ಇಂದಿನ ಡಿಜಿಟಲ್ ಯುಗದಲ್ಲಿ ಸಂಬಂಧಗಳ ಗಟ್ಟಿತನ ಉಳಿಸಿಕೊಳ್ಳಬೇಕೆಂದರೆ, ಕೆಲ ವಿಷಯಗಳನ್ನು ಮರೆಯಬಾರದು: ಡಾ ಸೌಜನ್ಯ ವಶಿಷ್ಠ
ವಯಸ್ಸಾಗುತ್ತಿದ್ದಂತೆ ಸೌಂದರ್ಯ ಮಾಸಬಹುದು ಅದರೆ ನಿಮ್ಮಲ್ಲಿರುವ ಇಂಟೆಲಿಜೆನ್ಸ್ ಯಾವತ್ತೂ ಕಡಿಮೆಯಾಗಲಾರದು, ಬುದ್ಧಿವಂತರು ಎಲ್ಲರಿಗೂ ಇಷ್ಟವಾಗುತ್ತಾರೆ ಎಂದು ಸೌಜನ್ಯ ಹೇಳುತ್ತಾರೆ.
ನಾವು ಬದುಕುತ್ತಿರುವ ಇವತ್ತಿನ ಡಿಜಿಟಲ್ ಯುಗದಲ್ಲಿ ಸಂಬಂಧಗಳು ನೀರಿನ ಮೇಲಿನ ಗುಳ್ಳೆಯಂತಾಗಿ ಬಿಟ್ಟಿವೆ. ಬೆಳಗ್ಗೆ ಹುಟ್ಟಿಕೊಂಡ ಸಂಬಂಧ ಸಾಯಂಕಾಲವಾಗುವಷ್ಟರಲ್ಲಿ ಹಳಸಲಾರಂಭಿಸುತ್ತದೆ. ಸಂಬಂಧಗಳ ಆಯಸ್ಸು ಕಡಿಮೆಯಾಗುತ್ತಿರುವುದಕ್ಕೆ ಕಾರಣವೇನು, ಆ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳವುದು ಹೇಗೆ ಅನ್ನವುದನ್ನು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ವಿವರಿಸಿದ್ದಾರೆ. ಸಂಗಾತಿಗೆ ನಮ್ಮ ಮೇಲೆ ಆಕರ್ಷಣೆ ಕಡಿಮೆಯಾಗಲಾರಂಭಿಸಿದರೆ, ಸಂಬಂಧ ಹದಗೆಡಲು ಶುರುವಾಗುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ನಾವು ಪ್ರೀತಿಸಿಕೊಳ್ಳವುದು (self love) ಬಹಳ ಮುಖ್ಯ. ಅದರರ್ಥ ನಮ್ಮ ಬಗ್ಗೆ ಹೆಚ್ಚು ಕಾಳಜಿವಹಿಸಿಕೊಳ್ಳಬೇಕು; ನಮ್ಮ ಲುಕ್ಸ್, ಆರೋಗ್ಯ ಮೊದಲಾದವುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಆಕರ್ಷಣೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.
ಮದುವೆಯಾಗಿರುವ ಮಹಿಳೆಯು ಗೃಹಿಣಿಯಾಗಿದ್ದರೆ, ತನ್ನಿಡೀ ಬದುಕನ್ನು ಗಂಡ ಮಕ್ಕಳನ್ನು ನೋಡಿಕೊಳ್ಳುವುದರಲ್ಲೇ ಸವೆಸಿಬಿಡುತ್ತಾಳೆ. ಮನೆಯಲ್ಲಿ ಆಕೆ ಯಾವುದೇ ಪ್ರೊಫೆಶನಲ್ಕ್ಕಿಂತ ಜಾಸ್ತಿ ಕೆಲಸ ಮಾಡುತ್ತಾಳೆ. ಅದು ತಪ್ಪಲ್ಲ, ಆದರೆ ತನ್ನ ವೈಯಕ್ತಿಕ ಬದುಕಿನ ಕಡೆ ಗಮನ ಕೊಡದಿರುವುದು ತಪ್ಪು. ಸಂಗಾತಿಯು ತನ್ನೆಡೆ ಆಕರ್ಷನೆ ಉಳಿಸಿಕೊಳ್ಳಬೇಕಾದರೆ, ಆಕೆ ತನ್ನ ಸೌಂದರ್ಯ ಮತ್ತು ಅರೋಗ್ಯದ ಕಡೆ ಗಮನ ಕೊಡಲೇಬೇಕು ಎಂದು ಸೌಜನ್ಯ ಹೇಳುತ್ತಾರೆ.
ಲುಕ್ಸ್ ಜೊತೆಗೆ ಗೃಹಿಣಿಯರಾಗಲೀ ಅಥವಾ ಬೇರೆ ಯಾರೇ ಆಗಲಿ, ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳಬೇಕು. ಯಾಕೆಂದರೆ ವಯಸ್ಸಾಗುತ್ತಿದ್ದಂತೆ ಸೌಂದರ್ಯ ಮಾಸಬಹುದು ಅದರೆ ನಿಮ್ಮಲ್ಲಿರುವ ಇಂಟೆಲಿಜೆನ್ಸ್ ಯಾವತ್ತೂ ಕಡಿಮೆಯಾಗಲಾರದು, ಬುದ್ಧಿವಂತರು ಎಲ್ಲರಿಗೂ ಇಷ್ಟವಾಗುತ್ತಾರೆ ಎಂದು ಸೌಜನ್ಯ ಹೇಳುತ್ತಾರೆ.
ಹಾಗೆಯೇ, ಸಂಬಂಧವೊಂದು ಗಟ್ಟಿಯಾಗಿರಬೇಕೆಂದರೆ ಅಲ್ಲಿ ಎಮೋಶನಲ್ ಅಟ್ಯಾಚ್ಮೆಂಟ್ ಇರಬೇಕು. ನೀವು ಪ್ರೀತಿಸುವ ವ್ಯಕ್ತಿಯ ಜೊತೆ ಭಾವನಾತ್ಮಕ ಕೊಂಡಿ ಕಳಚದಂತೆ ನೋಡಿಕೊಳ್ಳಬೇಕು. ಹಾಗೆಯೇ, ಅಭದ್ರತೆಯ ಭಾವ ಕಾಡುತ್ತಿದ್ದರೆ ಆ ಭಯ, ಆತಂಕವನ್ನು ಮೆಟ್ಟಿ ನಿಲ್ಲಬೇಕು. ಅಭದ್ರತೆಯ ಯೋಚನೆ ಬಂದ ಕೂಡಲೇ ಆದನ್ನು ಹೊಡೆದೋಡಿಸಬೇಕು ಎಂದು ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.
ಇದನ್ನೂ ಓದಿ: ಆರೋಗ್ಯ ಸಿಬ್ಬಂದಿಗಳ ಜತೆ ಫೋಟೋ; ಸಿದ್ದರಾಮಯ್ಯ ನಗೆ ಚಟಾಕಿ ಹೇಗಿತ್ತು ವಿಡಿಯೋ ನೋಡಿ