ಸ್ವಾವಲಂಬಿ ಭಾರತದತ್ತ ಹೆಜ್ಜೆ ಇಡುತ್ತಿರುವ ರಕ್ಷಣಾ ಸಚಿವಾಲಯವು 928 ರಕ್ಷಣಾ ಉಪಕರಣಗಳ ಆಮದನ್ನು ನಿಷೇಧಿಸಿದೆ. ಅವುಗಳನ್ನು ದೇಶೀಯ ಕಂಪನಿಗಳಿಂದ ಮಾತ್ರ ಖರೀದಿಸಬಹುದು ಎಂದು ಹೇಳಲಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ. ಈ ಉತ್ಪನ್ನಗಳ ಆಮದಿಗಾಗಿ 715 ಕೋಟಿ ರೂ ಮೀಸಲಿಡಲಾಗಿದೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳ ಆಮದುಗಳನ್ನು ಕಡಿಮೆ ಮಾಡಲು ರಕ್ಷಣಾ ಸಚಿವಾಲಯವು ನಾಲ್ಕನೇ PIL ಅನ್ನು ಅನುಮೋದಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಡಿಸೆಂಬರ್ 2023 ರಿಂದ ಡಿಸೆಂಬರ್ 2028 ರವರೆಗಿನ ವಸ್ತುಗಳ ಆಮದು ನಿಷೇಧಕ್ಕೆ ರಕ್ಷಣಾ ಸಚಿವಾಲಯವು ಸ್ಪಷ್ಟ ಗಡುವನ್ನು ನಿಗದಿಪಡಿಸಿದೆ. ಈ ಹಿಂದೆ, ಸಚಿವಾಲಯವು ಡಿಸೆಂಬರ್ 2021, ಮಾರ್ಚ್ 2022 ಮತ್ತು ಆಗಸ್ಟ್ 2022 ರಲ್ಲಿ ಮೂರು ರೀತಿಯ PIL ಗಳನ್ನು ನೀಡಿತ್ತು.
ಮತ್ತಷ್ಟು ಓದಿ:ಐಎಎಫ್ನ 30 ವಾಯುನೆಲೆಗಳಿಗೆ ಆಧುನಿಕ ಸ್ಪರ್ಶ; ಆಧುನೀಕರಣಗೊಳ್ಳಲಿವೆ ಇನ್ನೂ 37 ನೆಲೆಗಳು
ಈ ಪಟ್ಟಿಗಳಲ್ಲಿ ಈಗಾಗಲೇ ಸ್ಥಳೀಯವಾಗಿರುವ 2500 ಕ್ಕೂ ಹೆಚ್ಚು ವಸ್ತುಗಳು ಸೇರಿವೆ ಮತ್ತು 1238 (351+107+780) ವಸ್ತುಗಳನ್ನು ನಿಗದಿತ ಕಾಲಮಿತಿಯೊಳಗೆ ಸ್ವದೇಶಿಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅದರಲ್ಲಿ 1238 ವಸ್ತುಗಳ ಪೈಕಿ 310 ಸ್ವದೇಶಿಕರಣ ಮಾಡಲಾಗಿದೆ ಎಂದು ಹೇಳಲಾಗಿದೆ. ಜತೆಗೆ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಳಗೊಳ್ಳುವ ಮೂಲಕ ದೇಶೀಯ ರಕ್ಷಣಾ ಉದ್ಯಮದ ವಿನ್ಯಾಸ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ನರೇಂದ್ರ ಮೋದಿ ಸರ್ಕಾರವು ಸ್ವದೇಶೀಕರಣ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ಅಧಿಸೂಚಿತ ವಸ್ತುಗಳ ಖರೀದಿ ಪ್ರಕ್ರಿಯೆಯನ್ನು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು ಶೀಘ್ರದಲ್ಲೇ ಪ್ರಾರಂಭಿಸಲಿವೆ ಎಂದು ಸಚಿವಾಲಯ ತಿಳಿಸಿದೆ. ದೇಶೀಯ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾರತವು ಜಾಗತಿಕವಾಗಿ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:08 am, Mon, 15 May 23