ಉಜ್ಜಯಿನಿ: ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ
"ಇಂದು ನಾವು ಘಟನೆ ನಡೆದ ಸ್ಥಳಕ್ಕೆ ಹೋಗಿದ್ದು, ಅಲ್ಲಿ ಬಾಲಕಿ ಧರಿಸಿದ್ದ ಬಟ್ಟೆಗಳನ್ನು ಪತ್ತೆ ಹಚ್ಚಿದ್ದೇವೆ" ಎಂದು ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಪ್ರಮುಖ ಆರೋಪಿಯನ್ನು ಪತ್ತೆಹಚ್ಚಲು ತಾಂತ್ರಿಕ ಕಣ್ಗಾವಲು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ದೆಹಲಿ ಸೆಪ್ಟೆಂಬರ್ 28: 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Ujjain horror) ಎಸಗಿದ ಪ್ರಕರಣದ ಪ್ರಮುಖ ಆರೋಪಿಯನ್ನು ಮಧ್ಯಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ ಬಂಧಿಸಲಾಗಿದ್ದು ಈತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಆಟೋರಿಕ್ಷಾ ಚಾಲಕನಾದ ಆರೋಪಿ ತಪ್ಪಿಸಲು ಪ್ರಯತ್ನಿಸಿದಾಗ ಪೊಲೀಸ್ ತಂಡ ಆತನನ್ನು ಹಿಡಿದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದರು. ಆ ವೇಳೆ ಆರೋಪಿ ಅಲ್ಲಿಂದ ಓಡಿದ್ದು, ಪೊಲೀಸರು ಬೆನ್ನಟ್ಟಿ ಆತನನ್ನು ಹಿಡಿದು ತಂದಿದ್ದಾರೆ.
“ಇಂದು ನಾವು ಘಟನೆ ನಡೆದ ಸ್ಥಳಕ್ಕೆ ಹೋಗಿದ್ದು, ಅಲ್ಲಿ ಬಾಲಕಿ ಧರಿಸಿದ್ದ ಬಟ್ಟೆಗಳನ್ನು ಪತ್ತೆ ಹಚ್ಚಿದ್ದೇವೆ” ಎಂದು ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಪ್ರಮುಖ ಆರೋಪಿಯನ್ನು ಪತ್ತೆಹಚ್ಚಲು ತಾಂತ್ರಿಕ ಕಣ್ಗಾವಲು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಆರೋಪಿ ಉಜ್ಜಯಿನಿ ಮೂಲದವನು. ಹುಡುಗಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಆತ ನೋಡಿದ್ದಾನೆ. ಅವಳು ಇನ್ನೂ ಹೇಳಿಕೆಯನ್ನು ನೀಡಿಲ್ಲ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಶರ್ಮಾ ಹೇಳಿದರು.
15 ವರ್ಷದ ಬಾಲಕಿ ಅರೆಬೆತ್ತಲೆಯಾಗಿ, ಅತ್ಯಾಚಾರದ ನಂತರ ರಕ್ತಸ್ರಾವವಾಗುತ್ತಿರುವಾಗ ಸಹಾಯಕ್ಕಾಗಿ ಮನೆ ಮನೆಗೆ ಹೋಗುತ್ತಿರುವುದನ್ನು ತೋರಿಸುವ ಉಜ್ಜಯಿನಿಯ ಭಯಾನಕ ದೃಶ್ಯಗಳು ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ.
ಬಾಲಕಿ ಸಹಾಯವನ್ನು ಕೋರುತ್ತಿರುವ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಸ್ಕ್ಯಾನ್ ಮಾಡಿದ ನಂತರ ನಿನ್ನೆ ಆಟೋರಿಕ್ಷಾ ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಯಿತು. ತ್ರಿಚಕ್ರ ವಾಹನದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಆಟೊರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದರು.
ಸರ್ಜರಿ ನಂತರ ಬಾಲಕಿಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆಕೆ ಇನ್ನೂ ಸುಧಾರಿಸಿಕೊಂಡಿರದೇ ಇರುವ ಕಾರಣ ಹೇಳಿಕೆ ದಾಖಲಿಸಿಲ್ಲ. ಆಕೆ ಎಲ್ಲಿಂದ ಬಂದಿದ್ದಾಳೆ, ಆಕೆಯ ಪೋಷಕರು ಅಥವಾ ಇತರ ಸಂಬಂಧಿ ಯಾರು ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಮಧ್ಯಪ್ರದೇಶದ ಇನ್ನೊಂದು ಜಿಲ್ಲೆಯಲ್ಲಿ ಹುಡುಗಿಯೊಬ್ಬಳು ನಾಪತ್ತೆಯಾದ ನಂತರ ಈಗಾಗಲೇ ದೂರು ದಾಖಲಾಗಿದೆ. ಆಕೆ ಅದೇ ಹುಡುಗಿಯೇ ಎಂಬುದು ತನಿಖೆಯಲ್ಲಿದೆ. ಆಕೆಗೆ ಅಜ್ಜಿ ಮತ್ತು ಸಹೋದರ ಇದ್ದಾರೆ.
ಅತ್ಯಾಚಾರಕ್ಕೊಳಗಾಗಿ ಅರೆಬೆತ್ತಲೆಯಾಗಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಓಡಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ಕೊನೆಗೆ ಆಕೆ ಆಶ್ರಮದಲ್ಲಿ ಸಹಾಯವನ್ನು ಪಡೆದಳು, ಅಲ್ಲಿ ಒಬ್ಬ ಅರ್ಚಕ ಆಕೆಗೆ ತನ್ನ ಬಟ್ಟೆಗಳನ್ನು ಕೊಟ್ಟು ಪೊಲೀಸರಿಗೆ ಕರೆ ಮಾಡಿದ್ದರು. ಇಪ್ಪತ್ತು ನಿಮಿಷಗಳ ನಂತರ, ಪೊಲೀಸರು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರಸ್ತೆಯಲ್ಲಿ ಸಹಾಯಕ್ಕೆ ಅಂಗಲಾಚುವಂತೆ ಮಾಡಿದ್ದ ಆರೋಪಿಗಳ ಬಂಧನ
2019 ಮತ್ತು 2021 ರ ನಡುವೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರ ನಾಪತ್ತೆ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, 2021 ರಲ್ಲಿ ಮಧ್ಯಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಘಟನೆಗಳನ್ನು ವರದಿ ಮಾಡಿದೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಡೇಟಾ ಪ್ರಕಾರ ಇಲ್ಲಿ 6,462 ಪ್ರಕರಣಗಳು ವರದಿ ಆಗಿವೆ. ಅವುಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಅಪ್ರಾಪ್ತರ ವಿರುದ್ಧದ ಅಪರಾಧಗಳಾಗಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ