Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಿಯುವ ಮಳೆಯನ್ನೂ ಲೆಕ್ಕಿಸದೆ ಭಾಷಣ ಮಾಡಿದ ಶರದ್ ಪವಾರ್, ಮರುಕಳಿಸಿದ 2019ರ ನೆನಪು

ಸುರಿಯುವ ಮಳೆಯನ್ನೂ ಲೆಕ್ಕಿಸದೆ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ(ಎನ್​ಸಿಪಿ) ಅಧ್ಯಕ್ಷ ಶರದ್ ಪವಾರ್(Sharad Pawar) ಭಾಷಣ ಮಾಡಿದ್ದಾರೆ. ಇದು ಅಕ್ಟೋಬರ್​ 2019ರಲ್ಲಿ ಅವರು ಮಾಡಿದ ಚುನಾವಣಾ ಪ್ರಚಾರವನ್ನು ನೆನಪಿಸುತ್ತಿದೆ. ಮಹಾರಾಷ್ಟ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಆ ಭಾಷಣದಿಂದ ಅವರ ಪಕ್ಷಕ್ಕೆ ಲಾಭವಾಗಿತ್ತು ಎಂದು ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ಬೆಳಗ್ಗೆಯಿಂದಲೂ ಮಳೆ ಸುರಿಯುತ್ತಿತ್ತು, ಸಂಜೆ ಕಾರ್ಯಕ್ರಮದ ವೇಳೆಯೂ ಸಣ್ಣ ಮಳೆ ಬರತೊಡಗಿತು.

ಶರದ್ ಪವಾರ್Image Credit source: India Today
Follow us
ನಯನಾ ರಾಜೀವ್
|

Updated on: Nov 27, 2023 | 9:50 AM

ಸುರಿಯುವ ಮಳೆಯನ್ನೂ ಲೆಕ್ಕಿಸದೆ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ(ಎನ್​ಸಿಪಿ) ಅಧ್ಯಕ್ಷ ಶರದ್ ಪವಾರ್(Sharad Pawar) ಭಾಷಣ ಮಾಡಿದ್ದಾರೆ. ಇದು ಅಕ್ಟೋಬರ್​ 2019ರಲ್ಲಿ ಅವರು ಮಾಡಿದ ಚುನಾವಣಾ ಪ್ರಚಾರವನ್ನು ನೆನಪಿಸುತ್ತಿದೆ. ಮಹಾರಾಷ್ಟ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಆ ಭಾಷಣದಿಂದ ಅವರ ಪಕ್ಷಕ್ಕೆ ಲಾಭವಾಗಿತ್ತು ಎಂದು ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ಬೆಳಗ್ಗೆಯಿಂದಲೂ ಮಳೆ ಸುರಿಯುತ್ತಿತ್ತು, ಸಂಜೆ ಕಾರ್ಯಕ್ರಮದ ವೇಳೆಯೂ ಸಣ್ಣ ಮಳೆ ಬರತೊಡಗಿತು.

ಅಕ್ಟೋಬರ್ 18, 2019 ರಂದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮೂರು ದಿನಗಳ ಮೊದಲು, ಪವಾರ್ ಅವರು ಲೋಕಸಭೆ ಉಪಚುನಾವಣೆಗೆ ಎನ್‌ಸಿಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಸತಾರಾದಲ್ಲಿದ್ದರು. ಈ ವೇಳೆ ಜೋರು ಮಳೆಯಲ್ಲಿ ತೊಯ್ದು ಹೋಗುತ್ತಲೇ ಭಾಷಣ ಮಾಡಿದರು.

ಚುನಾವಣೆಯಲ್ಲಿ, ಅವರ ಪಕ್ಷವು 54 ಸ್ಥಾನಗಳನ್ನು ಗೆದ್ದಿತ್ತು. ಇದು ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷದ ಅದೃಷ್ಟವನ್ನು ಬದಲಾಯಿಸಿತು ಎಂದು ಹೇಳಲಾಗುತ್ತದೆ.

ಮತ್ತಷ್ಟು ಓದಿ: Sharad Pawar: ಶರದ್ ಪವಾರ್ ಒಬಿಸಿ ವರ್ಗಕ್ಕೆ ಸೇರಿದವರೇ? ವೈರಲ್ ಆದ ಜಾತಿ ಪ್ರಮಾಣಪತ್ರದ ನಿಜಾಂಶವೇನು?

ಕಾರ್ಯಕ್ರಮದ ವೇಳೆ ಶರದ್ ಪವಾರ್ ಮಳೆಯಲ್ಲಿ ನೆನೆಯುತ್ತಿರುವ ಫೋಟೊ, ವಿಡಿಯೋಗಳು ವೃರಲ್ ಆಗಿವೆ. ಅವರ ಬೆಂಬಲಿಗರು ನಾಲ್ಕು ವರ್ಷಗಳ ಹಿಂದೆ ನಡೆದ ಚುನಾವಣಾ ಪ್ರಚಾರವನ್ನು ನೆನಪಿಸಿಕೊಂಡರು.

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಅಜಿತ್ ಪವಾರ್ ಅವರು 40 ಶಾಸಕರ ಬೆಂಬಲವನ್ನು ಪ್ರತಿಪಾದಿಸಿದ್ದಾರೆ.

ಅಷ್ಟು ಮಳೆ ಸುರಿಯುತ್ತಿದ್ದರೂ ಛತ್ರಿ ನೀಡಲು ಬಂದರೆ ಪವಾರ್ ನಿರಾಕರಿಸಿದ್ದರು. ವರುಣದೇವ ಎನ್​ಸಿಪಿಯನ್ನು ಆಶೀರ್ವದಿಸಿದ್ದಾನೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ

ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ

ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್

ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ

ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ

ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ

ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?

ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ