ಸೌಂದರ್ಯವುಳ್ಳ ಯುವತಿಯರು ರೈತರ ಮಗನನ್ನು ಮದುವೆಯಾಗುವುದಿಲ್ಲ: ಮಹಾರಾಷ್ಟ್ರ ಶಾಸಕ

ಮಂಗಳವಾರ ತಮ್ಮ ಕ್ಷೇತ್ರವಾದ ವರುದ್ ತಹಸಿಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೈತರ ಸಮಸ್ಯೆಗಳ ಕುರಿತು ಮಾತನಾಡಿದ ದೇವೇಂದ್ರ ಭುಯಾರ್, ನನ್ನಂತಿರುವ ಅಥವಾ ನಿಮ್ಮಂತೆ ಇರುವ ಸುಂದರವಾದ ಹುಡುಗಿ ಮದುವೆಯಾಗುವುದಿಲ್ಲ. ಆಕೆಗೆ ಮದುವೆಯಾಗಲು ಉದ್ಯೋಗವಿರುವ ಗಂಡೇ ಬೇಕು. ಕೆಳದರ್ಜೆಯ ಹುಡುಗಿಯರು ದಿನಸಿ ಅಂಗಡಿ ಅಥವಾ ಪಾನ್ ಕಿಯೋಸ್ಕ್ ನಡೆಸುವವರನ್ನು ಮದುವೆಯಾಗುತ್ತಾರೆ ಎಂದಿದ್ದಾರೆ.

ಸೌಂದರ್ಯವುಳ್ಳ ಯುವತಿಯರು ರೈತರ ಮಗನನ್ನು ಮದುವೆಯಾಗುವುದಿಲ್ಲ: ಮಹಾರಾಷ್ಟ್ರ ಶಾಸಕ
ದೇವೇಂದ್ರ ಭುಯಾರ್
Follow us
ರಶ್ಮಿ ಕಲ್ಲಕಟ್ಟ
|

Updated on: Oct 02, 2024 | 7:44 PM

ಮುಂಬೈ ಅಕ್ಟೋಬರ್ 02: ರೈತನ ಮಗನಿಗೆ ವಧುವಾಗಿ ಸಿಗುವುದು ಸಾಧಾರಣ ಹೆಣ್ಣು, ಯಾಕೆಂದರೆ ಸುಂದರವಾಗಿ ಕಾಣುವ ಹುಡುಗಿಯರು ಸ್ಥಿರವಾದ ಉದ್ಯೋಗದಲ್ಲಿರುವ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತಾರೆ ಎಂದು ವರುದ್-ಮೋರ್ಶಿಯ ಪಕ್ಷೇಕರ ಶಾಸಕ ದೇವೇಂದ್ರ ಭುಯಾರ್ (Devendra Bhuyar) ಹೇಳಿದ್ದಾರೆ.

ಭುಯಾರ್ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಬೆಂಬಲಿಸಿದ್ದಾರೆ. ಮಂಗಳವಾರ ತಮ್ಮ ಕ್ಷೇತ್ರವಾದ ವರುದ್ ತಹಸಿಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೈತರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ನನ್ನಂತಿರುವ ಅಥವಾ ನಿಮ್ಮಂತೆ ಇರುವ ಸುಂದರವಾದ ಹುಡುಗಿ ಮದುವೆಯಾಗುವುದಿಲ್ಲ. ಆಕೆಗೆ ಮದುವೆಯಾಗಲು ಉದ್ಯೋಗವಿರುವ ಗಂಡೇ ಬೇಕು. ಕೆಳದರ್ಜೆಯ ಹುಡುಗಿಯರು ದಿನಸಿ ಅಂಗಡಿ ಅಥವಾ ಪಾನ್ ಕಿಯೋಸ್ಕ್ ನಡೆಸುವವರನ್ನು ಮದುವೆಯಾಗುತ್ತಾರೆ. ಮೂರನೇ ದರ್ಜೆಯ ಮಹಿಳೆಯರು ರೈತರನ್ನು ಮದುವೆಯಾಗುತ್ತಾರೆ ಎಂದು ಹೇಳಿದ್ದಾರೆ.

“ಒಂದು ಹುಡುಗಿ ಸುಂದರವಾಗಿದ್ದರೆ, ಅವಳು ನಿಮ್ಮ ಮತ್ತು ನನ್ನಂತಹ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ. ತನ್ನ ಗಂಡನನ್ನು ಆಯ್ಕೆಮಾಡುವಾಗ ಅವಳು ಕೆಲಸ ಹೊಂದಿರುವ ವ್ಯಕ್ತಿಯನ್ನು ಆರಿಸಿಕೊಳ್ಳುತ್ತಾಳೆ. ಮೂರನೇ ದರ್ಜೆಯಲ್ಲಿರುವ ಹುಡುಗಿ ಮಾತ್ರ ರೈತನ ಮಗನ ಮಗನನ್ನು ಮದುವೆಯಾಗುತ್ತಾಳೆ. ಇಂತಹ ದಾಂಪತ್ಯದಿಂದ ಹುಟ್ಟುವ ಮಕ್ಕಳು ಸುಂದರವಾಗಿರುವುದಿಲ್ಲ ಎಂದು ದೇವೇಂದ್ರ ಹೇಳಿದ್ದಾರೆ, .

ಕಾಂಗ್ರೆಸ್ ನಾಯಕಿ ಮತ್ತು ಮಹಾರಾಷ್ಟ್ರದ ಮಾಜಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್, ಮಹಿಳೆಯರಿಗೆ ಅವಹೇಳನಕಾರಿ ಭಾಷೆ ಬಳಸಿದ್ದಕ್ಕಾಗಿ ಭುಯಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಬಿಹಾರದ ಧ್ವನಿ ದೆಹಲಿಗೆ ತಲುಪಬೇಕು, ಜನ್ ಸುರಾಜ್ ಪಕ್ಷ ಆರಂಭಿಸಿದ ಪ್ರಶಾಂತ್ ಕಿಶೋರ್

“ಅಜಿತ್ ಪವಾರ್ ಮತ್ತು ಅಧಿಕಾರದಲ್ಲಿರುವವರು ತಮ್ಮ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಇಂತಹ ಮಹಿಳೆಯರ ವರ್ಗೀಕರಣವನ್ನು ಯಾರೂ ಸಹಿಸುವುದಿಲ್ಲ. ಸಮಾಜವು ನಿಮಗೆ ಪಾಠ ಕಲಿಸುತ್ತದೆ” ಎಂದು ಅದೇ ಜಿಲ್ಲೆಯ ಶಾಸಕಿ ಠಾಕೂರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ