AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದಲ್ಲಿ ಬಳಸಿ ಎಸೆದ ಮಾಸ್ಕ್​ನಿಂದ ಹಾಸಿಗೆ ತಯಾರಿಸುತ್ತಿದ್ದ ಕಾರ್ಖಾನೆ ಬಂದ್!

ಬಳಸಿ ಬಿಸಾಡಿದ ಮುಖಗವಸುಗಳನ್ನು ಒಟ್ಟುಗೂಡಿಸಿ ಹಾಸಿಗೆ ತಯಾರಿಸುತ್ತಿದ್ದ ಮಹಾರಾಷ್ಟ್ರದ ಕಾರ್ಖಾನೆಯೊಂದನ್ನು ಪೊಲೀಸರು ಮುಚ್ಚಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬಳಸಿ ಎಸೆದ ಮಾಸ್ಕ್​ನಿಂದ ಹಾಸಿಗೆ ತಯಾರಿಸುತ್ತಿದ್ದ ಕಾರ್ಖಾನೆ ಬಂದ್!
ಬಳಸಿದ ಮುಖಗವಸು
shruti hegde
|

Updated on: Apr 12, 2021 | 4:51 PM

Share

ಮುಂಬೈ: ಜನರು ಬಳಸಿ ಬಿಸಾಡುತ್ತಿದ್ದ ಮಾಸ್ಕ್​ಗಳನ್ನು ಉಪಯೋಗಿಸಿ ತಯಾರಿಸುತ್ತಿದ್ದ ಹಾಸಿಗೆ(ಬೆಡ್) ಕಾರ್ಖಾನೆಯನ್ನು ಪೊಲೀಸರು ಮುಚ್ಚಿಸಿದ್ದಾರೆ. ಮಹಾರಾಷ್ಟ್ರದ ಜಲ್​ಗಾಂವ್ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ, ಜನರು ಬಳಸಿದ ಮಾಸ್ಕ್​ ಸಂಗ್ರಹಿಸಿ ಹಾಸಿಗೆ ತಯಾರಿಸಲಾಗುತ್ತಿತ್ತು. ಹತ್ತಿಯಿಂದ ಅಥವಾ ಇತರ ಬಟ್ಟೆಗಳಿಂದ ತಯಾರಿಸಿದ ಮಾಸ್ಕ್​ಗಳನ್ನು ಹಾಸಿಗೆ ತಯಾರಿಸಲು ಬಳಸುತ್ತಿದ್ದರು. ಇದನ್ನು ತಿಳಿದ ಪೊಲೀಸರು ಕಾರ್ಖಾನೆಯನ್ನು ಮುಚ್ಚಿಸಿದ್ದಾರೆ.

ರಾಜ್ಯದಲ್ಲಿ ಕೊವಿಡ್​ ಸೋಂಕು ಹೆಚ್ಚುತ್ತಿರುವ ಹಿನ್ನೆಯಲ್ಲಿ ಬಳಸಿ ಬಿಸಾಡಿದ ಮಾಸ್ಕ್​ಅನ್ನು ಉಪಯೋಗಿಸುವುದನ್ನು ತಡೆಹಿಡಿಯಲು ಪೊಲೀಸರು ಕಾರ್ಖಾನೆಯನ್ನು ಮುಚ್ಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಳಸಿದ ಮುಖಗವಸಿನಿಂದ ತಯಾರಿಸಿದ ಎಲ್ಲಾ ಹಾಸಿಗೆಗಳನ್ನು ಹಾಗೂ ವಶಪಡಿಸಿಕೊಂಡ ಎಲ್ಲಾ ಬಳಸಿದ ಮುಖಗವಸನ್ನು ಪೊಲೀಸರು ಸುಟ್ಟು ಹಾಕಿದ್ದಾರೆ. ಈ ಕುರಿತಂತೆ ಕಾರ್ಖಾನೆಯ ಮಾಲೀಕ ಅಮ್ಜದ್ ಅಹ್ಮದ್ ಮನ್ಸೂರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ತಿಳಿಸಿದಂತೆ ಕಳೆದ ವರ್ಷ 2020ರ ಜೂನ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಬಳಸಿದ ಮುಖಗವಸು ಹಾಗೂ ಇತರ ತ್ಯಾಜ್ಯಗಳು ಸೇರಿ ಭಾರತವು 18,000 ಟನ್‌ಗಿಂತ ಹೆಚ್ಚಿನ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಿದೆ.

ಜಲಗಾಂವ್​ ಜಿಲ್ಲೆ ಮುಂಬೈ ನಗರದ ಈಶಾನ್ಯ ಭಾಗದ ಕಡೆಗೆ 400 ಕಿಲೋಮೀಟರ್​ ದೂರದಲ್ಲಿದೆ. ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ(ಎಂಐಡಿಸಿ) ಪೊಲೀಸ್​ ಠಾಣೆಗೆ ಈ ಕುರಿತಂತೆ ಮಾಹಿತಿ ತಿಳಿದು ವಿಷಯ ಬೆಳಕಿಗೆ ಬಂದಿದೆ. ಎಂಐಡಿಸಿ, ಕುಸುಂಬಾ ಗ್ರಾಮದಲ್ಲಿರುವ ಕಾರ್ಖಾನೆಗೆ ಅಧಿಕಾರಿಗಳು ಭೇಟಿ ನೀಡಿದಾಗ ಬಳಸಿದ ಮುಖಗವಸುಗಳಿಂದ ಹಾಸಿಗೆ ತಯಾರಸುತ್ತಿರುವುದು ತಿಳಿದುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಗವಾಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಾರ್ಖಾನೆಯಲ್ಲಿ ವಶಪಡಿಸಿಕೊಳ್ಳಲಾದ ಎಲ್ಲಾ ಬಳಸಿದ ಮಖಗವಸನ್ನು ಸುಟ್ಟು ಹಾಕಲಾಗಿದೆ. ಕಾರ್ಖಾನೆಯ ಮಾಲೀಕ ಅಮ್ಜದ್ ಅಹ್ಮದ್ ಮನ್ಸೂರಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಈಗ ಇತರ ದಂದೆಯಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್​ಪಿ ಗವಾಲಿ ಹೇಳಿದ್ದಾರೆ.

ಕೊವಿಡ್ ಸಾಂಕ್ರಾಮಿಕ ಭಾರತದಲ್ಲಿ ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಈಗಾಗಲೇ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಹೊರೆಯಾಗುತ್ತಿದೆ. ಭಾರತದದಲ್ಲಿ ಕೊರೊನಾ ಎರಡನೇ ಅಲೆ ತನ್ನ ಆರ್ಭಟವನ್ನು ತೋರಿಸುತ್ತಿದೆ. ದೇಶದಲ್ಲಿ ಕಳೆದ ಭಾನುವಾರ ಒಂದೇ ದಿನ 1.68 ಲಕ್ಷ ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಪೈಕಿ 63,294 ಪ್ರಕರಣಗಳಲ್ಲಿ 349 ಜನರು ಕೊರೊನಾ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ಕರೀನಾ ತೊಟ್ಟ ಮಾಸ್ಕ್​ ಬೆಲೆ ಇಷ್ಟೊಂದಾ? ಐಟಿ ಮಂದಿಯ ವೇತನವೂ ಇಷ್ಟಿರಲ್ಲ ಎಂದ ಫ್ಯಾನ್ಸ್​​

ಕಾರಿನಲ್ಲಿ ಏಕಾಂಗಿಯಾಗಿದ್ದರೂ ಮಾಸ್ಕ್​ ಕಡ್ಡಾಯ: ದೆಹಲಿ ಹೈಕೋರ್ಟ್​ ಆದೇಶ