ಸಿದ್ದರಾಮಯ್ಯ ಎಲ್ಲರನ್ನೂ ಕೊಂಡು ಕೊಂಡಿದ್ದಾರಾ?- ಮೈಸೂರಿನಲ್ಲಿ ಎಚ್ ವಿಶ್ವನಾಥ್ ಪ್ರಶ್ನೆ

ಸಿದ್ದರಾಮಯ್ಯ ಎಲ್ಲರನ್ನೂ ಕೊಂಡು ಕೊಂಡಿದ್ದಾರಾ?- ಮೈಸೂರಿನಲ್ಲಿ ಎಚ್ ವಿಶ್ವನಾಥ್ ಪ್ರಶ್ನೆ
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

ನಮ್ಮದು ಸಹಾ ದೊಡ್ಡ ಮಠ. ಹಾವೇರಿ, ಕಲಬುರಗಿ, ರಾಯಚೂರು ಸೇರಿ ನಾಲ್ಕು ಕಡೆ ಇದೆ. ನಮ್ಮ ಕಾಗಿನೆಲೆ ಪಕ್ಕಾ ಹಿಂದೂಗಳ ಮಠ. ಮೊದಲ ಸ್ವಾಮಿಗಳು ಪಕ್ಕಾ ಆರ್ಎಸ್ಎಸ್ನವರು. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದವರು.

TV9kannada Web Team

| Edited By: sandhya thejappa

Dec 13, 2021 | 11:40 AM

ಮೈಸೂರು: ಉತ್ತರ ಪ್ರದೇಶದಲ್ಲಿ ಒಂದೂವರೆ ಕೋಟಿ ಜನ ಕುರುಬರು ಇದ್ದಾರೆ. ಕುರುಬ ಜನಾಂಗಕ್ಕೆ ಸೇರಿದ ಅಹಲ್ಯಾಬಾಯಿ ಅವರನ್ನು ಮರೆತಿರುವುದು ಪ್ರಮಾದ ಅಂತ ಎಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಕಾಗಿನೆಲೆ ಸ್ವಾಮಿಗಳ ಜಗದ್ಗುರುಗಳನ್ನು ಮರೆತಿತಿದ್ದೀರಾ? ಯಾಕೆ ಕುರುಬರನ್ನು ನೀವು ಮರೆಯುತ್ತಿದ್ದೀರಾ? ನಿರಂಜನಾಪುರಿ ಪ್ರಸನ್ನ ಸ್ವಾಮಿಗಳನ್ನು ಕರೆದಿಲ್ಲ. ಬಸವರಾಜ ಬೊಮ್ಮಾಯಿ ಸಹಾ ಮರೆತುಬಿಟ್ಟರಾ? ಅಂತ ವಿಶ್ವನಾಥ್ ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ.

ನಮ್ಮದು ಸಹಾ ದೊಡ್ಡ ಮಠ. ಹಾವೇರಿ, ಕಲಬುರಗಿ, ರಾಯಚೂರು ಸೇರಿ ನಾಲ್ಕು ಕಡೆ ಇದೆ. ನಮ್ಮ ಕಾಗಿನೆಲೆ ಪಕ್ಕಾ ಹಿಂದೂಗಳ ಮಠ. ಮೊದಲ ಸ್ವಾಮಿಗಳು ಪಕ್ಕಾ ಆರ್ಎಸ್ಎಸ್ನವರು. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದವರು. ಅಹಲ್ಯಬಾಯಿ ಸಮಾಜದ ಗುರುಗಳನ್ನು ಮರೆತಿದ್ದೀರಾ, ಹಾಗಾದರೆ ನಾನು ಕುರುಬರು ಬೇಡವಾ ನಿಮಗೆ? ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ ವಿಶ್ವನಾಥ್, ಮೋದಿ ಮತ್ತು ಬೊಮ್ಮಾಯಿ ಅವರು ಸರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಇನ್ನು ಇದೇ ವೇಳೆ ಹಿಂದುಳಿದವರು ಬಿಜೆಪಿಗೆ ಹೋಗಬಾರದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಯಾರು? ಎಲ್ಲರನ್ನೂ ಕೊಂಡು ಕೊಂಡಿದ್ದಾರಾ? ಇವರು ಯಾರು ಅದನ್ನು ಹೇಳೋಕೆ. ಇವರಿಂದ ಹೆಚ್ಎಂ ರೇವಣ್ಣ, ನಮ್ಮ ಮನೆ ಹಾಳಾಗಿದೆ. ಮನೆ ಹಾಳು ಮಾಡಿದ್ದು ಬಿಟ್ಟರೆ ಬೇರೆ ಏನು ಮಾಡಿದ್ದೀರಾ? 5 ವರ್ಷ ಸಿಎಂ ಆಗಿದ್ದಾಗ ಯಾರಿಗೆ ಏನು ಮಾಡಲಿಲ್ಲ. ಕುರುಬರಿಗೂ ಏನು ಮಾಡಲಿಲ್ಲ. ಚಾಮುಂಡೇಶ್ವರಿ ಸೋಲಿಗೆ ಎಲ್ಲರ ಮೇಲೆ ಎಗರಾಡುತ್ತಾರೆ. ನಿಮ್ಮ ಅಹಂ ನಿಮ್ಮ ದುರಂಹಕಾರ ನಿಮ್ಮನ್ನು ಸೋಲಿಸಿದ್ದು. ಬೇರೆ ಯಾರು ನಿಮ್ಮನ್ನು ಸೋಲಿಸಿಲ್ಲ ಅಂತ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ

ಯುಕೆಯಲ್ಲಿ ಒಮಿಕ್ರಾನ್ ಅಲೆ ಸಾಧ್ಯತೆ ವರದಿ; ಬೂಸ್ಟರ್ ಡೋಸ್, ಹೆಚ್ಚಿನ ಮುಂಜಾಗ್ರತಾ ಕ್ರಮಕ್ಕೆ ಸೂಚನೆ

Autobiography : ಅಭಿಜ್ಞಾನ ; ‘ನನ್ನಜ್ಜಿ ಹಾಲಿಲ್ಲದ ಮೊಲೆಗಳನ್ನು ಬಾಯಲ್ಲಿಟ್ಟು ಸಮಾಧಾನಿಸುತ್ತಿದ್ದಳು’

Follow us on

Related Stories

Most Read Stories

Click on your DTH Provider to Add TV9 Kannada