Video: ಹೈದರಾಬಾದ್: ದೇವಾಲಯದ ಗರ್ಭಗುಡಿಗೊಳಗೆ ಮಾಂಸ ಪತ್ತೆ
ದೇವಾಲಯವೊಂದರ ಗರ್ಭಗುಡಿಯಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ದೇವಾಲಯದ ಆವರಣದಲ್ಲಿ ಉದ್ವಿಗ್ನತೆ ಉಮಟಾಗಿದೆ. ದೇವಾಲಯದ ಆವರಣದಲ್ಲಿದ್ದ ಭಕ್ತರು ಘಟನೆಯ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಟಪ್ಪಾಚಬುತ್ರ ಪ್ರದೇಶದ ಜೀರಾ ಹನುಮಾನ್ ದೇವಾಲಯದ ಅಧಿಕಾರಿಗಳ ಪ್ರಕಾರ, ಅರ್ಚಕರು ಮಾಂಸದ ತುಂಡುಗಳನ್ನು ನೋಡಿ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು. ಸುದ್ದಿ ಹರಡಿದ ತಕ್ಷಣ, ದೇವಾಲಯದ ಹೊರಗೆ ಜನಸಮೂಹ ಜಮಾಯಿಸಿತು.
ದೇವಾಲಯವೊಂದರ ಗರ್ಭಗುಡಿಯಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ದೇವಾಲಯದ ಆವರಣದಲ್ಲಿ ಉದ್ವಿಗ್ನತೆ ಉಮಟಾಗಿದೆ. ದೇವಾಲಯದ ಆವರಣದಲ್ಲಿದ್ದ ಭಕ್ತರು ಘಟನೆಯ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಟಪ್ಪಾಚಬುತ್ರ ಪ್ರದೇಶದ ಜೀರಾ ಹನುಮಾನ್ ದೇವಾಲಯದ ಅಧಿಕಾರಿಗಳ ಪ್ರಕಾರ, ಅರ್ಚಕರು ಮಾಂಸದ ತುಂಡುಗಳನ್ನು ನೋಡಿ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು. ಸುದ್ದಿ ಹರಡಿದ ತಕ್ಷಣ, ದೇವಾಲಯದ ಹೊರಗೆ ಜನಸಮೂಹ ಜಮಾಯಿಸಿತು.
ಬುಧವಾರ ಬೆಳಿಗ್ಗೆ ದೇವಾಲಯದ ಅರ್ಚಕರು ದೇವಸ್ಥಾನಕ್ಕೆ ಬಂದಾಗ, ಶಿವಲಿಂಗದ ಹಿಂದೆ ಮಾಂಸವನ್ನು ಇಟ್ಟಿರುವುದು ಕಂಡುಬಂದಿದೆ.
ಅದು ಹನುಮಾನ್ ಮಂದಿರವಾಗಿದ್ದು ಹಲವು ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಸುದ್ದಿ ಹರಡುತ್ತಿದ್ದಂತೆ, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ದೇವಾಲಯದಲ್ಲಿ ಜಮಾಯಿಸಿದರು.
ದೇವಾಲಯದಲ್ಲಿ ಮಾಂಸ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಡಿಸಿಪಿ ಚಂದ್ರ ಮೋಹನ್ ತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾವು ಸ್ಥಳಕ್ಕೆ ತಲುಪಿದಾಗ, ದೇವಾಲಯದ ಬಾಗಿಲುಗಳು ಮುಚ್ಚಿರುವುದನ್ನು ಕಂಡೆವು. ಯಾವುದೋ ಪ್ರಾಣಿ ಮಾಂಸವನ್ನು ಒಳಗೆ ತಂದಿರಬಹುದು ಎಂದು ನಾವು ಅನುಮಾನಿಸುತ್ತೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ