Maharashtra: ಕಾರಿನಲ್ಲಿ ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಜನರು

|

Updated on: Jun 26, 2023 | 11:20 AM

ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಜನರ ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ.

Maharashtra: ಕಾರಿನಲ್ಲಿ ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಜನರು
ಗೋಮಾಂಸ ಮಾರಾಟ
Image Credit source: India Today
Follow us on

ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಜನರ ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ. ನಾಸಿರ್​ ಶೇಖ್ ಹಾಗೂ ಅಫಾನ್ ಅಬ್ದುಲ್ ಮಜೀದ್ ಅನ್ಸಾರಿ ಎಂದು ಗುರುತಿಸಲಾಗಿದೆ. ಅವರು ಜೂನ್ 24ರಂದು ಮುಂಬೈಗೆ ಪ್ರಯಾಣಿಸುತ್ತಿದ್ದರು. ಅವರು ಸಿನ್ನಾರ್ ಘೋಷಿ ಹೆದ್ದಾರಿಯಲ್ಲಿದ್ದಾಗ ಅವರ ಕಾರನ್ನು ತಪಾಸಣೆಗಾಗಿ ತಡೆಯಲಾಗಿತ್ತು.

ಕಾರಿನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 10 ರಿಂಸ 15 ಮಂದಿ ಅಪರಿಚತರು ಕಬ್ಬಿಣದ ರಾಡ್​ ಹಾಗೂ ದೊಣ್ಣೆಗಳಿಂದ ಅವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದರು. ಇಬ್ಬರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.

ಮಾರ್ಚ್​ ತಿಂಗಳಲ್ಲಿ ಇದೇ ರೀತಿಯ ಘಟನೆ ಬಿಹಾರದ ಸರನ್​ ಜಿಲ್ಲೆಯಲ್ಲಿ 56 ವರ್ಷದ ವ್ಯಕ್ತಿಯೊಬ್ಬರು ಗೋಮಾಂಸ ಸಾಗಿಸುತ್ತಿದ್ದಾರೆ ಎನ್ನುವ ಶಂಕೆ ಮೇಲೆ ಹಲ್ಲೆ ನಡೆದಿತ್ತು.

ಮತ್ತಷ್ಟು ಓದಿ: ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರಿಂದ ಸುಲಿಗೆ ಆರೋಪ: ಕಾಂಗ್ರೆಸ್ ಮುಖಂಡ ಸೇರಿದಂತೆ 4 ಜನ ಅರೆಸ್ಟ್​​ ​

ಸರಪಂಚ್ ಸುಶೀಲ್ ಸಿಂಗ್ ಮತ್ತು ಗ್ರಾಮಸ್ಥರಾದ ರವಿ ಸಾಹ್ ಮತ್ತು ಉಜ್ವಲ್ ಶರ್ಮಾ ಸೇರಿದಂತೆ ನಸೀಮ್ ಖುರೇಷಿ ಎಂದು ಗುರುತಿಸಲಾದ ವ್ಯಕ್ತಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಮೂವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ