ಬಾಗಪ್ಪ ಹರಿಜನ್ ಮರಣೋತ್ತರ ಪರೀಕ್ಷೆ ವಿಳಂಬ, ಅಭಿಮಾನಿಗಳಲ್ಲಿ ಅಸಮಾಧಾನ ಮತ್ತು ತಳಮಳ
ಹತ್ಯೆಯಾದ ಬಾಗಪ್ಪ ಹರಿಜನ ಎಲ್ಲ ದುಷ್ಕೃತ್ಯಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಬೇಕೆಂದುಕೊಂಡಿದ್ದನಂತೆ. ತನ್ನ ಮೂರೂವರೆ ಎಕರೆ ಜಮೀನಲ್ಲಿ ದೇವಸ್ಥಾನ ಕಟ್ಟಿಸುವ ನಿಮಿತ್ತ ಭೂಮಿಪೂಜೆಯನ್ನು ನೆರವೇರಿಸಿದ್ದ ಮತ್ತು ದಾನಧರ್ಮಗಳ ಮೂಲಕ ಸಮಾಜ ಸೇವೆ ಮಾಡಬೇಕೆಂದುಕೊಂಡಿದ್ದ ಎಂದು ನಮ್ಮ ವರದಿಗಾರ ಹೇಳುತ್ತಾರೆ. ಬಾಗಪ್ಪ ದೇಹದ ಮರಣೋತ್ತರ ಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರಂತೆ.
ವಿಜಯಪುರ: ನಗರದ ಬಿಎಲ್ಡಿಈ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿರುವ ಬಾಗಪ್ಪ ಹರಿಜನ್ ದೇಹದ ಮರಣೋತ್ತರ ಪರೀಕ್ಷೆ ವಿಳಂಬವಾಗುತ್ತಿದೆ. ಅಲ್ಲಿನ ವೈದ್ಯಕೀಯ ಸಿಬ್ಬಂದಿ ಬೆಳಗ್ಗೆ 6ಗಂಟೆಗೆಲ್ಲ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಕುಟುಂಬಸ್ಥರಿಗೆ ನೀಡಲಾಗುವುದು ಎಂದು ಹೇಳಿದ್ದರಂತೆ. ಅದರೆ, ಮಧ್ಯಾಹ್ನ ಕಳೆದರೂ ದೇಹವನ್ನು ಹಸ್ತಾಂತರಿಸದಿರೋದು ಬಾಗಪ್ಪ ಅಭಿಮಾನಿಗಳಲ್ಲಿ ಮತ್ತು ಕುಟುಂಬದ ಸದಸ್ಯರಲ್ಲಿ ಅಸಮಾಧಾನ ಉಂಟುಮಾಡಿದೆ. ಅಭಿಮಾನಿಗಳು ಶವಾಗಾರದ ಮುಂದೆ ನೆರೆದು ತಡವಾಗುತ್ತಿರುವುದಕ್ಕೆ ತಳಮಳ ವ್ಯಕ್ತಪಡಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯಪುದ ಶವಾಗಾರದ ಮುಂದೆ ಜಮಾಯಿಸಿದ್ದ ಬಾಗಪ್ಪ ಹರಿಜನ್ ಹುಡುಗರಿಂದ ಅಣ್ಣ ಹೋಗ್ಬಿಟ್ನಲ್ಲೋ ಅಂತ ರೋದನೆ!
Published on: Feb 12, 2025 03:22 PM
Latest Videos