ರಕ್ಷಣಾ ಉಪಕರಣಗಳ ಪ್ರದರ್ಶನ; ಎಕೆ-47 ಗನ್ ಹಿಡಿದು ಖುಷಿಪಟ್ಟ ಮಕ್ಕಳು
ಡಿಸೆಂಬರ್ 19ರ ವರೆಗೂ ಈ ಪ್ರದರ್ಶನ ನಡೆಯಲಿದೆ. ಶಾಲಾ ಮಕ್ಕಳಿಗೂ ಮುಕ್ತ ಪ್ರವೇಶವಿದೆ. ನೀವು ಕೂಡ ಎಕೆ-47 ರೈಫಲ್ ಹಿಡಿಬೇಕು. ಗ್ರೆನಡ್ ಲಾಂಚರ್ ಹಿಡಿದು ಫೋಟೋ ತೆಗೆಸಿಕೊಳ್ಳಬೇಕು ಅಂದರೆ ಇಂದೇ ಭೇಟಿ ಕೊಡಬಹುದು.
ಬೆಂಗಳೂರು: ಮಕ್ಕಳು ಮತ್ತು ಜನರಲ್ಲಿ ಸೇನೆ ಬಗ್ಗೆ ಅರಿವು ಮೂಡಿಸಲು ಮತ್ತು ಪ್ರೇರೇಪಿಸುವ ದೃಷ್ಟಿಯಿಂದ ಅಜಾದಿ-ಕಾ-ಅಮೃತ್ ಮಹೋತ್ಸವ ಅಂಗವಾಗಿ ರಕ್ಷಣಾ ಉಪಕರಣಗಳ ಪ್ರದರ್ಶನ ನಡೆಯಿತು. ಜೆಸಿ ನಗರದ ಆರ್ಮಿ ಸಿಕ್ಯೂಎಎಲ್ ಸೇನಾ ಕ್ಯಾಂಪಸ್ನಲ್ಲಿ ಈ ಶಸ್ತ್ರಾಸ್ತ್ರಗಳೆಲ್ಲ ಕಂಡು ಬಂದಿದೆ. ದೇಶದ ಒಟ್ಟು 75 ಕಡೆಗಳಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ. ಎಕ್ಸಿಬ್ಯುಷನ್ನಲ್ಲಿ ಅತ್ಯಾಧುನಿಕ ಗನ್ಗಳು, ಎಕೆ ಸರಣಿಯ ರೈಫಲ್ಗಳು, ಗ್ರೆನೆಡ್ ಲಾಂಚರ್, ಡ್ರೋನ್ ರೆಡಾರ್, ಚಿಕ್ಕ ಮಿಸೈಲ್ಗಳು, ಮಿಲಿಟರಿ ಕಮ್ಯುನಿಕೇಷನ್ ಸಿಸ್ಟಮ್, ಮಿಲಿಟರಿ ಜಿಪಿಎಸ್ ಸೇರಿ ಅನೇಕ ಉಪಕರಣಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪ್ರದರ್ಶನ ವೀಕ್ಷಿಸಲು ಬಂದವರಿಗೆ, ರೈಫಲ್ಗಳನ್ನು ಹಿಡಿದು ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಫಸ್ಟ್ ಟೈಮ್ ಗನ್ ಹಿಡಿದವರು, ವೆರೈಟಿ ವೆರೈಟಿ ಫೋಟೋ ಕ್ಲಿಕಿಸಿಕೊಂಡರು.
ಡಿಸೆಂಬರ್ 19ರ ವರೆಗೂ ಈ ಪ್ರದರ್ಶನ ನಡೆಯಲಿದೆ. ಶಾಲಾ ಮಕ್ಕಳಿಗೂ ಮುಕ್ತ ಪ್ರವೇಶವಿದೆ. ನೀವು ಕೂಡ ಎಕೆ-47 ರೈಫಲ್ ಹಿಡಿಬೇಕು. ಗ್ರೆನಡ್ ಲಾಂಚರ್ ಹಿಡಿದು ಫೋಟೋ ತೆಗೆಸಿಕೊಳ್ಳಬೇಕು ಅಂದರೆ ಇಂದೇ ಭೇಟಿ ಕೊಡಬಹುದು.
ಇದನ್ನೂ ಓದಿ:
Kannada Play : ‘ವ್ಯೋಮ’ದಲ್ಲಿ ರಂಗರಥದಿಂದ ‘ರಜಕಾಯಣ’ ನಾಟಕ ಪ್ರದರ್ಶನ
Republic Day Flower Show 2022: 2022ರ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್