ಎಲ್ಲವನ್ನೂ ಬಿಟ್ಟು ದೇವರ ಗುಡಿ ಕಟ್ಟಿ ಪಾಪ ತೊಳೆದುಕೊಳ್ಳಲು ಮುಂದಾಗಿದ್ದ ಬಾಗಪ್ಪ
ಕಳೆದ ಹಲವು ದಶಕಗಳಿಂದ ಭೀಮಾ ತೀರದಲ್ಲಿ ಸಂಚಲನ ಸೃಷ್ಟಿಸಿದ್ದ ಬಾಗಪ್ಪ ಹತ್ಯೆಗೀಡಾಗಿದ್ದಾನೆ. ಹಲವಾರು ಜನರ ಜೀವ ತೆಗೆದ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪನ ರಕ್ತ ಚರಿತ್ರೆಯ ಕತೆ ರೋಚಕವಾಗಿದೆ. ಭೀಮಾ ತೀರದಲ್ಲಿ ತನ್ನದೇ ಹವಾ ಮಾಡಿದ್ದ ಬಾಗಪ್ಪನನನ್ನೇ ವಿರೋಧಿಗಳು ಕೊಚ್ಚಿ ಕೊಂದು ಹಾಕಿದ್ದಾರೆ. ಇನ್ನು ಬಾಗಪ್ಪ ಇತ್ತೀಚೆಗೆ ಎಲ್ಲಾ ರೌಡಿಸಂ ಬಿಟ್ಟು ನೆಮ್ಮದಿ ಜೀವನ ನಡೆಸಲು ಮುಂದಾಗಿದ್ದ, ಆದ್ರೆ, ಇದಕ್ಕೆ ವಿರೋಧಿಗಳು ಅವಕಾಶ ನೀಡಿಲ್ಲ.
ವಿಜಯಪುರ, (ಫೆಬ್ರವರಿ 12): ರಕ್ತಸಿಕ್ತ ಭೀಮಾತೀರದ ಅಧ್ಯಾಯದಲ್ಲಿ ಮತ್ತೊಂದು ಹತ್ಯೆಯಾಗಿದೆ. ಭೀಮಾತೀರದ ನಟೋರಿಯಸ್ ಖ್ಯಾತಿಯ ಭಾಗಪ್ಪ ಹರಿಜನನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ವಿಜಯಪುರದ ರೆಡಿಯೋ ಕೇಂದ್ರದ ಬಳಿಯ ಮದಿನಾ ನಗರದಲ್ಲಿ ನಿನ್ನೆ(ಫೆಬ್ರವರಿ 11) ರಾತ್ರಿ ನಡೆದ ಬಾಗಪ್ಪ. ಊಟ ಮಾಡಿ ರಾತ್ರಿ ಮನೆಯ ಬಳಿ ವಾಕ್ ಮಾಡುತ್ತಿದ್ದಾಗ ದಾಳಿ ಮಾಡಿ ಕೊಚ್ಚಿ ಕೊಂದಿದ್ದಾರೆ. ಇನ್ನು ಬಾಗಪ್ಪ ಇತ್ತೀಚೆಗೆ ಈ ರೌಡಿಸಂನಿಂದ ದೂರ ಉಳಿದು ನೆಮ್ಮದಿಯಾಗಿ ಜೀವನ ಮಾಡಬೇಕೆಂದಿದ್ದ. ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ್ದ ಬಾಗಪ್ಪ, ನಾನು ಜನಸಾಮಾನ್ಯರಂತೆ ಬದುಕಲು ಇಷ್ಟಪಡುತ್ತಿದ್ದೇನೆಂದು ಹೇಳಿಕೊಂಡಿದ್ದ. ಅದರಂತೆ ಬಾಗಪ್ಪ ಎಲ್ಲವನ್ನೂ ಬಿಟ್ಟು ನೆಮ್ಮದಿ ಜೀವನ ನಡೆಸಲು ಮುಂದಾಗಿದ್ದ. ಅಲ್ಲದೇ ಸ್ವಗ್ರಾಮ ಬ್ಯಾಡಗಿಹಾಳ ಗ್ರಾಮದಲ್ಲಿ 50 ಲಕ್ಷ ರೂಪಾಯಿಗೂ ಅಧಿಕಾರ ಖರ್ಚು ಮಾಡಿ ಲಕ್ಷ್ಮಿ ದೇವಸ್ಥಾನ ಕಟ್ಟಿಸಲು ಮುಂದಾಗಿದ್ದ. ಹೀಗಿರುವಾಗ ವಿರೋಧಿಗಳು ಮಾತ್ರ ಬಾಗಪ್ಪನನ್ನು ನೆಮ್ಮದಿಯಾಗಿ ಇರಲು ಬಿಟ್ಟಿಲ್ಲ.
