ಬೆಂಗಳೂರು: 20ನೇ ಮಹಡಿಯಿಂದ ಬಿದ್ದು 15 ವರ್ಷದ ಬಾಲಕಿ ಸಾವು
ಬೆಂಗಳೂರಿನ ಕಾಡುಗೋಡಿಯಲ್ಲಿರುವ ಅಪಾರ್ಟ್‌ಮೆಂಟ್‌ನಿಂದ 15 ವರ್ಷದ ಬಾಲಕಿ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಪ್ರದೇಶ ಮೂಲದ ಈ ಬಾಲಕಿ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾಡುಗೋಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು, ಫೆಬ್ರವರಿ 12: ಅಪಾರ್ಟ್ಮೆಂಟ್ನ 20ನೇ ಮಹಡಿಯಿಂದ ಜಿಗಿದು 15 ವರ್ಷದ ಬಾಲಕಿ (girl) ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅವಂತಿಕಾ ಚೌರಾಸಿಯಾ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಘಟನಾ ಸ್ಥಳಕ್ಕೆ ಕಾಡುಗೋಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೊಬೈಲ್ ಬಿಟ್ಟು ಓದು ಎಂದಿದ್ದೇ ತಪ್ಪಾಯ್ತಾ?
ಮಧ್ಯಪ್ರದೇಶ ಮೂಲದ ಕುಟುಂಬ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಬಾಲಕಿಯ ತಂದೆ ಖಾಸಗಿ ಕಂಪನಿಯ ಇಂಜಿನಿಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ನಗರದ ಖಾಸಗಿ ಶಾಲೆಯಲ್ಲಿ ಬಾಲಕಿ ಅವಂತಿಕಾ ಚೌರಾಸಿಯಾ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಳು. ಕಳೆದ ಪರಿಕ್ಷೆಯಲ್ಲಿ ಅವಂತಿಕಾ ಸರಳವಾದ ಅಂಕ ಪಡೆದಿದ್ದಳು. ಈ ನಡುವೆ 15ನೇ ತಾರೀಖಿನಿಂದ ಪರೀಕ್ಷೆ ಸಹ ಶುರುವಾಗಲಿತ್ತು. ಈ ನಡುವೆ ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದಳು.
ಇದನ್ನು ಕಂಡು ತಾಯಿ ಬುದ್ಧಿಮಾತು ಹೇಳಿದ್ದಾರೆ. ಪರೀಕ್ಷೆ ಬರುತ್ತಿದೆ ಓದುವುದು ಬಿಟ್ಟು ಮೊಬೈಲ್ನಲ್ಲಿ ಇರ್ತಿಯಾ ಎಂದು ತಾಯಿ ಬೈದಿದ್ದಾರೆ. ಈ ಮಾತು ಕೇಳಿ ಬಳಿಕ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಖಾಸಗಿ ಆಸ್ಪತ್ರೆಗೆ ಮೃತ ಬಾಲಕಿಯ ಮೃತದೇಹ ಶಿಫ್ಟ್ ಮಾಡಲಾಗಿದೆ.
ಸ್ನೇಹಿತರ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ
ಕುಲ್ಷಕ ಕಾರಣಕ್ಕೆ ಸ್ನೇಹಿತರ ನಡುವಿನ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಹೊಸೂರು ಸರ್ವಿಸ್ ರಸ್ತೆ ಸಿಂಗಸಂದ್ರದಲ್ಲಿ ನಡೆದಿದೆ. ಕಲ್ಲು ಎತ್ತಿಹಾಕಿ ಜಗದೀಶ್(40) ಕೊಲೆ ಮಾಡಿದ ಸಿದ್ದೇಶ್.
ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ: ಬದುಕುವ ಆಸೆಪಟ್ಟಿದ್ದ ಬಾಗಪ್ಪ ಹರಿಜನ ಬರ್ಬರ ಹತ್ಯೆ!
ಹೋಟೆಲ್ನಲ್ಲಿ ಸಿದ್ದೇಶ್, ಜಗದೀಶ್ ಕೆಲಸ ಮಾಡುತ್ತಿದ್ದ. ಆರೋಪಿ ಸಿದ್ದೇಶ್ನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿಯಲು ಹಣ ನೀಡಿಲ್ಲವೆಂದು ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣು
ಕುಡಿಯಲು ಹಣ ನೀಡಿಲ್ಲವೆಂದು ಯುವಕ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹಾವೇರಿ ತಾಲೂಕಿನ ಕರಜಗಿ ಗ್ರಾಮದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಪ್ರಮೋದ್ ಹೊಸಮನಿ (31) ಆತ್ಮಹತ್ಯೆ ಮಾಡಿಕೊಂಡ ಯುವಕ. ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ಶಿರಾ ತಾಲೂಕಿನ ಚಂಗಾವರ ಗ್ರಾಮದ ಸಿದ್ದಲಿಂಗಮ್ಮ ಎಂಬುವರ ಮನೆಯಲ್ಲಿ ಆರೋಪಿ ಕಳ್ಳತನ ಮಾಡಿದ್ದ.
ಇದನ್ನೂ ಓದಿ: ಯುವತಿ ಅನುಮಾನಸ್ಪದ ಸಾವು: ಇದೊಂದು ಮರ್ಯಾದಾ ಹತ್ಯೆ ಎಂದ ಪ್ರಿಯಕರ!
ಮನೆಯ ಬೀರುವಿನಲ್ಲಿದ್ದ 20 ಸಾವಿರ ರೂ ನಗದು ಹಾಗೂ 4 ಗ್ರಾಂ ಮಾಟಿ, 12 ಗ್ರಾಂ ಚಿನ್ನದ ಸರ ಜೊತೆಗೆ ಮಾಂಗಲ್ಯ ಸರ ಕಳ್ಳತನ ಮಾಡಿದ್ದ. ಪಾವಗಡ ಮೂಲದ ಬಂಧಿತ ಆರೋಪಿ ಶ್ರೀನಿವಾಸನಿಂದ 1,45000 ಬೆಲೆಬಾಳುವ ಬಂಗಾರದ ಮಾಟಿ, ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:57 pm, Wed, 12 February 25



