Narendra Modi: ಎಐನಿಂದ ಎಡಗೈನಲ್ಲಿ ಬರೆಯೋ ಚಿತ್ರ ಬಿಡಿಸೋಕಾಗಲ್ವ? ಎಐ ಸಮಿಟ್ನಲ್ಲಿ ಮೋದಿ ಅಚ್ಚರಿ ಹೇಳಿಕೆ
Narendra Modi at Paris AI Action Summit: ಪ್ಯಾರಿಸ್ ಎಐ ಆ್ಯಕ್ಷನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುತೂಹಲ ಮೂಡಿಸುವ ಒಂದು ವಿಷಯ ಪ್ರಸ್ತಾಪಿಸಿದರು. ಈಗಿರುವ ಎಐ ಆ್ಯಪ್ಗಳಲ್ಲಿ ಟ್ರೈನ್ ಮಾಡಲಾಗಿರುವ ಡಾಟಾ ಹೇಗೆ ಪೂರ್ವಗ್ರಹದಿಂದ ಕೂಡಿವೆ ಎಂಬುದನ್ನು ಎತ್ತಿತೋರಿಸಿದ್ದಾರೆ. ಎಐ ಆ್ಯಪ್ಗಳು ಎಡಗೈನಲ್ಲಿ ಬರೆಯುತ್ತಿರುವ ವ್ಯಕ್ತಿಯ ಚಿತ್ರವನ್ನು ಜನರೇಟ್ ಮಾಡುವುದಿಲ್ಲ ಎಂದಿದ್ದಾರೆ.
ಪ್ಯಾರಿಸ್, ಫೆಬ್ರುವರಿ 12: ಫ್ರಾನ್ಸ್ ರಾಜಧಾನಿಯಲ್ಲಿ ನಡೆಯುತ್ತಿರುವ ಎಐ ಆ್ಯಕ್ಷನ್ ಸಮಿಟ್ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ಎಐ ವಿಚಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಭಾರತವೇ ಸ್ವಂತವಾಗಿ ಎಲ್ಎಲ್ಎಂ ಅಭಿವೃದ್ಧಿಪಡಿಸುವ ಉದ್ದೇಶ ಇರುವುದನ್ನು ತಿಳಿಸಿದರು. ಈ ಮಧ್ಯೆ ಅವರು ಎಐ ಆ್ಯಪ್ಗಳಲ್ಲಿರುವ ಒಂದು ದೋಷವನ್ನು ಎತ್ತಿತೋರಿಸಿ ಅಚ್ಚರಿ ಮೂಡಿಸಿದರು. ಎಡಗೈನಲ್ಲಿ ಒಬ್ಬ ವ್ಯಕ್ತಿ ಬರೆಯುತ್ತಿರುವ ಚಿತ್ರವನ್ನು ಎಐ ಆ್ಯಪ್ಗಳು ಬಿಡಿಸಲು ಆಗುವುದಿಲ್ಲ ಎಂದು ಮೋದಿ ಆ ತುಂಬಿದ ಗಣ್ಯರ ಸಭೆಯಲ್ಲಿ ಹೇಳಿದರು.
‘ನೀವು ಎಐ ಆ್ಯಪ್ನಲ್ಲಿ ಮೆಡಿಕಲ್ ರಿಪೋರ್ಟ್ ಅಪ್ಲೋಡ್ ಮಾಡಿದರೆ ಅದು ಬಹಳ ಸರಳವಾಗಿ ನಿಮ್ಮ ಆರೋಗ್ಯದ ಬಗ್ಗೆ ವಿವರಣೆ ನೀಡುತ್ತದೆ. ಅದೆ ಅ್ಯಪ್ಗೆ ನೀವು ಎಡಗೈನಲ್ಲಿ ಬರೆಯುತ್ತಿರುವ ವ್ಯಕ್ತಿಯ ಚಿತ್ರ ಬಿಡಿಸಲು ಹೇಳಿದರೆ ಬಹುತೇಕ ಅದು ಬಲಗೈನಲ್ಲಿ ಬರೆಯುತ್ತಿರುವ ಚಿತ್ರ ತೋರಿಸುತ್ತದೆ. ಟ್ರೈನಿಂಗ್ ಡಾಟಾ ಈ ರೀತಿ ಮೂಡಿಸಲಾಗಿರುವುದು ಇದಕ್ಕೆ ಕಾರಣ’ ಎಂದು ಪ್ಯಾರಿಸ್ ಸಭೆಯಲ್ಲಿ ನರೇಂದ್ರ ಮೋದಿ ತಿಳಿಸಿದರು.
ಎಐ ಆ್ಯಪ್ಗಳಲ್ಲಿನ ಈ ಕೊರತೆ ಬಗ್ಗೆ ಮೋದಿ ಹೇಳಿದ್ದು ಬಹಳ ಜನರಿಗೆ ಅಚ್ಚರಿ ಮೂಡಿಸಿದೆ. ಇಂಟರ್ನೆಟ್ನಲ್ಲಿ ಲಕ್ಷಾಂತರ ಜನರು ಗ್ರೋಕ್, ಚ್ಯಾಟ್ಜಿಪಿಟಿ, ಜೆಮಿನಿ ಇತ್ಯಾದಿ ಎಐ ಆ್ಯಪ್ಗಳಲ್ಲಿ ಎಡಗೈನಲ್ಲಿ ವ್ಯಕ್ತಿ ಬರೆಯುತ್ತಿರುವ ಚಿತ್ರಗಳನ್ನು ಜನರೇಟ್ ಮಾಡಲು ಯತ್ನಿಸಿದ್ದಾರೆ. ಶಾಕಿಂಗ್ ಎಂದರೆ ಹೆಚ್ಚಿನ ಜನರಿಗೆ ಬಲಗೈ ಚಿತ್ರವೇ ಸಿಕ್ಕಿದೆ.
ಇದನ್ನೂ ಓದಿ: ಭಾರತದಲ್ಲಿ ಮುಂದಿನ ಜಾಗತಿಕ ಶೃಂಗಸಭೆ; ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಗ್ರೋಕ್ನಲ್ಲಿ ಇಮೇಜ್
ನಾವೂ ಕೂಡ ಗ್ರೋಕ್ನಲ್ಲಿ ಇಮೇಜ್ ರಚಿಸಲು ಯತ್ನಿಸಿದಾಗ ಸರಿಯಾಗಿ ಬಂದಿದ್ದು ಹೌದು. ಆದರೆ, ಎಐ ಆ್ಯಪ್ನಲ್ಲಿ ನೀವು ಎಡಗೈ ಅಥವಾ ಬಲಗೈ ಎಂದು ತಿಳಿಸದೆಯೇ, ಹಾಗೆಯೇ ಬರೆಯುತ್ತಿರುವ ವ್ಯಕ್ತಿಯ ಚಿತ್ರ ಬಿಡಿಸಲು ಹೇಳಿದರೆ ಅದು ಬಲಗೈನಿಂದ ಬರೆಯುತ್ತಿರುವ ವ್ಯಕ್ತಿಯ ಚಿತ್ರವನ್ನೇ ಜನರೇಟ್ ಮಾಡುತ್ತದೆ. ಡಾಟಾ ಟ್ರೈನಿಂಗ್ ಮಾಡಿದವರು, ಬರೆಯುವುದೆಂದರೆ ಡೀಫಾಲ್ಟ್ ಆಗಿ ಬಲಗೈ ಎಂದೇ ಭಾವಿಸಿರುತ್ತಾರೆ.
ಮೋದಿ ಹೇಳಲು ಹೊರಟಿದ್ದು ಇದೇ ಅಂಶವನ್ನು ಇರಬಹುದು. ಡಾಟಾ ಟ್ರೈನಿಂಗ್ ಮಾಡುತ್ತಿರುವವರ ಪೂರ್ವಗ್ರಹ ಲೇಪಿತ ವಿಚಾರಗಳ ಪರಿಣಾಮವು ಎಐ ಔಟ್ಪುಟ್ನಲ್ಲಿ ಕಾಣಬಹುದು. ಈಗಿನ ಎಲ್ಎಲ್ಎಂ ಮಾಡಲ್ಗಳು ಯಾವತ್ತೂ ನ್ಯೂಟ್ರಲ್ ಆಗಿರಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ

ಟಿವಿ9 ಎಕ್ಸ್ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್

ಸರ್ಕಾರದ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
