ಆರೋಗ್ಯ ಸಿಬ್ಬಂದಿಗಳ ಜತೆ ಫೋಟೋ; ಸಿದ್ದರಾಮಯ್ಯ ನಗೆ ಚಟಾಕಿ ಹೇಗಿತ್ತು ವಿಡಿಯೋ ನೋಡಿ

ಆರೋಗ್ಯ ಸಿಬ್ಬಂದಿಯ ಜತೆ ಸಿದ್ದರಾಮಯ್ಯ ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಸಚಿವ ಎಸ್.ಟಿ.ಸೋಮಶೇಖರ್ ಅವರ ಫೋಟೋ ತೆಗಿಯಪ್ಪ ಎಂದು ಅವರು ಹೇಳಿದ್ದು, ಈ ಮಾತಿಗೆ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

TV9kannada Web Team

| Edited By: preethi shettigar

Dec 13, 2021 | 12:31 PM

ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ಅಧಿವೇಶನ ಆರಂಭವಾಗಲಿದ್ದು, ಕಲಾಪಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಯಾಗಿ ಆಗಮಿಸಿದ್ದಾರೆ. ಈ ವೇಳೆ ಆರೋಗ್ಯ ಸಿಬ್ಬಂದಿಯ ಜತೆ ಸಿದ್ದರಾಮಯ್ಯ ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಸಚಿವ ಎಸ್.ಟಿ.ಸೋಮಶೇಖರ್ ಅವರ ಫೋಟೋ ತೆಗಿಯಪ್ಪ ಎಂದು ಅವರು ಹೇಳಿದ್ದು, ಈ ಮಾತಿಗೆ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ಬಳಿಕ ಮಾತನಾಡಿದ ಸಿದ್ದರಾಮಯ್ಯ ಯಾವುದೇ ಕೆಲಸ ಸರ್ಕಾರದಲ್ಲಿ ಆಗುತ್ತಿಲ್ಲ. ಹೀಗಾಗಿ ವಿಷಯಂತರ ಮಾಡಲು ಈ ರೀತಿ ಕಾಯ್ದೆ ಜಾರಿ ಮಾಡ್ತಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಎಳೆದು ತರುತ್ತಿದ್ದಾರೆ. ಎಲ್ಲ ಸಮುದಾಯ ಪರ ಇರುವ ಪಕ್ಷ ಕಾಂಗ್ರೆಸ್. ಶೇಕಡಾ 40 ಕಮಿಷನ್ ವಿಚಾರವನ್ನು ಪ್ರಸ್ತಾಪ ಮಾಡುತ್ತೇವೆ. ಜನರ ಮುಂದೆ ಹೊಗೋಕೆ ಬಿಜೆಪಿಗೆ ಮುಖ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭ; ವಿಧಾನಸಭೆ ಕಲಾಪ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಎಲ್ಲರನ್ನೂ ಕೊಂಡು ಕೊಂಡಿದ್ದಾರಾ?- ಮೈಸೂರಿನಲ್ಲಿ ಎಚ್ ವಿಶ್ವನಾಥ್ ಪ್ರಶ್ನೆ

Follow us on

Click on your DTH Provider to Add TV9 Kannada