AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anil Deshmukh Resigns: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಸೂಚನೆ; ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ರಾಜೀನಾಮೆ

ಬಾಂಬೆ ಹೈಕೋರ್ಟ್ ಅನಿಲ್ ದೇಶ್​ಮುಖ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಈ ಬೆನ್ನಲ್ಲೇ ಎನ್​ಸಿಪಿ ನಾಯಕರೂ ಆಗಿರುವ ಅನಿಲ್ ದೇಶ್​ಮುಖ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Anil Deshmukh Resigns: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಸೂಚನೆ; ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ರಾಜೀನಾಮೆ
ಅನಿಲ್ ದೇಶ್​ಮುಖ್
TV9 Web
| Edited By: |

Updated on:Apr 05, 2022 | 12:49 PM

Share

ಮುಂಬೈ: ಸದ್ಯ ಅಮಾನತು ಆಗಿರುವ, ಮುಂಬೈ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಪ್ರತೀ ತಿಂಗಳು ₹ 100 ಕೋಟಿ ಸಂಗ್ರಹಿಸುವಂತೆ ಒತ್ತಡ ಹಾಕಿದ್ದರು ಎಂಬ  ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ಅನಿಲ್ ದೇಶ್​ಮುಖ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಈ ಬೆನ್ನಲ್ಲೇ ಎನ್​ಸಿಪಿ ನಾಯಕರೂ ಆಗಿರುವ ಅನಿಲ್ ದೇಶ್​ಮುಖ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ಪ್ರತಿ ತಿಂಗಳು ₹ 100 ಕೋಟಿ ಹಣ ವಸೂಲಿ ಒತ್ತಡ ಆರೋಪಿಸಿ ಪತ್ರ ಬರೆದಿದ್ದ ಪರಮ್​ವೀರ್ ಸಿಂಗ್ ಪ್ರಕರಣವನ್ನು ಸಿಬಿಐ ಮೆಟ್ಟಿಲೇರಿದೆ. 15 ದಿನದ ಒಳಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನಿಡುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ. ಈ ಹಿಂದೆ ನಡೆದಿದ್ದ ವಿಚಾರಣೆಯಲ್ಲಿ ಇನ್ನೂ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ಎಫ್​ಐಆರ್ ದಾಖಲಿಸಿಲ್ಲ ಎಂದು ಪ್ರಶ್ನಿಸಿತ್ತು.

ಕೆಲ ದಿನಗಳ ಹಿಂದೆ ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಹೊತ್ತಿದ್ದ ಕಾರು ಪತ್ತೆ ಪ್ರಕರಣ ರೋಚಕ ತಿರುವು ಪಡೆದಿತ್ತು. ಸಸ್ಪೆಂಡ್ ಆಗಿರುವ ಎಎಸ್ಐ​ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಬಾರ್ ಮತ್ತು ರೆಸ್ಟೊರೆಂಟ್​​ಗಳಿಂದ ಪ್ರತಿ ತಿಂಗಳು ₹ 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ವೀರ್ ಸಿಂಗ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಇಂದು ಪತ್ರ ಬರೆದಿದ್ದರು. ಈ ಗಂಭೀರ ಆರೋಪದಿಂದ ಮಹಾರಾಷ್ಟ್ರ ಶಿವಸೇನೆ-ಎನ್​ಸಿಪಿ ಮೈತ್ರಿಕೂಟದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ 15 ದಿನಗಳಲ್ಲಿ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸೂಚನೆ

ಇದನ್ನೂ ಓದಿ: ಅನಿಲ್ ದೇಶ್​ಮುಖ್ ಅಪರಾಧ ತಿಳಿದೂ ಎಫ್​ಐಆರ್ ದಾಖಲಿಸಿಲ್ಲ ಏಕೆ?; ಪರಮ್​ವೀರ್ ಸಿಂಗ್​ಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

Published On - 2:59 pm, Mon, 5 April 21

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು