ದೆಹಲಿಗೆ ಭೇಟಿ ನೀಡುವ ಕರ್ನಾಟಕದ ಎಲ್ಲ ಕಾಂಗ್ರೆಸ್ ನಾಯಕರೊಂದಿಗೆ ಜಾಸ್ತಿ ಹೊತ್ತು ಮಾತಾಡುತ್ತೇನೆ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಆಧರಿಸಿಯೇ ಮಾಧ್ಯಮದವರು ವರದಿಗಳನ್ನು ಮಾಡುತ್ತಾರೆ, ಅವರು ನೀಡುವ ಹೇಳಿಕೆಗಳು ಊಹಾಪೋಹಗಳಾಗಿದ್ದರೆ ಮಾತ್ರ ವರದಿಗಾರಿಕೆ ಊಹೆಗಳಿಂದ ಕೂಡಿರುತ್ತದೆ. ನಿನ್ನೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ನಡುವೆ ಹತ್ತು ಗಂಟೆಗಳಿಗಿಂತ ಹೆಚ್ಚು ಸಮಯ ಚರ್ಚೆ ನಡೆದಿದೆ. ಇದಕ್ಕೆ ಮೊದಲು ಖರ್ಗೆಯವರು ರಾಜ್ಯದ ಯಾವ ನಾಯಕನಿಗೆ ಅಷ್ಟೊಂದು ಸಮಯ ನೀಡಿದ್ದರು?
ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿ ಊಹಾಪೋಹದ ವದಂತಿಗಳಿಗೆ ಮಹತ್ವ ನೀಡಿ ವರದಿಗಾರಿಕೆ ಮಾಡದಿರುವಂತೆ ಮನವಿ ಮಾಡಿದರು. ನಿನ್ನೆ ದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಖರ್ಗೆ ಅವರೊಂದಿಗೆ ಗಂಟೆಗಟ್ಟಲೆ ಮಾತಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಿಂದ ಅನೇಕ ಸಚಿವರು ಬಂದು ಭೇಟಿಯಾಗುತ್ತಾರೆ, ಸತೀಶ್ ಬರುತ್ತಾರೆ, ಪರಮೇಶ್ವರ್ ಬರ್ತಾರೆ, ಶಿವಕುಮಾರ್ ಬರ್ತಾರೆ, ಸಿದ್ದರಾಮಯ್ಯನೂ ಬರುತ್ತಾರೆ, ಕರ್ನಾಟಕದವರು ಎಂಬ ಕಾರಣಕ್ಕೆ ಅವರೊಂದಿಗೆ ಹೆಚ್ಚು ಸಮಯ ಮಾತಾಡುತ್ತೇನೆ, ಅದನ್ನೇ ಮುಂದಿಟ್ಟುಕೊಂಡು ಏನೆಲ್ಲ ಬರೆಯಬೇಡಿ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ, ನಾಯಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನೆ