ರಾಜಸ್ಥಾನ: 50 ವರ್ಷಗಳಲ್ಲಿ 20 ಬಾರಿ ಚುನಾವಣೆಯಲ್ಲಿ ಸೋತಿದ್ದರೂ ಕುಗ್ಗದ ಉತ್ಸಾಹ, ಮತ್ತೆ ನಿಲ್ತೇನೆ ಎಂದ ತೀತರ್ ಸಿಂಗ್

ತೀತರ್(Teetar Singh)​ ಸಿಂಗ್​ಗೆ ಈಗ 78 ವರ್ಷ ವಯಸ್ಸು, ಕಳೆದ 50 ವರ್ಷಗಳಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದಾರೆ. 20 ಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರು ನಿರಂತರವಾಗಿ ಸೋಲು ಕಂಡಿದ್ದಾರೆ. ಆದರೂ ಆತ್ಮವಿಶ್ವಾಸ, ಉತ್ಸಾಹ ಕಳೆದುಕೊಂಡಿಲ್ಲ ಇದೀಗ ರಾಜಸ್ಥಾನದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಅವರ ನಾಮಪತ್ರ ಸಲ್ಲಿಸಿದ್ದು, ನವೆಂಬರ್ 25ರಂದು ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ರಾಜಸ್ಥಾನ: 50 ವರ್ಷಗಳಲ್ಲಿ 20 ಬಾರಿ ಚುನಾವಣೆಯಲ್ಲಿ ಸೋತಿದ್ದರೂ ಕುಗ್ಗದ ಉತ್ಸಾಹ, ಮತ್ತೆ ನಿಲ್ತೇನೆ ಎಂದ ತೀತರ್ ಸಿಂಗ್
ತೀತರ್ ಸಿಂಗ್Image Credit source: Etv Bharat
Follow us
ನಯನಾ ರಾಜೀವ್
|

Updated on: Nov 07, 2023 | 11:16 AM

ತೀತರ್(Teetar Singh)​ ಸಿಂಗ್​ಗೆ ಈಗ 78 ವರ್ಷ ವಯಸ್ಸು, ಕಳೆದ 50 ವರ್ಷಗಳಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದ್ದಾರೆ. 20 ಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರು ನಿರಂತರವಾಗಿ ಸೋಲು ಕಂಡಿದ್ದಾರೆ. ಆದರೂ ಆತ್ಮವಿಶ್ವಾಸ, ಉತ್ಸಾಹ ಕಳೆದುಕೊಂಡಿಲ್ಲ ಇದೀಗ ರಾಜಸ್ಥಾನದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಅವರ ನಾಮಪತ್ರ ಸಲ್ಲಿಸಿದ್ದು, ನವೆಂಬರ್ 25ರಂದು ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ವಿಶೇಷವೆಂದರೆ ಪ್ರತಿ ಬಾರಿಯೂ ತೀತರ್ ಸಿಂಗ್ ಅವರ ಜಮೀನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರೂ ಚುನಾವಣೆಗೆ ಸ್ಪರ್ಧಿಸುವ ಗೀಳು ಹೊಂದಿದ್ದಾರೆ.

ಸಾರ್ವಜನಿಕರ ಪ್ರತಿನಿಧಿಯಾಗುವ ಮೂಲಕ ಬಡವರ ಉದ್ಧಾರವಾಗಬೇಕು ಎನ್ನುತ್ತಾರೆ. ಐದನೇ ತರಗತಿವರೆಗೆ ಓದಿದ್ದಾರೆ, ವಯಸ್ಸಾಗುತ್ತಿದ್ದಂತೆ ಓದುವುದು, ಬರೆಯುವುದು ಹೇಗೆ ಎಂಬುದು ಮರೆತುಹೋಗಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ತೀತರ್ ಸಿಂಗ್ 427 ಮತಗಳು ಮತ್ತು 2018ರಲ್ಲಿ 653 ಮತಗಳನ್ನು ಪಡೆದಿದ್ದರು.

ಅವರ ಕುಟುಂಬವು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದೆ, ನಾಮಪತ್ರ ಸಲ್ಲಿಸಲು ಕೆಲವು ಬಾರಿ ಮೇಕೆ, ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡಿದ್ದರು.

ಎರಡು ಡಜನ್ ಮೇಕೆಗಳಲ್ಲಿ ಈಗ 3 ಮೇಕೆಗಳು ಮಾತ್ರ ಉಳಿದಿವೆ, ಈ ಬಾರಿ ಸಾಲ ಮಾಡಿ, ದೇಣಿಗೆ ಸಂಗ್ರಹಿಸಿ ನಾಮಪತ್ರ ಸಲ್ಲಿಸಿದ್ದಾರೆ. ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಎಲ್ಲರಿಗೂ ವಿವಾಹವಾಗಿದೆ.

ಮತ್ತಷ್ಟು ಓದಿ: ರಾಜಸ್ಥಾನ ಚುನಾವಣೆ: ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ

ನಾನು ಜನಪ್ರಿಯತೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಜನರಿಗೆ ಸರ್ಕಾರವು ಭೂಮಿ, ಸೌಲಭ್ಯಗಳನ್ನು ನೀಡಬೇಕು ಎಂದರು. ಪಂಚಾಯತಿಯಿಂದ ಲೋಕಸಭೆ ಚುನಾವಣೆಯವರೆಗೆ ಪ್ರತಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಆದರೆ ಪ್ರತಿ ಬಾರಿಯೂ ಸೋಲನ್ನು ಎದುರಿಸಿದ್ದೇನೆ.

ಭೂರಹಿತರು ಮತ್ತು ಬಡ ಕೂಲಿಕಾರ್ಮಿಕರಿಗೆ ಸರ್ಕಾರ ಭೂಮಿ ಮಂಜೂರು ಮಾಡಬೇಕೆಂಬುದು ಅವರ ಬೇಡಿಕೆಯಾಗಿತ್ತು ಮತ್ತು ಇದರೊಂದಿಗೆ ಅವರು ಅವಕಾಶ ಸಿಕ್ಕಾಗಲೆಲ್ಲಾ ಚುನಾವಣಾ ಕಣಕ್ಕೆ ಇಳಿಯಲು ಪ್ರಾರಂಭಿಸಿದರು.

ಅವರು ಒಂದರ ನಂತರ ಒಂದರಂತೆ ಚುನಾವಣೆಗೆ ಸ್ಪರ್ಧಿಸಿದರು ಆದರೆ ಭೂಮಿ ಮಂಜೂರು ಮಾಡಬೇಕೆಂಬ ಅವರ ಬೇಡಿಕೆ ಇನ್ನೂ ಈಡೇರಿಲ್ಲ ಮತ್ತು ಅವರ ಪುತ್ರರೂ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಎಂದು ಸಿಂಗ್ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ