ಗಾಂಧಿ ದೇಗುಲ: ಆ ಗ್ರಾಮಸ್ಥರು ಒಟ್ಟಾಗಿ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ, ಗಾಂಧಿ ದೇವರ ಆಶೀರ್ವಾದ ಪಡೆಯುತ್ತಾರೆ

|

Updated on: Oct 02, 2023 | 4:03 PM

ಹೈದರಾಬಾದ್‌ನಿಂದ 75 ಕಿಮೀ ದೂರದಲ್ಲಿರುವ ಚಿಟ್ಯಾಲ ಪಟ್ಟಣದ ಸಮೀಪವಿರುವ ದೊಡ್ಡ ಕಪರ್ತಿ ಗ್ರಾಮದಲ್ಲಿ ಮೊದಲ ಗಾಂಧಿ ದೇವಾಲಯವನ್ನು ನಿರ್ಮಿಸಲಾಯಿತು. ಈ ಮಹಾತ್ಮಾ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸುತ್ತಮುತ್ತಲಿನ ಜನರಿಗೆ ಭಾವನಾತ್ಮಕವಾಗುತ್ತಿದೆ. ಮಹಾತ್ಮ ಗಾಂಧಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಪಿ.ವಿ. ಕೃಷ್ಣರಾವ್ ಮಾತನಾಡಿ ಗಾಂಧಿ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಗಾಂಧಿ ದೇಗುಲ: ಆ ಗ್ರಾಮಸ್ಥರು ಒಟ್ಟಾಗಿ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ, ಗಾಂಧಿ ದೇವರ ಆಶೀರ್ವಾದ ಪಡೆಯುತ್ತಾರೆ
ಗಾಂಧಿ ದೇಗುಲ - ಇಲ್ಲಿ ಗ್ರಾಮಸ್ಥರು ಒಟ್ಟಾಗಿ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುತ್ತಾರೆ
Follow us on

ಬ್ರಿಟಿಷರಿಂದ ಗುಲಾಮಗಿರಿಯ ವಿಮೋಚನೆಗಾಗಿ, ಅನೇಕ ವೀರರು ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಡಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಹೌದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹಾತ್ಮ ಗಾಂಧೀಜಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಗಾಂಧಿ ಜಯಂತಿ (Gandhi Jayanti). ಈ ಸಂದರ್ಭದಲ್ಲಿ ಇಷ್ಟಾರ್ಥಗಳನ್ನು ಈಡೇರಿಸುವ ಗಾಂಧಿ ಮಂದಿರದ ಬಗ್ಗೆ ತಿಳಿದುಕೊಳ್ಳೋಣ.. ಈ ಗಾಂಧಿ ಮಂದಿರ ತೆಲಂಗಾಣದಲ್ಲಿದೆ (Mahatma Gandhi temple, nalgonda). ಇದು ಕೆಲವೇ ಜನರಿಗೆ ತಿಳಿದಿದೆ. ಆದರೆ ದಿನದಿಂದ ದಿನಕ್ಕೆ ಈ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡುವುದು ಭಕ್ತರಿಗೆ (Devotees) ಸೆಂಟಿಮೆಂಟಾಗುತ್ತಿದೆ.

ಹೈದರಾಬಾದ್‌ನಿಂದ 75 ಕಿಮೀ ದೂರದಲ್ಲಿರುವ ಚಿಟ್ಯಾಲ ಪಟ್ಟಣದ ಸಮೀಪವಿರುವ ದೊಡ್ಡ ಕಪರ್ತಿ ಗ್ರಾಮದಲ್ಲಿ ಮೊದಲ ಗಾಂಧಿ ದೇವಾಲಯವನ್ನು ನಿರ್ಮಿಸಲಾಯಿತು. ಈ ಮಹಾತ್ಮಾ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸುತ್ತಮುತ್ತಲಿನ ಜನರಿಗೆ ಭಾವನಾತ್ಮಕವಾಗುತ್ತಿದೆ. ಮಹಾತ್ಮ ಗಾಂಧಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಪಿ.ವಿ. ಕೃಷ್ಣರಾವ್ ಮಾತನಾಡಿ ಗಾಂಧಿ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ತೆಲಂಗಾಣ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ನಂತರ ಸಾಮಾನ್ಯ ದಿನಗಳಲ್ಲಿಯೂ ಸಾಮಾನ್ಯವಾಗಿ 60-70 ಪ್ರವಾಸಿಗರು ಬರುತ್ತಾರೆ ಈ ದೇವಾಲಯಕ್ಕೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ರಾವ್ ಹೇಳಿದರು. ಒಂದು ದಿನದಲ್ಲಿ ಸುಮಾರು 350 ಭಕ್ತರು ಈಗ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

2012 ರಲ್ಲಿ ಮಹಾತ್ಮ ಗಾಂಧಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಈ ದೇವಾಲಯಕ್ಕೆ ಭೂಮಿ ಪೂಜೆಯನ್ನು ಮಾಡಲಾಯಿತು. ಸೆಪ್ಟೆಂಬರ್ 17, 2014 ರಂದು ದೇವಾಲಯದಲ್ಲಿ ಮಹಾತ್ಮ ಗಾಂಧಿಯವರ ಅಮೃತ ಶಿಲೆಯ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಈ ದೇವಾಲಯದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸದಿದ್ದರೂ, ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜನರು ನಿಯಮಿತವಾಗಿ ಗಾಂಧಿ ದೇವಸ್ಥಾನಕ್ಕೆ ಬಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ದೇವಾಲಯವು ನಿಧಾನವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.

Also Read: ಜೈಲಿನಲ್ಲಿ ಚಂದ್ರಬಾಬು ನಾಯ್ಡು ದೀಕ್ಷೆ ಮುಂದುವರಿಕೆ, ಗಾಂಧಿ ಜಯಂತಿ ದಿನ ಟಿಡಿಪಿ ಪದಾಧಿಕಾರಿಗಳ ಸತ್ಯಮೇವ ಜಯತೆ ತಾರಕಕ್ಕೆ

ಹೈದರಾಬಾದ್-ವಿಜಯವಾಡ ಹೆದ್ದಾರಿಯ ಬಳಿ ನಾಲ್ಕು ಎಕರೆ ಜಾಗದಲ್ಲಿ ನಿರ್ಮಿಸಲಾದ ಈ ದೇಗುಲದಲ್ಲಿ ಮಹಾತ್ಮ ಗಾಂಧಿ ಅವರು ಜನರಿಗೆ ಆಶೀರ್ವಾದ ನೀಡುತ್ತಿರುವ ಭಂಗಿಯಲ್ಲಿ ಕುಳಿತಿದ್ದಾರೆ. ಚಿಟ್ಯಾಲ ಸಮೀಪದ ಗ್ರಾಮಸ್ಥರ ಮನೆಯಲ್ಲಿ ಮದುವೆ ನಡೆಯುತ್ತಿದ್ದ ವೇಳೆ ದೇವಸ್ಥಾನದ ಟ್ರಸ್ಟ್ ವತಿಯಿಂದ ದಂಪತಿಗೆ ರೇಷ್ಮೆ ವಸ್ತ್ರ ನೀಡಲು ಮುಂದಾಗಿದೆ. ಮದುವೆಯ ಆಮಂತ್ರಣ ಪತ್ರಿಕೆಗಳನ್ನು ವಿತರಿಸುವ ಮೊದಲು ಗ್ರಾಮಸ್ಥರು ಪೂಜೆ ಸಲ್ಲಿಸಿ ಬಾಪುವಿನ ಆಶೀರ್ವಾದ ಪಡೆಯುವುದು ವಾಡಿಕೆಯಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಮಹಾತ್ಮರನ್ನು ಮಹಾತ್ಮರಂತೆ ಕಾಣದೆ ದೈವತ್ವ ತುಂಬಿದ ವ್ಯಕ್ತಿಯಾಗಿ ಕಾಣುತ್ತಾರೆ. ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು ಈ ದೇವಾಲಯವನ್ನು ರಾಜ್ಯದ ದೈವಿಕ ಸ್ಥಳಗಳಲ್ಲಿ ಒಂದಾಗಿ ಸೇರಿಸಿದೆ. ಈ ದೇವಾಲಯದ ಆವರಣದಲ್ಲಿ ಕಲ್ಯಾಣ ಮಂಟಪವೂ ಇದೆ. ದೇವಾಲಯದ ಟ್ರಸ್ಟ್ ನಿಯಮಗಳೊಂದಿಗೆ ಮದುವೆಗಳಿಗೆ ಅನುಮತಿ ನೀಡಲಾಗುತ್ತದೆ. ಕಲ್ಯಾಣ ಮಂಟಪವು ಅಂತರ್ಜಾತಿ ವಿವಾಹಗಳಿಗೆ ಅತ್ಯಲ್ಪ ವೆಚ್ಚದಲ್ಲಿ ಬಾಡಿಗೆಗೆ ಲಭ್ಯವಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ