ಹನುಮಾನ್ ಚಾಲೀಸಾ ವಿವಾದ: ಶಾಸಕ ರವಿ ರಾಣಾ, ಅವರ ಪತ್ನಿ ವಿರುದ್ಧ ದೇಶದ್ರೋಹ ಕಾಯ್ಡೆಯಡಿ ಆರೋಪ; 14 ದಿನಗಳ ನ್ಯಾಯಾಂಗ ಬಂಧನ

| Updated By: ರಶ್ಮಿ ಕಲ್ಲಕಟ್ಟ

Updated on: Apr 24, 2022 | 4:34 PM

ಉದ್ಧವ್ ಠಾಕ್ರೆ ಅವರ ನಿವಾಸ 'ಮಾತೋಶ್ರೀ' ಹೊರಗೆ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ಘೋಷಿಸಿದ ನಂತರ ದಂಪತಿಯನ್ನು ಶನಿವಾರ ತಡರಾತ್ರಿ ಬಂಧಿಸಲಾಗಿದೆ.

ಹನುಮಾನ್ ಚಾಲೀಸಾ ವಿವಾದ: ಶಾಸಕ ರವಿ ರಾಣಾ, ಅವರ ಪತ್ನಿ ವಿರುದ್ಧ ದೇಶದ್ರೋಹ ಕಾಯ್ಡೆಯಡಿ ಆರೋಪ; 14 ದಿನಗಳ ನ್ಯಾಯಾಂಗ ಬಂಧನ
ರವಿ ರಾಣಾ ಮತ್ತು ಅವರ ಪತ್ನಿ
Follow us on

ಮುಂಬೈ:ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು (mumbai Police) ಈ ಹಿಂದೆ ಬಂಧಿಸಿದ್ದ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ ಸಂಸದೆ, ನವನೀತ್ ರಾಣಾ ವಿರುದ್ಧ ಮಹಾರಾಷ್ಟ್ರ ಸರ್ಕಾರ ದೇಶದ್ರೋಹ ಕಾಯ್ದೆಯಡಿ (Sedition Act) ಆರೋಪವನ್ನು ಹೊರಿಸಿದೆ. ಉದ್ಧವ್ ಠಾಕ್ರೆ (Uddhav Thackeray) ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ (Hanuman Chalisa) ಪಠಣ ಮಾಡುವುದಾಗಿ ಘೋಷಿಸಿದ ನಂತರ ದಂಪತಿಯನ್ನು ಶನಿವಾರ ತಡರಾತ್ರಿ ಬಂಧಿಸಿದ್ದು ಇದು ನಗರದಲ್ಲಿ ಭಾರೀ ಪ್ರತಿಭಟನೆಗಳು ಮತ್ತು ಅಶಾಂತಿಯನ್ನು ಉಂಟುಮಾಡಿತು.
ಇವರ ವಿರುದ್ಧ ಬಾಂಬೆ ಪೊಲೀಸ್ ಕಾಯ್ದೆಯ ಸೆಕ್ಷನ್ 153 ಎ, 35, 37, 135 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಖಾರ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 353 (ಸಾರ್ವಜನಿಕ ಸೇವಕನ ಕರ್ತವ್ಯ ನಿರ್ವಹಣೆಯನ್ನು ತಡೆಯಲು ಆಕ್ರಮಣ ಅಥವಾ ಕ್ರಿಮಿನಲ್ ಬಲ) ಅಡಿಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ. ದಂಪತಿಯನ್ನು ಭಾನುವಾರದಂದು ಬಾಂದ್ರಾ ಹಾಲಿಡೇ ಕೋರ್ಟ್‌ಗೆ ಕರೆದೊಯ್ಯಲಾಯಿತು. ಅಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ಇಬ್ಬರ ವಿರುದ್ಧ ದೇಶದ್ರೋಹ ಕಾಯ್ದೆಯನ್ನು ಹೊರಿಸಲಾಗಿದೆ ಎಂದು ಹೇಳಿದರು. “ಸರ್ಕಾರ ಮತ್ತು ಮುಖ್ಯಮಂತ್ರಿಯ ವಿರುದ್ಧ ಅವರು ಹರಡಿದ ದ್ವೇಷ ಮತ್ತು ತೆಗಳಿಕೆಯ ಕಾರಣಕ್ಕಾಗಿ ಅವರ ವಿರುದ್ಧ ಸೆಕ್ಷನ್ 124 ಎ ಅನ್ನು ಅನ್ವಯಿಸಲಾಗಿದೆ” ಎಂದು ಘರತ್ ಹೇಳಿದ್ದಾರೆ.

ದಂಪತಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮುಂಬೈ ಪೊಲೀಸರು ಪೊಲೀಸ್ ಕಸ್ಟಡಿಗೆ ಆಗ್ರಹಿಸಿದ್ದರು ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ದಂಪತಿ ಜಾಮೀನು ಅರ್ಜಿ ಸಲ್ಲಿಸಿದ್ದು, ಏಪ್ರಿಲ್ 29 ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: Yes Bank Scam ಪ್ರಿಯಾಂಕಾ ಗಾಂಧಿಯಿಂದ ಎಂಎಫ್ ಹುಸೇನ್ ಪೇಂಟಿಂಗ್ ಖರೀದಿಸುವಂತೆ ಒತ್ತಾಯಿಸಲಾಯಿತು, ಅದಕ್ಕೆ 2 ಕೋಟಿ ಪಾವತಿಸಿದ್ದೇನೆ: ರಾಣಾ ಕಪೂರ್