ಮುಂಬೈ: ರಾಜ್ಯದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಬುಧವಾರ ಬ್ರೈಲ್ ಲಿಪಿಯಲ್ಲಿ ರಚಿತವಾದ ಭಾರತೀಯ ಸಂವಿಧಾನದ ಪ್ರತಿಯನ್ನು ಬಿಡುಗಡೆಗೊಳಿಸಿದ್ದಾರೆ. ವಿಶೇಷ ದೃಷ್ಟಿಚೇತನರಿಗೂ ಭಾರತೀಯ ಸಂವಿಧಾನವನ್ನು ಓದುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಈ ಕಾರ್ಯ ಕೈಗೊಂಡಿದೆ. ಸಚಿವ ಓಂಪ್ರಕಾಶ್ ಬಾಬುರಾವ್ ಕಾಡು (ಬಚು ಕಾಡು) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ವಿಶೇಷ ದೃಷ್ಟಿಚೇತನರೂ ಸಂವಿಧಾನವನ್ನು ಓದುವಂತ ಮೌಲ್ಯಯುತ ಕೆಲಸವನ್ನು ಮಾಡಲಾಗಿದೆ. ದಿವ್ಯಾಂಗರಿಗಾಗಿ ತಯಾರಿಸಿದ ಈ ಪ್ರತಿಯನ್ನು ಬಿಡುಗಡೆಗೊಳಿಸಲು ತುಂಬಾ ಸಂತೋಷವಾಗುತ್ತದೆ ಎಂದು ಸಚಿವ ಮುಂಡೆ ತಿಳಿಸಿದ್ದಾರೆ. ಥಾಣೆ ಮೂಲದ ಅಸ್ತಿತ್ವ ಎಂಬ ಎನ್ಜಿಒ ಸಂಸ್ಥೆಯೊಂದು ಸಂವಿಧಾನದ ಪ್ರತಿಯನ್ನು ತಯಾರಿಸಿದೆ ಎಂದು ಮೂಲಗಳು ತಿಳಿಸಿವೆ.
भारतीय लोकशाहीचा आत्मा असलेले आपले संविधान आज ठाणे येथील अस्तित्व फाउंडेशन, प्रियांका ताई झाल्टे यांच्यासह सहकाऱ्यांच्या प्रयत्नातून दृष्टिहीन दिव्यांगांसाठी ब्रेल लिपीतून उपलब्ध करून देण्यात आले. याचे प्रकाशन माझ्यासह मान्यवरांच्या हस्ते करण्यात आले. @RealBacchuKadu pic.twitter.com/yTy1pAOrfz
— Dhananjay Munde (@dhananjay_munde) December 16, 2020
ತುಂಬು ಕುಟುಂಬ: 14 ಜನರ ಪೈಕಿ 9 ಜನ ಅಂಧರು, ಎರಡು ವರ್ಷಗಳಿಂದ ಸಿಗುತ್ತಿಲ್ಲ ಅಂಧತ್ವ ವೇತನ
Published On - 12:10 pm, Mon, 21 December 20