ವಿಜಯಪುದ ಶವಾಗಾರದ ಮುಂದೆ ಜಮಾಯಿಸಿದ್ದ ಬಾಗಪ್ಪ ಹರಿಜನ್ ಹುಡುಗರಿಂದ ಅಣ್ಣ ಹೋಗ್ಬಿಟ್ನಲ್ಲೋ ಅಂತ ರೋದನೆ!
ಜಮೀನು ವಿವಾದ, ಆಸ್ತಿ ವಿವಾದ ಇತ್ಯರ್ಥ ಮಾಡಿಸಿಕೊಡುತ್ತಿದ್ದ ಬಾಗಪ್ಪ ಹರಿಜನ್ ಒಬ್ಬ ನಟೋರಿಯಸ್ ರೌಡಿಶೀಟರ್. ಕೊಲೆ ಪ್ರಕರಣಗಳೂ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಅವನು ಅರೋಪಿಯಾಗಿದ್ದ. ಭೀಮಾತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ್ ಸಹಚರನಾಗಿದ್ದ ಭಾಗಪ್ಪನ ಮೇಲೆ 2018 ರಲ್ಲಿ ಕೋರ್ಟೊಂದರ ಆವರಣದಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು.
ವಿಜಯಪುರ: ಇವರೆಲ್ಲ ನಿನ್ನೆ ರಾತ್ರಿ ಭೀಕರವಾಗಿ ಕೊಲೆಯಾದ ಬಾಗಪ್ಪ ಹರಿಜನ್ನ ಹುಡುಗರು ವಿಜಯಪುರ ಜಿಲ್ಲಾಸ್ಪತ್ರೆ ಶವಾಗಾರದ ಮುಂದೆ ಜಮಾಯಿಸಿ ಬಾಗಪ್ಪ ದೇಹದ ಮರಣೋತ್ತರ ಪರೀಕ್ಷೆ ಕೊನೆಗೊಳ್ಳಲು ಕಾಯುತ್ತಿದ್ದಾರೆ. ಒಬ್ಬ ಯುವಕ ಶವಾಗಾರದ ಒಳಗಿಂದ ಹೊರಬರುತ್ತಾನೆ ಮತ್ತು ಶವಾಗಾರದ ಎದುರುಗಡೆ ಕೂತು ರೋದಿಸುತ್ತಿರುವ ಮತ್ತೊಬ್ಬ ಯುವಕನ ತೆಕ್ಕೆಗೆ ಬಿದ್ದು ಅವನನ್ನು ಸಂತೈಸುತ್ತಾ ತಾನೂ ರೋದಿಸುತ್ತಾನೆ. ಬಾಗಪ್ಪ ತನ್ನದೇ ಆದ ಒಂದು ಗುಂಪು ಕಟ್ಟಿಕೊಂಡಿದ್ದ ಮತ್ತು ಅವನೊಂದಿಗೆ ನೂರಾರು ಯುವಕರಿದ್ದರು ಅನ್ನೋದು ದೃಶ್ಯಗಳಿಂದ ಸಾಬೀತಾಗುತ್ತದೆ. ಬಾಗಪ್ಪ ವಿಜಯಪುರದ ಮದೀನಾ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಮತ್ತು ಮಂಗಳರಾತ್ರಿ ಅಲ್ಲೇ ಅವನ ಹತ್ಯೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಗಪ್ಪ ಹರಿಜನ್ ಬದುಕಿಗೆ ಅಂತ್ಯ ಕಾಣಿಸಲು ಹಂತಕರು ಫೂಲ್ಪ್ರೂಫ್ ಯೋಜನೆಯೊಂದಿಗೆ ಅಗಮಿಸಿದ್ದರು!