Kannada Play : ‘ವ್ಯೋಮ’ದಲ್ಲಿ ರಂಗರಥದಿಂದ ‘ರಜಕಾಯಣ’ ನಾಟಕ ಪ್ರದರ್ಶನ

Ramayan : ‘ಈ ಮಹಾಕಾವ್ಯದಲ್ಲಿ ಸಂಯೋಗ ಮೂಡಲೇಬೇಕೆಂದು, ಲಂಕಾ ಪ್ರಸಂಗದ ನಂತರ ರಾಮ-ಸೀತೆಯರನ್ನು ಒಂದಾಗಿಸಿ, ರಾಮನ ಪಟ್ಟಾಭಿಷೇಕವನ್ನು ಮಾಡಿಸಿ, ತನ್ನ ಮಹಾಕಾವ್ಯವನ್ನು ಮುಗಿಸುತ್ತಾನೆ ವಾಲ್ಮೀಕಿ. ಇದರ ನಂತರ ಬೆಳೆದ ಕಥೆ, ಜರುಗಿದ ಘಟನೆಗಳು ಅವನ ಕಣ್ಣ ಮುಂದೆಯೇ ನಡೆದವು. ಆದರೆ ಅವುಗಳನ್ನು ಆತ ದಾಖಲಿಸಲಿಲ್ಲ. ಆ ಶಕ್ತಿ, ಆ ಧೈರ್ಯ ವಾಲ್ಮೀಕಿಗೆ ಇರಲಿಲ್ಲವೋ ಏನೋ?’ ಆಸಿಫ್ ಕ್ಷತ್ರಿಯ

Kannada Play : ‘ವ್ಯೋಮ’ದಲ್ಲಿ ರಂಗರಥದಿಂದ ‘ರಜಕಾಯಣ’ ನಾಟಕ ಪ್ರದರ್ಶನ
ರಂಗರಥದ ‘ರಜಕಾಯಣ’ ತಂಡ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 01, 2021 | 5:14 PM

Ramayan – Rajakayana :  ವಾಲ್ಮೀಕಿ ಬರೆದ ರಾಮಾಯಣವು, ಮಾನವ ಸಂವೇದನೆಗಳ, ಸಂಬಂಧಗಳ, ಆದರ್ಶ ಮತ್ತು ಜಿಜ್ಞಾಸೆಗಳ ದೀರ್ಘಪಯಣ. ಇದಕ್ಕೆ ನಾಂದಿ ಹಾಡಿದ್ದೇ ಒಂದು ರೋಚಕ ಘಟನೆ. ರಾತ್ರಿಯಿಡೀ, ನಾರದ ಮಹರ್ಷಿಗಳಿಂದ ಒಬ್ಬ ಉತ್ತಮ ಪುರುಷ – ರಾಮನ ಕಥೆ ಕೇಳಿದ ಮೇಲೆ, ವಾಲ್ಮೀಕಿ, ತಮಸಾ ನದಿಗೆ ಸ್ನಾನಕ್ಕೆಂದು ಹೋಗುತ್ತಾನೆ. ಅಲ್ಲಿ, ಪ್ರಣಯ ಸಲ್ಲಾಪದಲ್ಲಿ ಮಗ್ನ ಎರಡು ಕ್ರೌಂಚ ಪಕ್ಷಿಗಳನ್ನು ನೋಡುತ್ತಾನೆ. ಇದ್ದಕ್ಕಿದ್ದ ಹಾಗೆ ಬೇಡನೊಬ್ಬನ ಬಾಣ ಬಂದು, ಗಂಡುಪಕ್ಷಿಯನ್ನು ಸಾಯಿಸುತ್ತದೆ. ಹೆಣ್ಣುಪಕ್ಷಿಯ ಆಕ್ರಂದನ ಮುಗಿಲು ಮುಟ್ಟುತ್ತದೆ. ಇದರಿಂದ ವಿಚಲಿತಗೊಂಡ ವಾಲ್ಮೀಕಿ ಆ ಬೇಡನಿಗೆ, “ನೀನು ಆ ಹೆಣ್ಣು ಪಕ್ಷಿಯು ಶಾಶ್ವತ ದುಃಖವನ್ನು ಹೊಂದುವಂತೆ ಮಾಡಿದೆ. ತತ್ಫಲ, ನೀನೂ ಅದೇ ದುಃಖವನ್ನು ಅನುಭವಿಸುವಂತಾಗು” ಎಂದು ಶಾಪ ಕೊಡುತ್ತಾನೆ. ಆ ಹೆಣ್ಣುಪಕ್ಷಿಯ ಶೋಕವೇ ‘ಮಾ-ನಿಷಾದ’ ಶ್ಲೋಕವಾಗಿ, ರಾಮಾಯಣಕ್ಕೆ ನಾಂದಿ ಹಾಡುತ್ತದೆ.  ಆಸಿಫ್ ಕ್ಷತ್ರಿಯ, ರಂಗರಥ – ಭಾರತೀಯ ಪ್ರದರ್ಶನ ಕಲಾಸಂಸ್ಥೆ, ಬೆಂಗಳೂರು

*

“ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸ್ಸಮಾಃ | ಯತ್ ಕ್ರೌಂಚಮಿಥುನಾದೇಕಮವಧೀ ಕಾಮಮೋಹಿತಮ್ ||”

ರಾಮಾಯಣದ ಈ ಪ್ರಸಿದ್ಧ ಶ್ಲೋಕ ಯಾರಿಗೆ ಗೊತ್ತಿಲ್ಲ? ಇದರ ಅರ್ಥ ಇಷ್ಟೇ. “ಹೇ ಬೇಡನೇ, ಕ್ರೌಂಚ ಪಕ್ಷಿಗಳು ಕ್ರೀಡಿಸುತ್ತಿರುವ ಈ ಸಂದರ್ಭದಲ್ಲಿ, ಅವುಗಳಲ್ಲಿ ಗಂಡುಪಕ್ಷಿಯನ್ನು ಹೊಡೆದುರುಳಿಸಿ, ಹೆಣ್ಣುಪಕ್ಷಿಯು ಶಾಶ್ವತವಾದ ದುಃಖವನ್ನು ಹೊಂದುವಂತೆ ಮಾಡಿದೆಯಲ್ಲ! ನೀನೂ ಅದೇ ದುಃಖವನ್ನು ಅನುಭವಿಸುವಂತಾಗು” ಎಂದು.

ಪ್ರಸಂಗಗಳು ನೂರಾರು. ಕಥೆಗಳು ನೂರಾರು. ಹಾಗೆಯೇ ರಾಮಾಯಣಗಳೂ ನೂರಾರು. ಸುಮಾರು ಮುನ್ನೂರಕ್ಕೂ ಹೆಚ್ಚು. ವಾಲ್ಮೀಕಿ ಬರೆದ ರಾಮಾಯಣದ ನಂತರ ಬರೆಯಲ್ಪಟ್ಟ ಈ ಅನೇಕ ರಾಮಾಯಣಗಳೂ, ಮೂಲ ರಾಮಾಯಣಗಳೇ. ಕೆಲವು ಸಂಸ್ಕೃತದಲ್ಲಿ ಬರೆಯಲ್ಪಟ್ಟಿದ್ದರೆ, ಉಳಿದವು ವಿಭಿನ್ನ ಭಾರತೀಯ ಭಾಷೆಗಳಲ್ಲಿ ಬರೆಯಲ್ಪಟ್ಟಿವೆ. ತುಳಸೀದಾಸರ ‘ರಾಮಚರಿತ ಮಾನಸ’, ಭಾಸಕವಿಯ ಅಭಿಷೇಕ ನಾಟಕ ಮತ್ತು ಪ್ರತಿಮಾ ನಾಟಕ, ಕಾಳಿದಾಸನ ರಘುವಂಶ, ಭವಭೂತಿಯ ಉತ್ತರರಾಮಚರಿತ, ಕುಮಾರವ್ಯಾಸನ ಜಾನಕೀಹರಣ, ಹೀಗೆ ಲೆಕ್ಕವಿಲ್ಲದಷ್ಟು ನಮ್ಮ ಅಕ್ಕಪಕ್ಕದ ಭಾಷೆಗಳಾದ ತಮಿಳು, ತೆಲುಗು, ಮಲೆಯಾಳಂ ಮತ್ತು ನಮ್ಮ ಕನ್ನಡದಲ್ಲೂ ಸೇರಿಸಿ ಸಾವಿರಾರು ರಾಮಾಯಣಗಳಿವೆ.

ವಾಲ್ಮೀಕಿ ರಾಮಾಯಣದ ಪ್ರಕಾರ, ರಾಮ-ಸೀತೆ ಭೇಟಿಯಾಗಿದ್ದು ರಾಮ, ಧನುಸ್ಸನ್ನು ಮುರಿದ ನಂತರ. ಆದರೆ, ಅತಿ ಪುರಾತನವಾದ ಕಂಬನ್ ಬರೆದ ‘ಕಂಬನ್ ರಾಮಾಯಣದಲ್ಲಿ ರಾಮ ಸೀತೆ, ಮದುವೆಯ ಮುಂಚೆಯೇ ಉದ್ಯಾನಗಳಲ್ಲಿ ಭೇಟಿ ಆಗುತ್ತಿದ್ದರು ಎಂಬ ಉಲ್ಲೇಖವಿದೆ. ಆ ಕಂಬನ್ ರಾಮಾಯಣದಲ್ಲಿ ರಾಮ ಮತ್ತು ಸೀತೆಯನ್ನು, ವಿಷ್ಣು ಮತ್ತು ಲಕ್ಷ್ಮಿಯ ರೂಪದಲ್ಲಿ ನೋಡುತ್ತಾರೆ. ಆದರೆ ವಾಲ್ಮೀಕಿಗೆ ಮಹರ್ಷಿಗೆ ನಾರದ ಹೇಳಿದ್ದು, ರಾಮನು, ಪುರುಷೋತ್ತಮನ 16 ಗುಣಗಳಿರುವ ಒಬ್ಬ ಮನುಷ್ಯನೆಂದು. ವಾಲ್ಮೀಕಿಯೂ ಹಾಗೆಯೇ ಬರೆಯುತ್ತಾನೆ.

ಈ ರಾಮಾಯಣವು, ಮಾನವ ಸಂವೇದನೆಗಳ, ಸಂಬಂಧಗಳ, ಆದರ್ಶ ಮತ್ತು ಜಿಜ್ಞಾಸೆಗಳ ದೀರ್ಘ ಪಯಣ. ಇದಕ್ಕೆ ನಾಂದಿ ಹಾಡಿದ್ದೇ ಒಂದು ರೋಚಕ ಘಟನೆ. ರಾತ್ರಿಯಿಡೀ, ನಾರದ ಮಹರ್ಷಿಗಳಿಂದ ಒಬ್ಬ ಉತ್ತಮ ಪುರುಷ – ರಾಮನ ಕಥೆ ಕೇಳಿದ ಮೇಲೆ, ವಾಲ್ಮೀಕಿ, ತಮಸಾ ನದಿಗೆ ಸ್ನಾನಕ್ಕೆಂದು ಹೋಗುತ್ತಾನೆ. ಅಲ್ಲಿ, ಪ್ರಣಯ ಸಲ್ಲಾಪದಲ್ಲಿ ಮಗ್ನ ಎರಡು ಕ್ರೌಂಚ ಪಕ್ಷಿಗಳನ್ನು ನೋಡುತ್ತಾನೆ. ಇದ್ದಕ್ಕಿದ್ದ ಹಾಗೆ ಬೇಡನೊಬ್ಬನ ಬಾಣ ಬಂದು, ಗಂಡು ಪಕ್ಷಿಯನ್ನು ಸಾಯಿಸುತ್ತದೆ. ಹೆಣ್ಣು ಪಕ್ಷಿಯ ಆಕ್ರಂದನ ಮುಗಿಲು ಮುಟ್ಟುತ್ತದೆ. ಇದರಿಂದ ವಿಚಲಿತಗೊಂಡ ವಾಲ್ಮೀಕಿ ಆ ಬೇಡನಿಗೆ, “ನೀನು ಆ ಹೆಣ್ಣು ಪಕ್ಷಿಯು ಶಾಶ್ವತ ದುಃಖವನ್ನು ಹೊಂದುವಂತೆ ಮಾಡಿದೆ. ತತ್ಫಲ, ನೀನೂ ಅದೇ ದುಃಖವನ್ನು ಅನುಭವಿಸುವಂತಾಗು” ಎಂದು ಶಾಪ ಕೊಡುತ್ತಾನೆ. ಆ ಹೆಣ್ಣು ಪಕ್ಷಿಯ ಶೋಕವೇ ‘ಮಾ-ನಿಷಾದ’ ಶ್ಲೋಕವಾಗಿ, ರಾಮಾಯಣಕ್ಕೆ ನಾಂದಿ ಹಾಡುತ್ತದೆ.

ನಾರದರು ಹೇಳಿದ ಒಂದು ಸರಳವಾದ ‘ರಾಮ’ ಎಂಬ ಪುರುಷೋತ್ತಮನ ಕಥೆಯನ್ನು, ವಿಸ್ತಾರವಾಗಿ, ಮುಂಬರುವ ಜನಾಂಗಗಳಿಗೆ ಆದರ್ಶಪ್ರಾಯವಾಗಿರಲಿ ಎಂದು ವಾಲ್ಮೀಕಿ, ಮೊಟ್ಟಮೊದಲ ರಾಮಾಯಣವನ್ನು ಬರೆಯುತ್ತಾನೆ. ಆದರೆ, ರಾಮಾಯಣವು ಬರೆಸಿಕೊಂಡು ಹೋದ ಹಾಗೆ, ಅದರಲ್ಲಿ ಬರುವ ಘಟನೆಗಳು, ಕಥೆಗಳು, ವಾಲ್ಮೀಕಿಯನ್ನೇ ಕಬಳಿಸುತ್ತವೆ. ಕಥೆಯು ಅದರ ಚೌಕಟ್ಟನ್ನು ಮೀರಿ ಬೆಳೆಯುತ್ತದೆ. ಅದರ ಕೆಲವೊಂದು ಪಾತ್ರಗಳು ವಾಲ್ಮೀಕಿಯ ಕೈತಪ್ಪಿ ಹೋಗಿದ್ದುಂಟು, ಮೀರಿ ಬೆಳೆದದ್ದೂ ಉಂಟು, ಪಾತಾಳಕ್ಕೆ ಕುಸಿದದ್ದೂ ಉಂಟು. ಅಂತಹ ಪಾತ್ರಗಳಲ್ಲಿ ಉತ್ತರ ರಾಮಾಯಣದಲ್ಲಿ ಬರುವ ಅಗಸನ ಪಾತ್ರವೂ ಒಂದು.

ಈ ರಾಮಾಯಣದಲ್ಲಿ ಬರುವ ರಾಮ-ಸೀತೆಯರ ಅಗಲಿಕೆ, ರಾವಣ-ಮಂಡೋದರಿಯರ ಅಗಲಿಕೆ, ಸುಗ್ರೀವ-ರಮೆಯರ ಅಗಲಿಕೆ, ಲಕ್ಷ್ಮಣ-ಊರ್ಮಿಳೆಯರ ಅಗಲಿಕೆ, ಇವೆಲ್ಲವುಗಳಿಗೆ ಬಹುಶಃ ಆ ಹೆಣ್ಣು ಕ್ರೌಂಚ ಪಕ್ಷಿಯ ವಿರಹದ ನೋವೇ ಕಾರಣವಾಗಿರಬಹುದು. ಅಥವಾ, ಆ ಬೇಡನಿಗೆ ವಾಲ್ಮೀಕಿ ಕೊಟ್ಟ ಶಾಪವೇ, ತಿರುಗುಬಾಣವಾಗಿ ಈತನ ರಾಮಾಯಣದ ಪಾತ್ರಗಳಾದ ಸೀತೆ, ಊರ್ಮಿಳೆ, ಮಂಡೋದರಿ, ರಮೆ, ದಶರಥ, ಕೈಕೇಯಿ, ಶ್ರವಣಕುಮಾರನ ವೃದ್ಧ ತಂದೆತಾಯಿಯರಿಗೆ ತಟ್ಟಿರಬೇಕು. ಬೇಡನು ತನ್ನ ವೃತ್ತಿ ಧರ್ಮವನ್ನು ಪಾಲಿಸಿದ್ದಕ್ಕೆ ವಾಲ್ಮೀಕಿ ಶಪಿಸಿದ್ದು ಸರಿಯೇ? ಬಹುಶಃ ವಾಲ್ಮೀಕಿ ರಾಮಾಯಣದ ಕೆಲವು ಪಾತ್ರಗಳಿಗೆ ಆ ಬೇಡನ ಶಾಪವೂ ಇರಬಹುದು.

Rajakayana play based on girish karnada ma nishada by Rangaratha

ರಜಕಾಯಣ ನಾಟಕವು ಗಿರೀಶ ಕಾರ್ನಾಡರ ಮಾನಿಷಾದ ನಾಟಕವನ್ನು ಆಧರಿಸಿದೆ. 

ಶ್ರವಣನ ಮರಣದಿಂದ ಅನಾಥರಾದ ವೃದ್ಧಪಾಲಕರು, ರಾಮನ ಅಗಲುವಿಕೆಯಿಂದ ತೀರಿಕೊಂಡ ದಶರಥ, ಲಕ್ಷ್ಮಣನಿಂದ ದೂರವಾಗಿ ಅತಂತ್ರ ಸ್ಥಿತಿಗೊಳಗಾದ ಊರ್ಮಿಳೆ, ಭರತನನ್ನು ಕಳೆದುಕೊಂಡ ಕೈಕೇಯಿ, ರಾಮನಿಂದ ವನವಾಸಕ್ಕೆ ತಳ್ಳಲ್ಪಟ್ಟ ಸೀತೆ. ಇವರೆಲ್ಲ, ವಾಲ್ಮೀಕಿಯನ್ನು ಕ್ಷಮಿಸುವರೇ? ಇದರಲ್ಲಿ ತಪ್ಪು ಯಾರದ್ದು? ಪಾತ್ರಗಳದ್ದೋ ? ವಾಲ್ಮೀಕಿಯದ್ದೋ ? ಅಥವಾ, ಕಾಲದ್ದೋ ?

ಆದರ್ಶ ಮಹಾಕಾವ್ಯವಾಗಬೇಕಿದ್ದ ಈ ರಾಮಾಯಣ ವಿಯೋಗ ಕಾವ್ಯವಾಯಿತೆಂದು ವಾಲ್ಮೀಕಿ ಸಂಕಟಪಡುತ್ತಾನೆ. ಈ ಮಹಾಕಾವ್ಯದಲ್ಲಿ ಸಂಯೋಗ ಮೂಡಲೇಬೇಕೆಂದು, ಲಂಕಾ ಪ್ರಸಂಗದ ನಂತರ ರಾಮ-ಸೀತೆಯರನ್ನು ಒಂದಾಗಿಸಿ, ರಾಮನ ಪಟ್ಟಾಭಿಷೇಕವನ್ನು ಮಾಡಿಸಿ, ಅಲ್ಲಿಗೆ ತನ್ನ ಮಹಾಕಾವ್ಯವನ್ನು ಮುಗಿಸುತ್ತಾನೆ. ಇದರ ನಂತರ ಬೆಳೆದ ಕಥೆ, ಜರುಗಿದ ಘಟನೆಗಳು ಎಲ್ಲಾ ವಾಲ್ಮೀಕಿ ಮಹರ್ಷಿಯ ಕಣ್ಣಮುಂದೆಯೇ ನಡೆದವು. ಆದರೆ ಅವುಗಳನ್ನು ಆತ ದಾಖಲಿಸಲಿಲ್ಲ. ಆ ಶಕ್ತಿ, ಆ ಧೈರ್ಯ ವಾಲ್ಮೀಕಿಗೆ ಇರಲಿಲ್ಲವೋ ಏನೋ?

ನಾಟಕ : ರಜಕಾಯಣ ತಂಡ : ರಂಗರಥ ನಿರ್ದೇಶನ : ಆಸಿಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್ ದಿನಾಂಕ : ಡಿಸೆಂಬರ್ 3. ಸಮಯ : ಸಂಜೆ 7. ಅವಧಿ : 60 ನಿಮಿಷ ಸ್ಥಳ : ವ್ಯೋಮ ಆರ್ಟ್​ ಸ್ಪೇಸ್, ಜೆ.ಪಿ. ನಗರ, ಬೆಂಗಳೂರು ಟಿಕೆಟ್ ರಂಗಮಂದಿರದಲ್ಲಿ ಮತ್ತು 9448386776 ಈ ನಂಬರ್​ನಲ್ಲಿಯೂ ಲಭ್ಯ.

ಗಮನಿಸಿ : ರಂಗತಂಡಗಳು ಒಂದು ವಾರ ಮೊದಲು ತಮ್ಮ ನಾಟಕ ಪ್ರದರ್ಶನದ ವಿವರವನ್ನು ಕಳಿಸಿದಲ್ಲಿ ನಾವೇ ಖುದ್ದಾಗಿ ಸಂಪರ್ಕಿಸುತ್ತೇವೆ tv9kannadadigital@gmail.com

ಇದನ್ನೂ ಓದಿ : Yakshagana Odissi : ‘ಶಕ್ತಿ 1.0’ ನಾಳೆ ವ್ಯೋಮದಲ್ಲಿ ರಂಗರಥದಿಂದ ಯಕ್ಷಗಾನ ಒಡಿಸ್ಸಿ ಜುಗಲ್​ಬಂದಿ

Published On - 4:25 pm, Wed, 1 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ