LSG vs MI: ಇಂದು ಲಖನೌ vs ಮುಂಬೈ: ಸಚಿನ್ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ ಕೊಡ್ತಾರಾ ರೋಹಿತ್

LSG vs MI: ಇಂದು ಲಖನೌ vs ಮುಂಬೈ: ಸಚಿನ್ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ ಕೊಡ್ತಾರಾ ರೋಹಿತ್
LSG vs MI IPL 2022

IPL 2022: ಐಪಿಎಲ್​ನಲ್ಲಿಂದು ಲಖನೌ ಸೂಪರ್ ಜೇಂಟ್ಸ್ ತಂಡ ಸತತ ಸೋಲಿನಿಂದ ಕಂಗೆಟ್ಟಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (LSG vs MI) ತಂಡವನ್ನು ಎದುರಿಸಲಿದೆ. ಇಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬವಾಗಿದ್ದು ಮುಂಬೈ ಇಂಡಿಯನ್ಸ್ ಗೆಲುವಿನ ಉಡುಗೊರೆ ನೀಡುತ್ತಾ ನೋಡಬೇಕಿದೆ.

TV9kannada Web Team

| Edited By: Vinay Bhat

Apr 24, 2022 | 10:47 AM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬಹುಮುಖ್ಯ ಪಂದ್ಯ ನಡೆಯಲಿದೆ. ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ಸತತ ಸೋಲಿನಿಂದ ಕಂಗೆಟ್ಟಿರುವ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (LSG vs MI) ತಂಡವನ್ನು ಎದುರಿಸಲಿದೆ. 15ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಿದ ಏಳು ಪಂದ್ಯಗಳ ಪೈಕಿ ಏಳರಲ್ಲೂ ಸೋಲುಂಡಿರುವ ಮುಂಬೈ ಇಂದಾದರು ಗೆಲುವಿನ ಖಾತೆ ತೆರೆಯುತ್ತಾ ಎಂಬುದು ಕುತೂಹಲ ಕೆರಳಿಸಿದೆ. ಅಲ್ಲದೆ ಇಂದು ಮುಂಬೈ ಇಂಡಿಯನ್ಸ್ ತಂಡದ ಮೆಂಟರ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹುಟ್ಟುಹಬ್ಬವಾಗಿದ್ದು ಗೆಲುವಿನ ಉಡುಗೊರೆ ನೀಡುತ್ತಾ ನೋಡಬೇಕಿದೆ. ಮುಂಬೈ ತಂಡದ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ಕ್ಷೀಣಿಸಿದೆ. ಅಕಸ್ಮಾತ್‌ ಲಖನೌ ವಿರುದ್ಧವೂ ಎಡವಿದರೆ ತಂಡದ ನಿರ್ಗಮನ ಬಹುತೇಕ ಖಚಿತಗೊಳ್ಳಲಿದೆ. ಲಖನೌ 7 ಪಂದ್ಯಗಳಲ್ಲಿ 4ನ್ನು ಗೆದ್ದು 8 ಅಂಕವನ್ನು ಪಡೆದಿದೆ.

ಲಖನೌ ತಂಡಕ್ಕೆ ಕಾಂಬಿನೇಷನ್​​ ಸಮಸ್ಯೆ ಕಾಣುತ್ತಿಲ್ಲ. ನಾಯಕ ಕೆಎಲ್​​. ರಾಹುಲ್​ ಮತ್ತು ಕ್ವಿಂಟಾನ್​​ ಡಿ ಕಾಕ್​​​ ತಂಡಕ್ಕೆ ಬೇಕಾದ ಆಟ ಆಡುತ್ತಿದ್ದಾರೆ. ಮನೀಶ್​​ ಪಾಂಡೆಯ ಫಾರ್ಮ್​ ಸಮಸ್ಯೆ ಆಗಿದೆ. ಆದರೆ, ಫೀಲ್ಡಿಂಗ್​ನಲ್ಲಿ ಚುರುಕಾಗದ್ದಾರೆ. ಆದರೂ ಇವರ ಜಾಗಕ್ಕೆ ಆಲ್​​ರೌಂಡರ್​​ ಕೃಷ್ಣಪ್ಪ ಗೌತಮ್​ಗೆ ಮತ್ತೆ ಅವಕಾಶ ಸಿಗಬಹುದು. ಮನನ್ ವೊಹ್ರಾ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆಲ್ರೌಂಡರ್​ಗಳಾದ ಮಾರ್ಕಸ್ ಸ್ಟೋಯಿನಿಸ್‌, ಕೃನಾಲ್ ಪಾಂಡ್ಯ, ಹೋಲ್ಡರ್‌ ಅವರನ್ನೊಳಗೊಂಡ ಲಖನೌ ಬ್ಯಾಟಿಂಗ್‌ ಲೈನ್‌ಅಪ್‌ ಸಾಕಷ್ಟು ವೈವಿಧ್ಯಮಯ. ಬೌಲಿಂಗ್​​ನಲ್ಲಿ ​​ ಹೋಲ್ಡರ್​​ ಮತ್ತು ಆವೇಶ್​​ ಖಾನ್​​ ಯಾವ ಹಂತದಲ್ಲಿ ಬೇಕಾದರೂ ಬೌಲಿಂಗ್​​ ಮಾಡುತ್ತಾರೆ. ಕೃನಾಲ್​​ ಮತ್ತು ರವಿ ಬಿಷ್ಣೋಯಿ ಸ್ಪಿನ್​​ ಕೂಡ ಮ್ಯಾಜಿಕ್​ ಮಾಡಬಹುದು. ದುಶ್ಮಂತ್​ ಚಾಮೀರ ವೇಗದ ಬೌಲಿಂಗ್​ಗೆ ಬಲ ನೀಡುತ್ತಾರೆ. ಸ್ಟೋಯ್ನಿಸ್​​, ಹೂಡ ಮತ್ತು ಗೌತಮ್​​ ಕೂಡ ಬೌಲಿಂಗ್​​ ನಲ್ಲಿ ಕೈ ಜೋಡಿಸಬಲ್ಲರು.

ಇತ್ತ ಗೆಲುವಿನ ಕಾಂಬಿನೇಷನ್ ಕಂಡುಕೊಳ್ಳಲು ಪರದಾಡುತ್ತಿರುವ ಮುಂಬೈ ತಂಡದಲ್ಲಿ ಹೆಚ್ಚಿನ ಬದಲಾವಣೆಯಾದರೆ ಅಚ್ಚರಿ ಇಲ್ಲ. ಕಳೆದ ಪಂದ್ಯದಲ್ಲಿ ಧೋನಿ ಎದುರು ಕೊನೇ ಓವರ್‌ನಲ್ಲಿ ದುಬಾರಿಯಾಗಿದ್ದ ಜೈದೇವ್ ಉನಾದ್ಕತ್‌ಗೆ ಕೊಕ್ ನಿರೀಕ್ಷಿಸಲಾಗಿದ್ದು, ಯುವ ವೇಗಿ ಅರ್ಜುನ್ ತೆಂಡುಲ್ಕರ್ ಅವಕಾಶ ಪಡೆಯಬಹುದು ಅಥವಾ ಬಸಿಲ್ ಥಂಪಿ ಮತ್ತೆ ಕಣಕ್ಕಿಳಿಯಬಹುದು. ಸತತ ವೈಲ್ಯ ಕಾಣುತ್ತಿರುವ ಕೈರಾನ್ ಪೊಲ್ಲಾರ್ಡ್‌ಗೆ ಕೊಕ್ ನೀಡಿದರೆ, ಟಿಮ್ ಡೇವಿಡ್ ಆಡಬಹುದು. ಡೆವಾಲ್ಡ್​​ ಬ್ರೆವಿಸ್​​​​ ಮತ್ತು ತಿಲಕ್​​ ವರ್ಮಾ ಹೋರಾಟವೂ ಫಲ ನೀಡುತ್ತಿಲ್ಲ. ಬೌಲಿಂಗ್​​ ವೀಕ್ನೆಸ್​ ಕೂಡ ಇದೆ. ಜಸ್​​ ಪ್ರಿತ್​​ ಬುಮ್ರಾಗೆ ಟೂರ್ನಿಯಲ್ಲಿ ಒಂದೇ ಒಂದು ವಿಕೆಟ್​​ ಬಿದ್ದಿಲ್ಲ. ಡೇನಿಯಲ್​​ ಸ್ಯಾಮ್ಸ್​​ ಕಳೆದ ಪಂದ್ಯದಲ್ಲಿ ಮಿಂಚಿದರೂ ಸ್ಥಿರತೆ ಇಲ್ಲ.

ಪಿಚ್ ರಿಪೋರ್ಟ್ ಬಗ್ಗೆ ನೋಡುವುದಾದರೆ ವಾಂಖೆಡೆ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಸ್ವರ್ಗ ಎನಿಸಿಕೊಂಡಿದೆ. ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕಾರಣ ದೊಡ್ಡ ಮೊತ್ತವನ್ನು ಇಲ್ಲಿ ನಿರೀಕ್ಷಿಸಲಾಗುತ್ತಿದೆ. ಇನ್ನಿಂಗ್ಸ್‌ನ ಆರಂಭದಲ್ಲಿ ವೇಗಿಗಳಿಗೆ ಸ್ವಲ್ಪ ನೆರವು ಸಿಗಬಹುದು. ಇನ್ನು ಇಬ್ಬನಿ ಈ ಪಂದ್ಯದಲ್ಲಿಯೂ ಹೆಚ್ಚಿನ ಪರಿಣಾಮವನ್ನು ಬೀರಬಹುದು. ಕಳೆದ ಬಾರಿ ರಾಜಸ್ಥಾನ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಪಂದ್ಯವು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಹೆಚ್ಚು ಸ್ಕೋರ್‌ ಮಾಡಲು ಇಲ್ಲಿನ ಪಿಚ್‌ ಸಹಕರಿಸಿತ್ತು. ಇನ್ನು ಈ ಕ್ರೀಡಾಂಗಣ ಶಾರ್ಟ್‌ ಬೌಂಡರಿಯನ್ನು ಹೊಂದಿದ್ದು, ಸುಲಭವಾಗಿ ರನ್‌ ಕಲೆ ಹಾಕಬಹುದಾಗಿದೆ.

ಸಂಭಾವ್ಯ ಪ್ಲೇಯಿಂಗ್-11:

ಲಖನೌ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಕೃಷ್ಣಪ್ಪ ಗೌತಮ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಅವೇಶ್ ಖಾನ್, ರವಿ ಬಿಷ್ಣೋಯ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್, ಹೃತಿಕ್ ಶೋಕಿನ್, ಬಸಿಲ್ ಥಂಪಿ, ಡೇನಿಯಲ್ ಸಾಮ್ಸ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್.

Sachin Tendulkar Birthday: ಇಂದು ಕ್ರಿಕೆಟ್ ದೇವರ ಹುಟ್ಟುಹಬ್ಬ: ಸಚಿನ್ ತೆಂಡೂಲ್ಕರ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೇ?

Faf du Plessis: ಹೀನಾಯವಾಗಿ ಸೋತರೂ ಧೃತಿಗೆಡದ ಡುಪ್ಲೆಸಿಸ್: ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೇ?

Follow us on

Related Stories

Most Read Stories

Click on your DTH Provider to Add TV9 Kannada