ವಿಲನ್ ಅಥವಾ ಹೀರೋ: ಪಾಕಿಸ್ತಾನಿಗಳ ದೃಷ್ಟಿಯಲ್ಲಿ ಮಹಾತ್ಮ ಗಾಂಧಿ ಯಾರು?

ಗಾಂಧೀಜಿಯವರು ಭಾರತದ ಪಾಲಿಗೆ ಮಹಾತ್ಮ, ಸ್ವಾತಂತ್ರ್ಯಕ್ಕಾಗಿ ಅವರ ಹೋರಾಟವು ಅಚ್ಚಳಿಯದೆ ಭಾರತೀಯರ ಮನಸ್ಸಿನಲ್ಲಿ ಉಳಿದಿದೆ. ಹಾಗಾದರೆ ಪಾಕಿಸ್ತಾನದ ಜನತೆ ಮಹಾತ್ಮ ಗಾಂಧಿಯವರನ್ನು ಹೇಗೆ ಕಾಣುತ್ತದೆ ಎಂಬುದನ್ನು ತಿಳಿಯೋಣ. ಪಾಕಿಸ್ತಾನದ ಸರ್ಕಾರಗಳು ಮಹಾತ್ಮ ಗಾಂಧಿಯನ್ನು ಯಾವಾಗಲೂ ಖಳನಾಯಕ ಎನ್ನುವ ರೀತಿಯಲ್ಲೇ ಪರಿಗಣಿಸುತ್ತಿದ್ದವು. ಆದರೆ ಪಾಕಿಸ್ತಾನದ ಹೆಚ್ಚಿನ ಜನರು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ರಾಣಾ ಅಲಿ ಹಸನ್ ಚೌಹಾಣ್ ಪಾಕಿಸ್ತಾನದ ಇತಿಹಾಸಕಾರ. ಗಾಂಧೀಜಿಯನ್ನು ಅತ್ಯಂತ ಗೌರವದಿಂದ ಕಂಡವರು.

ವಿಲನ್ ಅಥವಾ ಹೀರೋ: ಪಾಕಿಸ್ತಾನಿಗಳ ದೃಷ್ಟಿಯಲ್ಲಿ ಮಹಾತ್ಮ ಗಾಂಧಿ ಯಾರು?
ಮಹಾತ್ಮ ಗಾಂಧಿ, ಜಿನ್ನಾImage Credit source: Star Peace
Follow us
ನಯನಾ ರಾಜೀವ್
|

Updated on: Oct 02, 2023 | 3:12 PM

ಗಾಂಧೀಜಿಯವರು ಭಾರತದ ಪಾಲಿಗೆ ಮಹಾತ್ಮ, ಸ್ವಾತಂತ್ರ್ಯಕ್ಕಾಗಿ ಅವರ ಹೋರಾಟವು ಅಚ್ಚಳಿಯದೆ ಭಾರತೀಯರ ಮನಸ್ಸಿನಲ್ಲಿ ಉಳಿದಿದೆ. ಹಾಗಾದರೆ ಪಾಕಿಸ್ತಾನದ ಜನತೆ ಮಹಾತ್ಮ ಗಾಂಧಿ(Mahatma Gandhi)ಯವರನ್ನು ಹೇಗೆ ಕಾಣುತ್ತಿದ್ದರು ಎಂಬುದನ್ನು ತಿಳಿಯೋಣ. ಪಾಕಿಸ್ತಾನದ ಸರ್ಕಾರಗಳು ಮಹಾತ್ಮ ಗಾಂಧಿಯನ್ನು ಯಾವಾಗಲೂ ಖಳನಾಯಕ ಎನ್ನುವ ರೀತಿಯಲ್ಲೇ ಪರಿಗಣಿಸುತ್ತಿದ್ದವು. ಆದರೆ ಪಾಕಿಸ್ತಾನದ ಹೆಚ್ಚಿನ ಜನರು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ರಾಣಾ ಅಲಿ ಹಸನ್ ಚೌಹಾಣ್ ಪಾಕಿಸ್ತಾನದ ಇತಿಹಾಸಕಾರ ಗಾಂಧೀಜಿಯನ್ನು ಅತ್ಯಂತ ಗೌರವದಿಂದ ಕಂಡಿದ್ದರು.

ಅವರು ಗಾಂಧಿಗೆ ಮಾತ್ರವಲ್ಲದೆ ಮಹಾರಾಣಾ ಪ್ರತಾಪ್, ವಾಸುದೇವ್ ಕೃಷ್ಣ ಮತ್ತು ಅಯೋಧ್ಯೆಯ ರಾಜ ರಾಮಚಂದ್ರ ಅವರಿಗೂ ಇದೇ ರೀತಿಯ ಗೌರವವನ್ನು ನೀಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ಗುರ್ಜರ್ ಜಾತಿ ಕಾ ಇತಿಹಾಸ್ ಎನ್ನುವ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕದಲ್ಲಿ ಅವರು ಈ ಶ್ರೇಷ್ಠ ವ್ಯಕ್ತಿಗಳನ್ನು ತಮ್ಮ ಪೂರ್ವಜರು ಎಂದು ವಿವರಿಸಿದ್ದಾರೆ.

ಪಾಕಿಸ್ತಾನದ ಪಠ್ಯ ಪುಸ್ತಕಗಳಲ್ಲಿ, ಗಾಂಧಿಯನ್ನು ಬುದ್ಧಿವಂತ ಎಂದು ವಿವರಿಸಲಾಗಿದೆ. ಆದರೆ ಅಲ್ಲಿನ ಜನಮಾನಸದಲ್ಲಿ ಗಾಂಧೀಜಿಯ ಕೀರ್ತಿ ಬಹಳ ಎತ್ತರದಲ್ಲಿದೆ. ಸಿಂಧ್ ಪ್ರಾಂತ್ಯದ ಜನರು ಗಾಂಧಿಯವರನ್ನು ತಮ್ಮವರೇ ಎಂದು ಪರಿಗಣಿಸುತ್ತಾರೆ. ಏಕೆಂದರೆ ಗಾಂಧಿ ಇದ್ದ ಪೋರಬಂದರ್ ಪ್ರದೇಶವು ಸೌರಾಷ್ಟ್ರ ಪ್ರದೇಶದಲ್ಲಿ ಬರುತ್ತದೆ. ಕಚ್ ಸೌರಾಷ್ಟ್ರದ ವಿಸ್ತರಣೆಯಾಗಿದೆ, ಇದು ಸಿಂಧ್‌ನವರೆಗೆ ವಿಸ್ತರಿಸುತ್ತದೆ.

ಕಚ್, ಸೌರಾಷ್ಟ್ರ ಸಂಸ್ಕೃತಿ, ಪದ್ಧತಿಗಳು, ಆಹಾರ ಮತ್ತು ಬಟ್ಟೆ ಒಂದೇ ರೀತಿಯದ್ದಾಗಿದೆ, ಆದ್ದರಿಂದಲೇ ಗಾಂಧಿ ಅವರಿಗೆ ಯಾವುದೇ ಭಾರತೀಯ ನಾಯಕರಿಗಿಂತ ಹತ್ತಿರವಾಗಿದ್ದಾರೆ.ಹೆಚ್ಚು ಕಡಿಮೆ ಇದೇ ಬಲೂಚಿಸ್ತಾನದ ಪರಿಸ್ಥಿತಿ ಕೂಡ. ಆದರೆ ಪಂಜಾಬ್ ಪ್ರಾಂತ್ಯದ ಜನರು ಖಂಡಿತವಾಗಿಯೂ ಗಾಂಧಿಯ ಬಗ್ಗೆ ದ್ವೇಷದ ಭಾವನೆ ಹೊಂದಿದ್ದಾರೆ. ಪಾಕಿಸ್ತಾನದ ಪಂಜಾಬ್‌ನಲ್ಲಿ ಇರುವಷ್ಟು ದ್ವೇಷ ಜಗತ್ತಿನ ಬೇರೆಲ್ಲೂ ಇರಲಾರದು.

ಮತ್ತಷ್ಟು ಓದಿ: Gandhi Jayanti 2023: ಮಹಾತ್ಮ ಗಾಂಧಿಯವರ ಆಲೋಚನೆಗಳು, ಬೋಧನೆಗಳು ನಮ್ಮ ಹಾದಿಯನ್ನು ಸದಾ ಬೆಳಗುತ್ತಿರುತ್ತದೆ: ನರೇಂದ್ರ ಮೋದಿ

ಬಹುಶಃ ಇದಕ್ಕೆ ಕಾರಣವೆಂದರೆ ವಿಭಜನೆಯ ಸಮಯದಲ್ಲಿ ಇಲ್ಲಿ ಹೆಚ್ಚಿನ ರಕ್ತಪಾತಗಳು ನಡೆದಿವೆ ಮತ್ತು ಪಾಕಿಸ್ತಾನವನ್ನು ಆಳಿದ ಹೆಚ್ಚಿನ ಆಡಳಿತಗಾರರು ಪಂಜಾಬಿನವರೇ ಆಗಿದ್ದರು. ಪಾಕಿಸ್ತಾನದ ದೊರೆಗಳು ಗಾಂಧಿಯನ್ನು ಎಷ್ಟು ಶಪಿಸಿದರೂ, ಖಳನಾಯಕ ಎಂದು ಕರೆದರೂ ಅವರ ವ್ಯಕ್ತಿತ್ವವನ್ನು ಕುಗ್ಗಿಸಲು ಸಾಧ್ಯವಿಲ್ಲ.

ಪಾಕಿಸ್ತಾನ ಧರ್ಮದ ತಳಹದಿಯ ಮೇಲೆ ನಿಂತಿದೆ ಪಾಕಿಸ್ತಾನದ ಸಮಸ್ಯೆ ಏನೆಂದರೆ ಅದು ಧರ್ಮದ ತಳಹದಿಯ ಮೇಲೆ ಸ್ಥಾಪನೆಯಾಗಿದೆ. ಜನರನ್ನು ಒಂದುಗೂಡಿಸುವುದು ಅವರ ಭಾಷೆ, ಸಂಸ್ಕೃತಿ, ಆಹಾರ ಮತ್ತು ಬಟ್ಟೆ. 1971ರಲ್ಲಿ ಪೂರ್ವ ಪಾಕಿಸ್ತಾನವು ಪಾಕಿಸ್ತಾನದಿಂದ ಬೇರ್ಪಡಲು ಇದೇ ಕಾರಣ. ಮತ್ತು ಪೂರ್ವ ಪಾಕಿಸ್ತಾನವು ಪ್ರಾರಂಭದಿಂದಲೂ ಭಾರತದ ಬಂಗಾಳಕ್ಕೆ ಹತ್ತಿರದಲ್ಲಿದೆ.

ಈ ನಿಕಟತೆ ಪಾಕಿಸ್ತಾನಿ ಪಂಜಾಬ್ ಮತ್ತು ಭಾರತದ ಪಂಜಾಬ್ ನಡುವೆ ಉಳಿಯಿತು. ಆದರೆ ಪಾಕಿಸ್ತಾನದ ಯೋಜಕರು ಬಹಳ ಸ್ಪಷ್ಟವಾಗಿ ಈ ಎರಡು ಪಂಜಾಬ್‌ಗಳ ಜನರ ನಡುವೆ ಕಂದಕವನ್ನು ಸೃಷ್ಟಿಸುತ್ತಿದ್ದರು. ಗಾಂಧಿಯನ್ನು ಖಳನಾಯಕನನ್ನಾಗಿ ಮಾಡುವುದು ಅಥವಾ ಭಾರತದ ಪಂಜಾಬ್‌ನಲ್ಲಿ ಹಿಂದೂಗಳು ಮತ್ತು ಸಿಖ್ಖರ ನಡುವೆ ಬಿರುಕು ಮೂಡಿಸುವುದು ಅವರ ಅಭ್ಯಾಸ.

ಜಿನ್ನಾ ದೃಷ್ಟಿಯಲ್ಲಿ ರಾಷ್ಟ್ರಪಿತ ಯಾರು? ಪಾಕಿಸ್ತಾನ ತನ್ನ ಶತ್ರು ಮತ್ತು ಖಳನಾಯಕ ಎಂದು ಪರಿಗಣಿಸಿದ್ದ ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರ ಸಾವಿನ ಕುರಿತು, ಪಾಕಿಸ್ತಾನದ ಪಿತಾಮಹ ಕ್ವೈದ್-ಎ-ಅಜಮ್ ಮೊಹಮ್ಮದ್ ಅಲಿ ಜಿನ್ನಾ ಅವರು, ಗಾಂಧಿಯವರ ಮೇಲಿನ ಅತ್ಯಂತ ಹೇಡಿತನದ ದಾಳಿಯ ಬಗ್ಗೆ ತಿಳಿದು ನಾನು ಆಘಾತಕ್ಕೊಳಗಾಗಿದ್ದೆ. ನಮ್ಮ ರಾಜಕೀಯ ದೃಷ್ಟಿಕೋನದಲ್ಲಿ ವಿರೋಧವೇನಿದ್ದರೂ, ಅವರು ಹಿಂದೂ ಸಮುದಾಯದಲ್ಲಿ ಜನಿಸಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು ಎಂಬುದು ನಿಜ. ನನಗೆ ತುಂಬಾ ದುಃಖವಾಗಿದೆ. ಮತ್ತು ನಾನು ಹಿಂದೂ ಸಮುದಾಯಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಂಧಿ ಹತ್ಯೆಯಿಂದ ಭಾರತಕ್ಕೆ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಜಿಲ್ಲಾ ಹಾಗೂ ಗಾಂಧಿಯವರ ರಾಜಕೀಯ ಜೀವನ ಜಿನ್ನಾ ಮತ್ತು ಗಾಂಧಿಯವರ ರಾಜಕೀಯ ಜೀವನವು ಅದೇ ಸಮಯದಲ್ಲಿ ಪ್ರಾರಂಭವಾಯಿತು. ಇಬ್ಬರೂ ಬ್ರಿಟಿಷರನ್ನು ಭಾರತದಿಂದ ಓಡಿಸಲು ಬಯಸಿದ್ದರು. ಇಬ್ಬರ ಗುರಿಯೂ ಸ್ವಾತಂತ್ರ್ಯವಾಗಿತ್ತು. ಆರಂಭದಲ್ಲಿ ಜಿನ್ನಾ ಹಿಂದೂ-ಮುಸ್ಲಿಂ ಏಕತೆಯ ಪ್ರಬಲ ಪ್ರತಿಪಾದಕರಾಗಿದ್ದರು. ಗಾಂಧಿ ಮತ್ತು ಜಿನ್ನಾ ನಡುವಿನ ಅಂತರವು ನಂತರ ಬೆಳೆಯಿತು. ಜಿನ್ನಾ ಗಾಂಧಿಗಿಂತ ಮುಂಚೆಯೇ ಕಾಂಗ್ರೆಸ್ ಸೇರಿದ್ದರು. ಅವರು 1896 ರಲ್ಲಿ ಕಾಂಗ್ರೆಸ್ ಸೇರಿದರು. ಮುಸ್ಲಿಂ ಲೀಗ್ ಅನ್ನು 1906 ರಲ್ಲಿ ರಚಿಸಲಾಯಿತು, ಆದರೆ ಆರಂಭದಲ್ಲಿ ಜಿನ್ನಾ ಅದನ್ನು ವಿರೋಧಿಸಿದರು. ಆದರೆ 1913 ರಲ್ಲಿ ಅವರು ಮುಸ್ಲಿಂ ಲೀಗ್‌ಗೆ ಸೇರಿದರು. ಆದರೆ ಅವರು ಮುಸ್ಲಿಮರನ್ನು ಅಥವಾ ಹಿಂದೂಗಳನ್ನು ಪ್ರತ್ಯೇಕ ರಾಷ್ಟ್ರಗಳೆಂದು ಪರಿಗಣಿಸಲಿಲ್ಲ. 1915 ರಲ್ಲಿ ಗಾಂಧೀಜಿ ಭಾರತಕ್ಕೆ ಬಂದಾಗಲೂ, ದಕ್ಷಿಣ ಆಫ್ರಿಕಾದ ಈ ಬಂಡಾಯ ಗುಜರಾತಿಯನ್ನು ಸ್ವಾಗತಿಸಲು ಬಾಂಬೆಯ ಗುರ್ಜರ್ ಸಮುದಾಯ ಆಯೋಜಿಸಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷರಾಗಿದ್ದರು.

ಜಿನ್ನಾ ಅವರು ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕ ಮತ್ತು ಕೆನಡಾದಂತಹ ಸಂಬಂಧಗಳನ್ನು ಬಯಸಿದ್ದರು. ಆದ್ದರಿಂದ ವ್ಯಾಪಾರ ಮತ್ತು ಸಾಮಾಜಿಕ ಸಂಬಂಧಗಳು 9000 ಕಿಮೀ ಗಡಿಯನ್ನು ಹಂಚಿಕೊಳ್ಳುವ ಎರಡು ದೇಶಗಳ ನಡುವೆ ಸೌಹಾರ್ದಯುತವಾಗಿರುತ್ತದೆ ಎಂದುಕೊಂಡಿದ್ದರು. ಗಾಂಧಿಯವರನ್ನು 30 ಜನವರಿ 1948 ರಂದು ಹತ್ಯೆ ಮಾಡಲಾಗಿತ್ತು ಮತ್ತು ಜಿನ್ನಾ ಎಂಟು ತಿಂಗಳ ನಂತರ 11 ಸೆಪ್ಟೆಂಬರ್ 1948 ರಂದು ನಿಧನರಾದರು.

ಎರಡು ದಿನಗಳ ನಂತರ, 13 ಸೆಪ್ಟೆಂಬರ್ 1948 ರಂದು, ದಿ ಹಿಂದೂ ಪತ್ರಿಕೆಯ ಸಂಪಾದಕೀಯವು ಮಿಸ್ಟರ್ ಜಿನ್ನಾ ಶೀರ್ಷಿಕೆಯೊಂದಿಗೆ ಪ್ರಕಟವಾಯಿತು. ಇದರಲ್ಲಿ ಗಾಂಧೀಜಿಯವರ ನಂತರ ಅವಿಭಜಿತ ಭಾರತದ ಅತ್ಯಂತ ಶಕ್ತಿಶಾಲಿ ನಾಯಕ ಎಂದು ಸ್ಮರಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್