suicide pact: ಒಂದೇ ಕುಟುಂಬಕ್ಕೆ ಸೇರಿದ 9 ಮಂದಿ ವಿಷ ಸೇವಿಸಿ ನಿಗೂಢ ಸಾವು

| Updated By: ಸಾಧು ಶ್ರೀನಾಥ್​

Updated on: Jun 20, 2022 | 5:12 PM

ಸಾಂಗ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ 9 ಜನರ ಶವ ಪತ್ತೆಯಾಗಿದೆ. ಒಂದೇ ಕುಟುಂಬಕ್ಕೆ ಸೇರಿದ 9 ಮಂದಿ ನಿಗೂಢ ಸಾವನ್ನಪ್ಪಿದ್ದಾರೆ.

suicide pact: ಒಂದೇ ಕುಟುಂಬಕ್ಕೆ ಸೇರಿದ 9 ಮಂದಿ ವಿಷ ಸೇವಿಸಿ ನಿಗೂಢ ಸಾವು
ಸಾಂಕೇತಿಕ ಚಿತ್ರ
Follow us on

ಮಹಾರಾಷ್ಟ್ರ: ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ 9 ಜನರ ಶವ ಪತ್ತೆಯಾಗಿದೆ. ಒಂದೇ ಕುಟುಂಬಕ್ಕೆ ಸೇರಿದ 9 ಮಂದಿ ನಿಗೂಢ ಸಾವನ್ನಪ್ಪಿದ್ದಾರೆ. 9 ಜನರ ನಿಗೂಢ ಸಾವಿನ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಾಂಗ್ಲಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ (suicide pact).

ಮುಂಬೈನಿಂದ 350 ಕಿಮೀ ದೂರದಲ್ಲಿ ಸಾಂಗ್ಲಿ ಜಿಲ್ಲೆಯ ಮೆಹಸಾಲ್ ಗ್ರಾಮದ (Mhaisal) ಮನೆಯೊಂದರಲ್ಲಿ ಈ ಪ್ರಕರಣ ನಡೆದಿದ್ದು, ಮೃತರು ಸಾಮೂಹಿಕ ಆತ್ಮಹತ್ಯೆಗೆ ಮೊರೆಹೋಗಿರುವ (suicide pact) ಶಂಕೆ ವ್ಯಕ್ತವಾಗಿದೆ. ಮೆಹಸಾಲ್ ಗ್ರಾಮದ ಮನೆಯಲ್ಲಿ 3 ದೇಹಗಳು ಒಂದೇ ಕಡೆ ಬಿದ್ದಿದ್ದವು. 6 ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಮೃತರಲ್ಲಿ ಇಬ್ಬರು ಸಹೋದರರು – ಮಾಣಿಕ್ ಮತ್ತು ಪೋಪಟ್ ಯಲ್ಲಪಾ ವಾನ್ಮೋರ್. ಮಾಣಿಕ್ ಮನೆಯಲ್ಲಿ ಆತನ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಮಾಣಿಕ್ ಮನೆಯ ಹಿರಿಯ ಪಶುವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಪೋಪಟ್ ಅವರ ಮನೆಯಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ. ಕ್ರಿಮಿನಾಶಕ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ.

ಸಾಂಗ್ಲಿ ಜಿಲ್ಲೆಯ ಮಿರಾಲ್ ತಾಲೂಕಿನಲ್ಲಿರುವ ಮೆಹಸಾಲ್ ಗ್ರಾಮದಲ್ಲಿ 2017 ರಲ್ಲಿ ಗರ್ಭಿಣಿ ಮಹಿಳೆಯ ಸಾವಿನ ಪ್ರಕರಣ ನಡೆದಿತ್ತು. ಅದರ ತನಿಖೆ ಮಾಡುವಾಗ ತ್ಯಾಜ್ಯನೀರಿನ ಹೊಳೆಗೆ ಎಸೆದ 19 ಹೆಣ್ಣು ಭ್ರೂಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

Delhi Burari deaths:

ಡೆಲ್ಲಿ ಬುರಾಯಿ ಸಾಮೂಜಿಕ ಸಾವುಗಳು ಎಂದೇ ಕುಖ್ಯಾತವಾಗಿದ್ದ Delhi Burari deaths ಪ್ರಕರಣದಲ್ಲಿ ಒಂದೇ ಕುಟುಂಬದ (Chundawat family) 11 ಮಂದಿ ಸಾಮೂಹಿಕವಾಗಿ ಸತ್ತಿದ್ದರು. 2018ರ ಜುಲೈ 1 ರಂದು ಬೆಳಗಿನ ಜಾವ ಈ ಕಹಿ ಘಟನೆ ನಡೆದಿತ್ತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:42 pm, Mon, 20 June 22