ಶರದ್ ಪವಾರ್ ಶೀಘ್ರದಲ್ಲೇ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ: ರವಿ ರಾಣಾ ಹೇಳಿಕೆ
“ಶರದ್ ಪವಾರ್ ಮಹಾರಾಷ್ಟ್ರದ ಹಿರಿಯ ನಾಯಕ ಎಂದು ದಸರಾ ಹಬ್ಬದ ಸಂದರ್ಭದಲ್ಲಿ ನಾನು ಈಗಾಗಲೇ ಹೇಳಿದ್ದೆ. ದೀಪಾವಳಿಯ ಮೊದಲು ದೊಡ್ಡ ಹೊಡೆತ ಸಂಭವಿಸಬಹುದು ಅಥವಾ ದೀಪಾವಳಿಯ ಹೊತ್ತಲ್ಲಿ ಸ್ಫೋಟವಾಗಬಹುದು. ಅಜಿತ್ ಪವಾರ್ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ರೀತಿ, ಶೇ.99 ರಷ್ಟು ಶರದ್ ಪವಾರ್ ಪಕ್ಷಾಂತರಗೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈಗ ಸ್ವಲ್ಪ ಶಾಕ್ ಆಗಬೇಕು'' ಎಂದು ರವಿ ರಾಣಾ ಹೇಳಿದ್ದಾರೆ.
ಅಮರಾವತಿ ನವೆಂಬರ್ 11: ಎನ್‌ಸಿಪಿ (NCP) ಪಕ್ಷದಲ್ಲಿ ಪ್ರಸ್ತುತ ಅನೇಕ ಘಟನೆಗಳು ನಡೆಯುತ್ತಿವೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಡೆಂಗ್ಯೂ ಸೋಂಕು ತಗುಲಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ನಿನ್ನೆ ಇದ್ದಕ್ಕಿದ್ದಂತೆ ದೊಡ್ಡ ಸುದ್ದಿ ಹೊರಬಿದ್ದಿದೆ. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ (Sharad Pawar) ಮತ್ತು ಅಜಿತ್ ಪವಾರ್ ಭೇಟಿಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಉಭಯ ನಾಯಕರ ನಡುವೆ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಯಿತು. ಈ ಸಭೆಯ ನಂತರ ಅಜಿತ್ ಪವಾರ್ ತಕ್ಷಣವೇ ಪುಣೆಯಿಂದ ದೆಹಲಿಗೆ ತೆರಳಿದರು.
ಅಜಿತ್ ಪವಾರ್ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಆ ಬಳಿಕ ಸಂಜೆ ಸಂಸದ ಪ್ರಫುಲ್ ಪಟೇಲ್ ನಿವಾಸದಲ್ಲಿ ಅಜಿತ್ ಪವಾರ್ ಗುಂಪಿನ ಮಹತ್ವದ ಸಭೆ ನಡೆದಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಶಾಸಕ ರವಿ ರಾಣಾ ಇದೀಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶರದ್ ಪವಾರ್ ಶೀಘ್ರದಲ್ಲೇ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ರವಿ ರಾಣಾ ಹೇಳಿದ್ದು, ಹಾಗಾಗಿ ಚರ್ಚೆಗಳು ಶುರುವಾಗಿವೆ.
“ಶರದ್ ಪವಾರ್ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಾರೆ” ಎಂದು ರವಿ ರಾಣಾ ಹೇಳಿದ್ದಾರೆ. ಅಜಿತ್ ಪವಾರ್ ಭೇಟಿಯಿಂದಾಗಿ ಶರದ್ ಪವಾರ್ ಗೆ ಶೇ.99 ರಷ್ಟು ಮನವರಿಕೆಯಾಗಿದೆ ಎಂದು ರವಿ ರಾಣಾ ಹೇಳಿದ್ದಾರೆ. ದೀಪಾವಳಿಯ ಹೊತ್ತಿಗೆ ದೊಡ್ಡ ಬಾಂಬ್ ಸ್ಫೋಟಿಸಬಹುದು ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದು ರವಿ ರಾಣಾ ಹೇಳಿದರು.
ಇದನ್ನೂ ಓದಿ: ಶರದ್ ಪವಾರ್ ಭೇಟಿ ನಂತರ ದೆಹಲಿಯಲ್ಲಿ ಅಮಿತ್ ಶಾ ಜತೆ ಚರ್ಚೆ ನಡೆಸಿದ ಅಜಿತ್ ಪವಾರ್
ರವಿ ರಾಣಾ ಹೇಳಿದ್ದೇನು?
“ಶರದ್ ಪವಾರ್ ಮಹಾರಾಷ್ಟ್ರದ ಹಿರಿಯ ನಾಯಕ ಎಂದು ದಸರಾ ಹಬ್ಬದ ಸಂದರ್ಭದಲ್ಲಿ ನಾನು ಈಗಾಗಲೇ ಹೇಳಿದ್ದೆ. ದೀಪಾವಳಿಯ ಮೊದಲು ದೊಡ್ಡ ಹೊಡೆತ ಸಂಭವಿಸಬಹುದು ಅಥವಾ ದೀಪಾವಳಿಯ ಹೊತ್ತಲ್ಲಿ ಸ್ಫೋಟವಾಗಬಹುದು. ಅಜಿತ್ ಪವಾರ್ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ರೀತಿ, ಶೇ.99 ರಷ್ಟು ಶರದ್ ಪವಾರ್ ಪಕ್ಷಾಂತರಗೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈಗ ಸ್ವಲ್ಪ ಶಾಕ್ ಆಗಬೇಕು” ಎಂದು ರವಿ ರಾಣಾ ಹೇಳಿದ್ದಾರೆ.
“ಶರದ್ ಪವಾರ್ ಶೀಘ್ರದಲ್ಲೇ ನರೇಂದ್ರ ಮೋದಿಯನ್ನು ಬೆಂಬಲಿಸುತ್ತಾರೆ. ಬಿಜೆಪಿ ಸರ್ಕಾರ ಬರುತ್ತೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವಿನ ಸಂಘರ್ಷ ಕೊನೆಗೊಳ್ಳಲಿದ್ದು, ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಅದೇ ರೀತಿ ಶರದ್ ಪವಾರ್ ಬಂದರೆ ಸರ್ಕಾರಕ್ಕೆ ಇನ್ನಷ್ಟು ಬಲ ಬರಲಿದೆ. ಮಹಾರಾಷ್ಟ್ರದಲ್ಲಿ ಸಮರ್ಥ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ರವಿ ರಾಣಾ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ