Viral News: 13 ದಿನದಲ್ಲಿ 3,955 ಕಿ.ಮೀ ಸೈಕಲ್ ಸವಾರಿ ಮಾಡಿದ ಪುಣೆಯ ಮಹಿಳೆ

| Updated By: ಸುಷ್ಮಾ ಚಕ್ರೆ

Updated on: Nov 21, 2022 | 12:59 PM

ಈ 3,955 ಕಿಮೀ ಪ್ರಯಾಣವು ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ 7 ರಾಜ್ಯಗಳನ್ನು ಒಳಗೊಂಡಿದೆ.

Viral News: 13 ದಿನದಲ್ಲಿ 3,955 ಕಿ.ಮೀ ಸೈಕಲ್ ಸವಾರಿ ಮಾಡಿದ ಪುಣೆಯ ಮಹಿಳೆ
ಪ್ರೀತಿ ಮಾಸ್ಕೆ
Follow us on

ಪುಣೆ: ಮಹಾರಾಷ್ಟ್ರದ ಪುಣೆಯ (Pune) 45 ವರ್ಷದ ಸೈಕ್ಲಿಸ್ಟ್ ಪ್ರೀತಿ ಮಾಸ್ಕೆ (Preeti Maske) ಅವರು 13 ದಿನಗಳು, 19 ಗಂಟೆಗಳು ಮತ್ತು 12 ನಿಮಿಷಗಳಲ್ಲಿ ಕೋಟೇಶ್ವರದ ಭಾರತ-ಪಾಕಿಸ್ತಾನದ ಗಡಿಯಿಂದ ಇಂಡೋ-ಟಿಬೆಟಿಯನ್ ಗಡಿಯಲ್ಲಿ ಅರುಣಾಚಲ ಪ್ರದೇಶದ (Arunachal Pradesh) ಕಿಬಿಟು ತಲುಪಿದ ಮೊದಲ ಮಹಿಳಾ ಏಕವ್ಯಕ್ತಿ ಸೈಕ್ಲಿಸ್ಟ್ ಎಂಬ ಹೊಸ ವಿಶ್ವ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ 3,955 ಕಿ.ಮೀ ಪ್ರಯಾಣವು ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ 7 ರಾಜ್ಯಗಳನ್ನು ಒಳಗೊಂಡಿದೆ. ಪ್ರೀತಿ ಮಾಸ್ಕೆ ಪ್ರಕಾರ, ಅವರಿಗೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಮಾರ್ಗ ಬಹಳ ಸವಾಲಿನದಾಗಿತ್ತು.

“ಈ ಪ್ರಯಾಣದ ಎಲ್ಲಾ ದಾಖಲೆಗಳು ಮತ್ತು ಟೈಮ್ ಸ್ಟ್ಯಾಂಪ್ ಚಿತ್ರಗಳನ್ನು ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರಮಾಣೀಕರಿಸಲು ವರ್ಲ್ಡ್ ಅಲ್ಟ್ರಾ ಸೈಕ್ಲಿಂಗ್ ಅಸೋಸಿಯೇಷನ್ ​​(WUCA) ಮೂಲಕ ಸಲ್ಲಿಸಲಾಗಿದೆ” ಎಂದು ಪ್ರೀತಿ ಮಾಸ್ಕೆ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕರಾವಳಿ ದಂಡೆಯ ರಸ್ತೆ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ | ನಾರ್ವೇ ದೇಶದ ಪ್ರಜೆ ಟ್ವೀಟ್‌

ನವೆಂಬರ್ 1ರಂದು ಬೆಳಿಗ್ಗೆ 5.07ಕ್ಕೆ ಭಾರತದ ಪಶ್ಚಿಮ ಭಾಗದಲ್ಲಿರುವ ಕೋಟೇಶ್ವರದಲ್ಲಿ ಸೈಕಲ್ ಸವಾರಿಯನ್ನು ಬಿಎಸ್‌ಎಫ್ ಸಹಾಯಕ ಕಮಾಂಡರ್ ಎನ್‌ಕೆ ಶರ್ಮಾ ಅವರು ಫ್ಲ್ಯಾಗ್‌ಆಫ್ ಮಾಡಿದರು. ನವೆಂಬರ್ 15ರಂದು 12.19ಕ್ಕೆ ಭಾರತ-ಟಿಬೆಟಿಯನ್ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಕಿಬಿತು ಎಂಬಲ್ಲಿ ಭಾರತದ ಪೂರ್ವ ತುದಿಯಲ್ಲಿ ಪ್ರೀತಿ ತನ್ನ ಸೈಕಲ್ ಸವಾರಿಯನ್ನು ಮಾಡಿದರು.

ನಿರಂತರವಾಗಿ ಸೈಕ್ಲಿಂಗ್ ಮಾಡಿದ್ದರಿಂದ ನಿದ್ರೆಯಿಲ್ಲದೆ ಬಹಳ ಪರದಾಡಿದ್ದೆ. ನಾನು ಸತತವಾಗಿ 19 ಗಂಟೆಗಳ ಕಾಲ ಮತ್ತು ಕೆಲವೊಮ್ಮೆ 24 ಗಂಟೆಗಳಿಗೂ ಹೆಚ್ಚು ಕಾಲ ಸೈಕ್ಲಿಂಗ್ ಮಾಡುತ್ತಿದ್ದೆ. ನಿದ್ರೆಯಿಂದ ಬಚಾವಾಗಲು ಆಗಾಗ ಕಾಫಿ ಕುಡಿಯುತ್ತಿದ್ದೆ ಎಂದು ಮಾಸ್ಕೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ