ಚಹಾ ಕೊಟ್ಟಿಲ್ಲ ಎಂದು ಶಸ್ತ್ರಚಿಕಿತ್ಸೆಯನ್ನೇ ಮಾಡದೆ ಆಸ್ಪತ್ರೆಯಿಂದ ಹೊರ ನಡೆದ ವೈದ್ಯರು

ಮಳೆಯಿರಲಿ, ಚಳಿ ಇರಲಿ, ಬೇಸಿಗೆಯ ಬಿಸಿಲಿರಲಿ ಏನೇ ಆದರೂ ಕೆಲವರು ಚಹಾ ಕುಡಿಯುವುದನ್ನು ಬಿಡುವುದಿಲ್ಲ. ಕೆಲವರು ನಿದ್ರೆ ಬರಬಾರದೆಂದು ಚಹಾವನ್ನು ಕುಡಿಯುತ್ತಾರೆ, ಪುಣೆಯ ಜನತೆ ಚಹಾವನ್ನು ಅಮೃತಕ್ಕೆ ಹೋಲಿಸುತ್ತಾರೆ. ಅದರ ರುಚಿಯೂ ಅಷ್ಟೇ ಚೆನ್ನಾಗಿರುವುದು ಕಾರಣ. ಪುಣೆಯಲ್ಲಿರುವ ಟೀ ಅಂಗಡಿಗಳಿಗೆ ಅಮೃತ್ ಹೆಸರಿಡಲಾಗಿದೆ. ಇಲ್ಲೊಬ್ಬ ವೈದ್ಯರು ಚಹಾಗಾಗಿ ಶಸ್ತ್ರಚಿಕಿತ್ಸೆಯನ್ನೇ ಅರ್ಧದಲ್ಲಿ ನಿಲ್ಲಿಸಿದ್ದಾರೆ. ಈ ಘಟನೆ ನಾಗ್ಪುರದಲ್ಲಿ ನಡೆದಿದೆ.

ಚಹಾ ಕೊಟ್ಟಿಲ್ಲ ಎಂದು ಶಸ್ತ್ರಚಿಕಿತ್ಸೆಯನ್ನೇ ಮಾಡದೆ ಆಸ್ಪತ್ರೆಯಿಂದ ಹೊರ ನಡೆದ ವೈದ್ಯರು
ವೈದ್ಯರು-ಸಾಂದರ್ಭಿಕ ಚಿತ್ರ
Image Credit source: Hindustan Times

Updated on: Nov 07, 2023 | 12:10 PM

ಮಳೆಯಿರಲಿ, ಚಳಿ ಇರಲಿ, ಬೇಸಿಗೆಯ ಬಿಸಿಲಿರಲಿ ಏನೇ ಆದರೂ ಕೆಲವರು ಚಹಾ ಕುಡಿಯುವುದನ್ನು ಬಿಡುವುದಿಲ್ಲ. ಕೆಲವರು ನಿದ್ರೆ ಬರಬಾರದೆಂದು ಚಹಾವನ್ನು ಕುಡಿಯುತ್ತಾರೆ, ಪುಣೆಯ ಜನತೆ ಚಹಾವನ್ನು ಅಮೃತಕ್ಕೆ ಹೋಲಿಸುತ್ತಾರೆ. ಅದರ ರುಚಿಯೂ ಅಷ್ಟೇ ಚೆನ್ನಾಗಿರುವುದು ಕಾರಣ. ಪುಣೆಯಲ್ಲಿರುವ ಟೀ ಅಂಗಡಿಗಳಿಗೆ ಅಮೃತ್ ಹೆಸರಿಡಲಾಗಿದೆ. ಇಲ್ಲೊಬ್ಬ ವೈದ್ಯರು ಚಹಾಗಾಗಿ ಶಸ್ತ್ರಚಿಕಿತ್ಸೆಯನ್ನೇ ಅರ್ಧದಲ್ಲಿ ನಿಲ್ಲಿಸಿದ್ದಾರೆ. ಈ ಘಟನೆ ನಾಗ್ಪುರದಲ್ಲಿ ನಡೆದಿದೆ.

ಘಟನೆ ಹಿನ್ನೆಲೆ ಏನು?
ಕುಟುಂಬ ಯೋಜನೆಯಲ್ಲಿ ಶಸ್ತ್ರ ಚಿಕಿತ್ಸೆಗೆಂದು ಮಹಿಳೆ ಆಸ್ಪತ್ರೆಗೆ ಆಗಮಿಸಿದ್ದರು. ಅವರಿಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ, ಮಹಿಳೆ ಪ್ರಜ್ಞೆತಪ್ಪಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಮುನ್ನ ಚಹಾ ಹಾಗೂ ಬಿಸ್ಕತ್ತು ಸಿಗಲಿಲ್ಲ ಎನ್ನುವ ಕಾರಣಕ್ಕೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಮಾಡುವುದಿಲ್ಲ ಎಂದು ಆಸ್ಪತ್ರೆಯಿಂದ ಹೊರನಡೆದಿದ್ದಾರೆ.

ವೈದ್ಯರ ಈ ನಡವಳಿಕೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೊದಲೇ ಸೌಲಭ್ಯಗಳ ಕೊರತೆ ಇದೆ ಈ ನಡುವೆ ವೈದ್ಯರು ಸೂಕ್ಷ್ಮತೆ ಇಲ್ಲದೆ ನಡೆದುಕೊಂಡಿರುವುದರ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಮತ್ತಷ್ಟು ಓದಿ: ದೆಹಲಿ: ಅಯಸ್ಕಾಂತ ಬಳಸಿ 7 ವರ್ಷದ ಬಾಲಕನ ಶ್ವಾಸಕೋಶದಿಂದ ಸೂಜಿ ಹೊರ ತೆಗೆದ ಏಮ್ಸ್​ ವೈದ್ಯರು

ನವೆಂಬರ್ 3 ರಂದು ಮೌಡಾ ತಾಲೂಕಿನ ಖಾತ್​ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ. ವೈದ್ಯರ ಹೆಸರು ಭಾಲವಿ.
ಒಟ್ಟು ನಾಲ್ಕು ಮಹಿಳೆಯರಿಗೆ ಆ ಸಂದರ್ಭದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಚಹಾ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡು ಆಸ್ಪತ್ರೆಯಿಂದ ಹೊರನಡೆದಿದ್ದ ವೈದ್ಯರು ಆಸ್ಪತ್ರೆಗೆ ವಾಪಸಾಗಿಲ್ಲ. ಮಹಿಳೆಯರ ಸಂಬಂಧಿಕರು ಗಲಾಟೆ ಮಾಡಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ವೈದ್ಯರು ಮತ್ತೊಬ್ಬ ವೈದ್ಯರನ್ನು ಕರೆಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ನನಗೆ ಮಧುಮೇಹವಿದೆ, ಸಮಯಕ್ಕೆ ಸರಿಯಾಗಿ ಚಹಾ, ಬಿಸ್ಕತ್ತು ಬೇಕಾಗುತ್ತದೆ. ಇದರಿಂದ ನಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವು ಕಡಿಮೆಯಾಗುತ್ತದೆ, ಹಾಗಾಗಿ ಆಸ್ಪತ್ರೆಯಿಂದ ಹೊರನಡೆಯಬೇಕಾಯಿತು ಎಂದು ವೈದ್ಯೆ ತಿಳಿಸಿದ್ದಾರೆ.

ಈ ಮಹಿಳೆಯರ ಸಂಬಂಧಿಕರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೊಂದಲ ಸೃಷ್ಟಿಸಿದರು. ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಜಯ್ ದಾವ್ಲೆ ವಿಚಾರಣೆಗೆ ಮೌಖಿಕ ಆದೇಶ ನೀಡಿದ್ದಾರೆ. ಇದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿದೆ. ಗುರುವಾರ ವರದಿ ಬರುವ ನಿರೀಕ್ಷೆ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ