Maharashtra Crisis: ಮಹಾರಾಷ್ಟ್ರದಲ್ಲಿ ಬಿಜೆಪಿ, ಶಾಸಕ, ಸಂಸದರ ಸಭೆ; ಜುಲೈ 3ರಂದು ಮುಂಬೈ ಏರ್​ಪೋರ್ಟ್​ ಬಳಿ ಜಮಾಯಿಸಲು ಸೂಚನೆ

| Updated By: ಸುಷ್ಮಾ ಚಕ್ರೆ

Updated on: Jun 27, 2022 | 1:25 PM

ಜುಲೈ 3ರಂದು ರೆಬೆಲ್ ಶಾಸಕರು ಮುಂಬೈಗೆ ಆಗಮಿಸುವ ಸಾಧ್ಯತೆಯಿದೆ. ಈ ವೇಳೆ ವಿಮಾನ ನಿಲ್ದಾಣದ ಬಳಿ ಜಮಾಯಿಸಿ, ಬಂಡಾಯ ಶಾಸಕರ ಬೆಂಬಲಕ್ಕೆ ನಿಲ್ಲಲು ಬಿಜೆಪಿ ಶಾಸಕ, ಸಂಸದರಿಗೆ ಸಭೆಯಲ್ಲಿ ಸೂಚಿಸಲಾಗಿದೆ.

Maharashtra Crisis: ಮಹಾರಾಷ್ಟ್ರದಲ್ಲಿ ಬಿಜೆಪಿ, ಶಾಸಕ, ಸಂಸದರ ಸಭೆ; ಜುಲೈ 3ರಂದು ಮುಂಬೈ ಏರ್​ಪೋರ್ಟ್​ ಬಳಿ ಜಮಾಯಿಸಲು ಸೂಚನೆ
ಶಿವಸೇನೆಯ ಬಂಡಾಯ ಶಾಸಕರು
Image Credit source: Indian Express
Follow us on

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ (Maharashtra Crisis) ಮುಂದುವರೆದಿದೆ. ಮುಂಬೈನ 36 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 36 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು, ಸಂಸದರ ಸಭೆ ನಡೆದಿದೆ. ಜುಲೈ 3ರಂದು ಮುಂಬೈ ಏರ್​ಪೋರ್ಟ್ (Mumbai Airport) ಬಳಿ ಜಮಾಯಿಸಲು ಸೂಚನೆ ನೀಡಲಾಗಿದೆ. ಮುಂಬೈ ಏರ್​ಪೋರ್ಟ್ ಬಳಿ ಜಮಾಯಿಸಲು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಜುಲೈ 3ರಂದು ರೆಬೆಲ್ ಶಾಸಕರು ಮುಂಬೈಗೆ ಆಗಮಿಸುವ ಸಾಧ್ಯತೆಯಿದೆ. ಈ ವೇಳೆ ವಿಮಾನ ನಿಲ್ದಾಣದ ಬಳಿ ಸೇರಲು ಸೂಚಿಸಲಾಗಿದೆ. ಹಾಗೇ, ಬಂಡಾಯ ಶಾಸಕರ ಬೆಂಬಲಕ್ಕೆ ನಿಲ್ಲುವಂತೆ ಸೂಚನೆ ನೀಡಲಾಗಿದೆ. ಆದರೆ, ಅತಿ ಉತ್ಸಾಹದಿಂದ ವರ್ತಿಸಬಾರದೆಂದು ಸೂಚನೆ ನೀಡಲಾಗಿದೆ.

ಮಹಾರಾಷ್ಟ್ರದ ಬಂಡಾಯ ಶಿವಸೇನೆ ಶಾಸಕರಿಗೆ ಕೇಂದ್ರ ಸರ್ಕಾರವು ವೈ-ಪ್ಲಸ್ ಭದ್ರತೆಯನ್ನು ಒದಗಿಸುವುದರೊಂದಿಗೆ ಮಹಾರಾಷ್ಟ್ರದಲ್ಲಿ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ಬಿಜೆಪಿ ದಾಳ ಹಾಕುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಶಿವಸೇನೆ ಆರೋಪಿಸಿದೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಿವಸೇನೆ ಶಾಸಕರನ್ನು ದೊಡ್ಡ ಗೂಳಿಗಳಿಗೆ ಹೋಲಿಸಲಾಗಿದೆ. ಅವರು ತಮ್ಮನ್ನು 50 ಕೋಟಿ ರೂ.ಗಳಿಗೆ ಮಾರಾಟ” ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: Maharashtra Crisis: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು. ಸುಪ್ರೀಂ ಕೋರ್ಟ್​ನಲ್ಲಿ ಇಂದು ಘಟಾನುಘಟಿ ವಕೀಲರ ಮುಖಾಮುಖಿ

ಇದನ್ನೂ ಓದಿ
Maharashtra Crisis: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು. ಸುಪ್ರೀಂ ಕೋರ್ಟ್​ನಲ್ಲಿ ಇಂದು ಘಟಾನುಘಟಿ ವಕೀಲರ ಮುಖಾಮುಖಿ
Maharashtra Crisis: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ; ಹೋಟೆಲ್​ನಿಂದ ನ್ಯಾಯಾಲಯದ ಮೆಟ್ಟಿಲೇರಿದ ಅತೃಪ್ತ ಶಾಸಕರು
MVA Crisis: ಬಾಳಾಸಾಹೇಬರ ಹೆಸರು ಬಿಡಿ, ನಿಮ್ಮಪ್ಪನ ಹೆಸರು ಬಳಸಿಕೊಳ್ಳಿ: ಬಂಡಾಯ ಶಾಸಕರಿಗೆ ಸಂಜಯ್ ರಾವುತ್ ಸವಾಲು
MVA Crisis: ವಿಶ್ವಾಸಮತ ಯಾಚನೆಗೆ ಮೈತ್ರಿ ಸರ್ಕಾರದ ಸಿದ್ಧತೆ, ಶರದ್ ಪವಾರ್ ಉರುಳಿಸುವ ದಾಳದ ಬಗ್ಗೆ ಕುತೂಹಲ

ಇದುವರೆಗೂ ಸುಮಾರು 15 ಬಂಡಾಯ ಶಿವಸೇನೆ ಶಾಸಕರಿಗೆ ಸಿಆರ್‌ಪಿಎಫ್ ಕಮಾಂಡೋಗಳ ವೈ-ಪ್ಲಸ್ ಭದ್ರತೆಯನ್ನು ಕೇಂದ್ರವು ಭಾನುವಾರ ವಿಸ್ತರಿಸಿದೆ. ಭದ್ರತೆ ಒದಗಿಸಿದವರಲ್ಲಿ ರಮೇಶ್ ಬೋರ್ನಾರೆ, ಮಂಗೇಶ್ ಕುಡಾಲ್ಕರ್, ಸಂಜಯ್ ಶಿರ್ಸಾತ್, ಲತಾಬಾಯಿ ಸೋನಾವಾನೆ, ಪ್ರಕಾಶ್ ಸುರ್ವೆ ಮತ್ತು ಇತರ 10 ಮಂದಿ ಸೇರಿದ್ದಾರೆ. ಮಹಾರಾಷ್ಟ್ರದಲ್ಲಿ ವಾಸಿಸುವ ಅವರ ಕುಟುಂಬಗಳಿಗೂ ಭದ್ರತೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ನಾಲ್ಕರಿಂದ ಐದು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಕಮಾಂಡೋಗಳು ಪಾಳಿಯಲ್ಲಿ ಪ್ರತಿ ಶಾಸಕರು ಮಹಾರಾಷ್ಟ್ರಕ್ಕೆ ಬಂದ ನಂತರ ಅವರಿಗೆ ಭದ್ರತೆ ನೀಡಲಿದ್ದಾರೆ.

ಇದರ ನಡುವೆ ವಿಧಾನ ಭವನಕ್ಕೆ ಶಿವಸೇನೆಯ ನೂತನ ಶಾಸಕಾಂಗ ಪಕ್ಷದ ನಾಯಕ ಅಜಯ್ ಚೌಧರಿ ಆಗಮಿಸಿದ್ದಾರೆ. ಏಕನಾಥ್ ಶಿಂಧೆ ಅವರ ಬದಲಿಗೆ ಸದನದಲ್ಲಿ ಶಿವಸೇನೆಯ ಶಾಸಕಾಂಗ ನಾಯಕರಾಗಿ ಅಜಯ್ ಚೌಧರಿ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಇಂದು ಸುಪ್ರೀಂ ಕೋರ್ಟ್​ನಲ್ಲಿ ಮಹಾರಾಷ್ಟ್ರದ ಬಂಡಾಯ ಶಾಸಕ ಅರ್ಜಿ ವಿಚಾರಣೆ ನಡೆಯಲಿದೆ.

Published On - 1:17 pm, Mon, 27 June 22