ಮಹಾರಾಷ್ಟ್ರ: 12ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ ಸಾವು

ವಸತಿ ಕಟ್ಟಡದ 12ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತ ಬಾಲಕಿ ಪಾಲ್ಘರ್ ಜಿಲ್ಲೆಯ ವಸಾಯಿಯ ನಲಸೋಪರಾ ಪೂರ್ವದಲ್ಲಿ ವಾಸವಿರುವ ಎಲೆಕ್ಟ್ರಿಷಿಯನ್ ಅವರ ಪುತ್ರಿ. ನೈಗಾಂವ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ಪೊಲೀಸ್ ವರದಿಯ ಪ್ರಕಾರ, ಈ ಘಟನೆ ಜುಲೈ 22 ರಂದು ರಾತ್ರಿ 8.20 ರ ಸುಮಾರಿಗೆ ಸಂಭವಿಸಿದೆ.

ಮಹಾರಾಷ್ಟ್ರ: 12ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ  ಸಾವು
ಮಗು
Image Credit source: Shutterstock

Updated on: Jul 24, 2025 | 2:19 PM

ಪುಣೆ, ಜುಲೈ 24: ವಸತಿ ಕಟ್ಟಡದ 12ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತ ಬಾಲಕಿ ಪಾಲ್ಘರ್ ಜಿಲ್ಲೆಯ ವಸಾಯಿಯ ನಲಸೋಪರಾ ಪೂರ್ವದಲ್ಲಿ ವಾಸವಿರುವ ಎಲೆಕ್ಟ್ರಿಷಿಯನ್ ಅವರ ಪುತ್ರಿ. ನೈಗಾಂವ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ಪೊಲೀಸ್ ವರದಿಯ ಪ್ರಕಾರ, ಈ ಘಟನೆ ಜುಲೈ 22 ರಂದು ರಾತ್ರಿ 8.20 ರ ಸುಮಾರಿಗೆ ಸಂಭವಿಸಿದೆ.

ಕಟ್ಟಡದ ಅದೇ ಮಹಡಿಯಲ್ಲಿ ವಾಸವಾಗಿದ್ದ ಸಂಬಂಧಿಕರನ್ನು ಭೇಟಿ ಮಾಡಲು ಬಾಲಕಿ ತನ್ನ ಪೋಷಕರೊಂದಿಗೆ ಹೋಗಿತ್ತು. ಕುಟುಂಬ ಸದಸ್ಯರು ಮನೆಗೆ ಹಿಂದಿರುಗಲು ಸಿದ್ಧರಾದಾಗ ಬಾಲಕಿಯನ್ನು ಚಪ್ಪಲಿ ಸ್ಟ್ಯಾಂಡ್​ ಮೇಲೆ ನಿಲ್ಲಿಸಲಾಗಿತ್ತು. ಆಗ ಪೋಷಕರು ಆಕೆಯ ಕಾಲಿಗೆ ಶೂ ಧರಿಸಲು ಸಹಾಯ ಮಾಡುತ್ತಿದ್ದರು. ಆಗ ಬಾಲಕಿ ಸಮತೋಲನ ಕಳೆದುಕೊಂಡು ಹಿಂದಕ್ಕೆ ಬಾಗಿದ್ದಾಳೆ.ಆಗ 12ನೇ ಮಹಡಿಯ ಕಾರಿಡಾರ್​ನಿಂದ ಕೆಳಗೆ ಬಿದ್ದು ಗಂಭೀರ ಗಾಯವಾಗಿತ್ತು.

ತಕ್ಷಣ ಆಕೆಯನ್ನು ವಸಾಯಿಯಲ್ಲಿರುವ ಡಿಎಂ ಪೆಟಿಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಆಕೆಯನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.ಮಗುವಿನ ತಂದೆ ಈ ಘಟನೆ ಸಂಪೂರ್ಣವಾಗಿ ಆಕಸ್ಮಿಕವಾಗಿದ್ದು, ಇದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲ್ಲ ಎಂದು ಹೇಳಿದ್ದಾರೆ. ಯಾವುದೇ ದೂರು ದಾಖಲಾಗಿಲ್ಲ ಮತ್ತು ಇದರಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿಲ್ಲ.

ಮತ್ತಷ್ಟು ಓದಿ: ಬೆಂಗಳೂರು: 20ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿ ಸಾವು

ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಯಾ ಗಾಂವ್ ಪೊಲೀಸ್ ಠಾಣೆಯ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ದೇವದಾಸ್ ಪಾಟೀಲ್ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ದುರಂತ ಸಾವು ಸ್ಥಳೀಯ ಸಮುದಾಯವನ್ನು ಆಘಾತಕ್ಕೆ ದೂಡಿದ್ದು, ಬಹುಮಹಡಿ ವಸತಿ ಕಟ್ಟಡಗಳಲ್ಲಿ ಮಕ್ಕಳ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ