AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ: ಇದೆಂಥಾ ಮೌಢ್ಯ, ಶಿಶುವಿಗೆ ಅನಾರೋಗ್ಯವೆಂದು 65 ಕಡೆ ಬರೆ ಹಾಕಿದ್ರು

ಶಿಶುವಿಗೆ ಅನಾರೋಗ್ಯವೆಂದು ಪೋಷಕರು 65 ಕಡೆ ಬರೆ ಎಳೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗುವಿಗೆ ಅನಾರೋಗ್ಯವಾದರೆ ಕಬ್ಬಿಣದ ಕಡ್ಡಿಯನ್ನು ಕಾಯಿಸಿ ಬರೆ ಹಾಕಿದರೆ ಗುಣವಾಗುವುದೆಂಬ ಮೂಢನಂಬಿಕೆಯಿಂದ ಮಗುವಿಗೆ ಬರೆ ಹಾಕಿದ್ದಾರೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇವಲ 22 ದಿನಗಳ ಶಿಶುವಿಗೆ 65 ಕಡೆ ಬರೆ ಹಾಕಲಾಗಿದೆ.

ಮಹಾರಾಷ್ಟ್ರ: ಇದೆಂಥಾ ಮೌಢ್ಯ, ಶಿಶುವಿಗೆ ಅನಾರೋಗ್ಯವೆಂದು 65 ಕಡೆ ಬರೆ ಹಾಕಿದ್ರು
ಮಗುImage Credit source: Firstcry
ನಯನಾ ರಾಜೀವ್
|

Updated on: Feb 28, 2025 | 9:21 AM

Share

ಮಹಾರಾಷ್ಟ್ರ, ಫೆಬ್ರವರಿ 28: ಶಿಶುವಿಗೆ ಅನಾರೋಗ್ಯವೆಂದು ಪೋಷಕರು 65 ಕಡೆ ಬರೆ ಎಳೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗುವಿಗೆ ಅನಾರೋಗ್ಯವಾದರೆ ಕಬ್ಬಿಣದ ಕಡ್ಡಿಯನ್ನು ಕಾಯಿಸಿ ಬರೆ ಹಾಕಿದರೆ ಗುಣವಾಗುವುದೆಂಬ ಮೂಢನಂಬಿಕೆಯಿಂದ ಮಗುವಿಗೆ ಬರೆ ಹಾಕಿದ್ದಾರೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇವಲ 22 ದಿನಗಳ ಶಿಶುವಿಗೆ 65 ಕಡೆ ಬರೆ ಹಾಕಲಾಗಿದೆ.

ಈ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಮಗುವಿನ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು, ಅಂತಿಮವಾಗಿ ಗಂಭೀರ ಸ್ಥಿತಿಯಲ್ಲಿ ಅಮರಾವತಿಯ ಡಫರಿನ್ ಆಸ್ಪತ್ರೆಗೆ ದಾಖಲಿಸಲಾಯಿತು.

ಫುಲ್ವಂತಿ ರಾಜು ಅಧಿಕಾರ್ ಎಂಬ ಶಿಶು ಅನಾರೋಗ್ಯಕ್ಕೆ ಒಳಗಾಗಿತ್ತು, ಸಂಬಂದಿಕರು ಬಂದವರು ಮಗುವಿಗೆ ಬರೆ ಹಾಕಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲಾ ಕಡೆ ಬರೆ ಎಳೆದಿದ್ದಾರೆ. ಮಗುವಿನ ಹೊಟ್ಟೆಗೆ 65 ಬಾರಿ ಬರೆ ಹಾಕಿದ್ದಾರೆ. ಮಗುವಿನ ಪೋಷಕರಾದ ರಾಜು ಅಧಿಕಾರ್ ಮತ್ತು ಅವರ ಪತ್ನಿ ಕೂಡ ಈ ಭಯಾನಕ ಘಟನೆಯಲ್ಲಿ ಭಾಗಿಯಾಗಿದ್ದಾರೆ.

ಈ ಕೃತ್ಯವು ಮಗುವಿನ ಅನಾರೋಗ್ಯವನ್ನು ಗುಣಪಡಿಸುತ್ತದೆ ಎಂದು ಸಂಬಂಧಿಕರು ನಂಬಿದ್ದರು, ಇದು ಆ ಪ್ರದೇಶದಲ್ಲಿ ಇನ್ನೂ ಅಪಾಯಕಾರಿ ಮತ್ತು ಅವೈಜ್ಞಾನಿಕ ಪದ್ಧತಿ ನಡೆಯುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ.

ಮತ್ತಷ್ಟು ಓದಿ: ಯಾದಗಿರಿಯಲ್ಲಿ‌ 2 ವಾರದ ಅಂತರದಲ್ಲಿ 3 ನವಜಾತ ಶಿಶುಗಳ ಸಾವು, 130ಕ್ಕೆ ಏರಿಕೆ

ಗಾಯಗಳ ತೀವ್ರತೆ ಮತ್ತು ಉಸಿರಾಟದ ತೊಂದರೆಯಿಂದಾಗಿ ಶಿಶುವನ್ನು ಆರಂಭದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಅಂತಿಮವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಅಮರಾವತಿಯ ಜಿಲ್ಲಾ ಮಹಿಳಾ ಆಸ್ಪತ್ರೆಯ ವೈದ್ಯರು ಮಗುವಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿದೆ ಎಂದು ಹೇಳಿದ್ದಾರೆ. ಹೊಟ್ಟೆಯ ಮೇಲೆ ಗಾಯಗಳಾಗಿರುವುದನ್ನು ಒಪ್ಪಿಕೊಂಡರೂ, ಪ್ರಾಥಮಿಕ ಕಾಳಜಿ ಮಗುವಿನ ಉಸಿರಾಟದ ತೊಂದರೆ ಎಂದು ಹೇಳಿದರು. ವಿಶೇಷ ಸೌಲಭ್ಯಗಳ ಕೊರತೆಯಿಂದಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ನಾಗ್ಪುರಕ್ಕೆ ಕಳುಹಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ