕೌಶಲ್ಯಗಳನ್ನು ಬಳಸಲು ಬಯಸಿದ್ದೆ. ಅವಕಾಶವನ್ನು ಪಡೆದುಕೊಂಡಿದ್ದೇನೆ ಮತ್ತು ಆದ್ದರಿಂದ ನಾನು ಶಿವಸೇನಾದೊಂದಿಗೆ ಕೆಲಸ ಮಾಡಲು ನಿರ್ಧರಿಸಿದೆ. ನನಗೆ ಮಂತ್ರಿಗಿರಿ ಬೇಡ, ನಾನು ಕೆಲಸ ಮಾಡಲು ಮಾತ್ರ ಬಯಸುತ್ತೇನೆ… ಆದರೆ ಉದ್ಧವ್ ಜೀ ಅವರು ನನಗೆ ಏಕೆ ಯಾವುದೇ ಕೆಲಸವನ್ನು ವಹಿಸಲಿಲ್ಲ ಎಂದು ನನಗೆ ಗೊತ್ತಿಲ್ಲ. ನಾನು ಶಿವಸೇನಾವನ್ನು ತಳಮಟ್ಟದವರೆಗೆ ಕೊಂಡೊಯ್ಯಲು ಬಯಸುತ್ತೇನೆ ಎಂದಿದ್ದಾರೆ ಸಾವಂತ್ ಹೇಳಿದ್ದಾರೆ.
ಅವರು ಏಕನಾಥ್ ಶಿಂಧೆ ಅವರ ಪರಿಕಲ್ಪನೆಯಡಿಯಲ್ಲಿ ಬಾಳ್ ಠಾಕ್ರೆ ಅಪಘಾತ ವಿಮಾ ಯೋಜನೆಯನ್ನು ಪ್ರಾರಂಭಿಸಲು ಕೇಳಿಕೊಂಡರು. ಅಂಧೇರಿಯಲ್ಲಿ ವಾಸಿಸುವ ಸಾವಂತ್ ಈ ವರ್ಷದ ಜನವರಿಯಲ್ಲಿ ಟ್ರಕ್ ಅವರ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ