Sparrow Literary Award 2020 ಅನುವಾದ ವಿಜೇತರು: ಕೆ. ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ
ಮುಂಬೈ ಮೂಲದ ಶ್ರೀರಾಮ ಸಂಸ್ಥೆಯು ಕೊಡಮಾಡುವ 2020ರ ಸಾಲಿನ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿಗೆ ಸಾಹಿತಿಗಳಾದ ಕೆ.ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ ಮತ್ತು ಎಸ್.ಎ. ವೇಂಗದಾ ಸೌಪ್ರಯಾ ನಯಾಗರ್ ಭಾಜನರಾಗಿದ್ದಾರೆ.
ಮುಂಬೈ ಮೂಲದ ಶ್ರೀರಾಮ ಸಂಸ್ಥೆಯು ಕೊಡಮಾಡುವ 2020ರ ಸಾಲಿನ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿಗೆ ಸಾಹಿತಿಗಳಾದ ಕೆ.ನಲ್ಲತಂಬಿ, ಕೃಶಾಂಗಿನಿ, ಮಧುಮಿತಾ ಮತ್ತು ಎಸ್.ಎ. ವೇಂಗದಾ ಸೌಪ್ರಯಾ ನಯಾಗರ್ ಭಾಜನರಾಗಿದ್ದಾರೆ.
ಅನುವಾದ ಸಾಹಿತ್ಯಕ್ಕೆಂದೇ ಮೀಸಲಾಗಿರುವ ಈ ಪ್ರಶಸ್ತಿ, ಆರು ವರ್ಷಗಳಿಂದ ಪ್ರಾದೇಶಿಕ-ತಮಿಳು, ತಮಿಳು-ಪ್ರಾದೇಶಿಕ, ತಮಿಳು-ಸಂಸ್ಕೃತ, ಸಂಸ್ಕೃತ-ತಮಿಳು, ವಿದೇಶಿ-ತಮಿಳು, ತಮಿಳು-ವಿದೇಶಿ ಭಾಷೆಗಳ ಅನುವಾದಕರನ್ನು ಗುರುತಿಸಿ ಪುರಸ್ಕರಿಸುತ್ತ ಬಂದಿದೆ. ಕೃಶಾಂಗಿನಿಯವರು ಹಿಂದಿಯಿಂದ ತಮಿಳಿಗೆ, ಮಧುಮಿತಾ ಅವರು ಸಂಸ್ಕೃತದಿಂದ ತಮಿಳಿಗೆ, ವೇಂಗದಾ ಅವರು ಫ್ರೆಂಚ್ನಿಂದ ತಮಿಳಿಗೆ ಕೃತಿಗಳನ್ನು ಅನುವಾದಿಸಿದ್ದಾರೆ.
‘ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕ. ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ನಿವೃತ್ತಿಯಾದ ಮೇಲೆ ಏನು ಮಾಡುವುದೆಂದು ತೋರದೆ ಸುಮ್ಮನೆ ಲಂಕೇಶರ ‘ನೀಲು ಕಾವ್ಯ’ಗಳನ್ನು ತಮಿಳಿಗೆ ಅನುವಾದಿಸಲಾರಂಭಿಸಿದೆ. ಹೆಂಡತಿ ಮಲ್ಲಿಕಾಳ ಒತ್ತಾಯ, ಒಂದಿಷ್ಟು ಪರಿಶ್ರಮದ ನಂತರ ಪತ್ರಿಕೆಗಳಿಗೆ ಕಳಿಸಿದೆ, ಪ್ರಕಟವಾದವು. ನಂತರ ಫೇಸ್ಬುಕ್ ಕವಿತೆಗಳನ್ನು ಕನ್ನಡಕ್ಕೂ, ತಮಿಳಿಗೂ ಅನುವಾದಿಸಲಾರಂಭಿಸಿದೆ. ಕೊರೋನಾದಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಪ್ರಶಸ್ತಿ ನನ್ನ ಅನುವಾದ ಯಾನಕ್ಕೆ ಚೈತನ್ಯ ಸ್ಫುರಿಸಿದೆ. ಈ ಗೌರವ ನನಗೆ ಮಾತ್ರವಲ್ಲ, ಅನುವಾದ ಕ್ಷೇತ್ರಕ್ಕೂ ಸಲ್ಲುವಂಥದ್ದು. ಹೆಚ್ಚೆಚ್ಚು ಅನುವಾದಗಳು ಹೊರಬರಲಿ, ಪರಸ್ಪರ ಭಾಷಿಕರು ಓದುವಂತಾಗಲಿ.’ ಎಂದು 2020ರ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೆ. ನಲ್ಲತಂಬಿ tv9 ಡಿಜಿಟಲ್ ನೊಂದಿಗೆ ಅಭಿಪ್ರಾಯ ಹಂಚಿಕೊಂಡರು.
ನಲ್ಲತಂಬಿಯವರನ್ನು ಕನ್ನಡಿಗರಿಗೆ ಪರಿಚಯಿಸಿದ್ದು ಪೆರುಮಾಳ್ ಮುರುಗನ್ ಅವರ ‘ಅರ್ಧನಾರೀಶ್ವರ’. ನಂತರ ವಿವೇಕ ಶಾನಭಾಗರ ‘ಘಾಚರ್ ಘೋಚರ್’, ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’, ವಸುಧೇಂದ್ರರ ‘ಮೋಹನಸ್ವಾಮಿ’, ಎಸ್. ದಿವಾಕರ್ ಅವರ ‘ಇತಿಹಾಸ’, ಜಯಂತ ಕಾಯ್ಕಿಣಿಯವರ ‘ತೂಫಾನ್ ಮೇಲ್’, ರೇಣುಕಾ ನಿಡಗುಂದಿಯವರ ‘ಅಮೃತ ನೆನಪುಗಳು’ ಬಿ.ವಿ.ಭಾರತಿಯವರ ‘ಸಾಸುವೆ ತಂದವಳು’ ಕೃತಿಗಳನ್ನು ತಮಿಳಿಗೆ ಅನುವಾದಿಸಿದರು. ಸುಂದರ ರಾಮಾಸ್ವಾಮಿಯವರ ‘ಒರು ಪುಳಿಯ ಮರತ್ತಿನ್ ಕದೈ’, ನೇಮಿಚಂದ್ರರ ‘ಯಾದ್ವಶೇಮ್’, ಜಿ.ಎನ್.ನಾಗರಾಜರ ‘ನಿಜ ರಾಮಯಣದ ಅನ್ವೇಷಣೆ’, ಪೆರುಮಾಳ್ ಮುರುಗನ್ ‘ಹೂ ಕೊಂಡ’, ತಮಿಳು ಹತ್ತು ಕಥೆಗಳು ಕನ್ನಡಕ್ಕೂ ಅನುವಾದಗೊಂಡವು.
ಬೆಳಗೆರೆ ಬೆಳಗಿಸಿದ ಅನುವಾದ ಲೋಕ; ರಾಜ್ಯೋತ್ಸವದ ವೇಳೆ ಕನ್ನಡದ ಕಟ್ಟಾಳುವನ್ನ ಕಳೆದುಕೊಂಡ ಸಾರಸ್ವತ ಲೋಕ
Published On - 1:07 pm, Mon, 21 December 20